ಶಿವಮೊಗ್ಗ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಥಮ ವರ್ಷದಲ್ಲೇ ಅತ್ಯುತ್ತಮ ಸಾಧನೆಗೈದ ಸರ್.ಎಂ. ಪಿಯು ಕಾಲೇಜ್.

news.ashwasurya.in

ಅಶ್ವಸೂರ್ಯ/ಶಿವಮೊಗ್ಗ : 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬಂದಿದ್ದು ರಾಜ್ಯದ ಹೆಸರಾಂತ ಕಾಲೇಜುಗಳಲ್ಲಿ ಒಂದಾದ ಶಿವಮೊಗ್ಗದ ಪ್ರತಿಷ್ಠಿತ ಸರ್ ಎಂ. ವಿ. ಪಿ. ಯು ಸೈನ್ಸ್ ಕಾಲೇಜು ಜಿಲ್ಲೆಗೆ ಅಗ್ರಸ್ಥಾನದಲ್ಲಿದೆ ಕಾಲೇಜಿನ ವಿಧ್ಯಾರ್ಥಿನಿ ಸಿರಿ ಟಿ. ಜಿ 595, ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ 4ನೇ ಸ್ಥಾನ ಗಳಿಸಿ ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಹಾಗೂ ಶಿವಮೊಗ್ಗದ ಸರ್ ಎಂ.ವಿ ಸಮೂಹ ಸಂಸ್ಥೆಯ ಜಿ. ವಿ ನಮ್ರತಾ 589, ಇಬ್ಬನಿ ಬಿ. ಜಿ 588, ಅವನಿ’ ಎನ್. ರಾವ್ 588, ಸಾಹಿತ್ಯ ಎಸ್. ಯು 588, ವಿಧಾತ್ರಿ ಆರ್ ಭೈರಿ 587, ಶಗುನ್ ವಿ ಜಂಬೂರ್ 587 ಅಂಕ ಗಳಿಸಿದ್ದಾರೆ. ಸರ್. ಎಂ ವಿ ಪ. ಪೂ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ನೀಡುವ ಮೂಲಕ ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಬೀತು ಪಡಿಸಿದೆ.

ಪಿಯುಸಿ ಪರೀಕ್ಷೆಯಲ್ಲಿ 395 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ, 322 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಅತ್ಯುತ್ತಮ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.


