
ಬೆಂಗಳೂರು : ಕೊಲೆ ಆರೋಪಿ ರೌಡಿಶೀಟರ್ ಸಂತೋಷ್ ಮಚ್ಚಿನಿಂದ ದಾಳಿ.!
news.ashwasurya.in
ಅಶ್ವಸೂರ್ಯ/ಬೆಂಗಳೂರು:ಬೆಂಗಳೂರಿನಲ್ಲಿ ರೌಡಿಶೀಟರ್ ಸಂತೋಷ್ ಮೇಲೆ ಅಟ್ಯಾಕ್ ನೆಡೆದಿದೆ.! ಹಾಡು ಹಗಲೇ ನಡು ರಸ್ತೆಯಲ್ಲಿ ಯುವಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಭೀಕರ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣಾ ಸರಹದ್ದಿನ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ.

ಮಾರ್ಚ್ 9ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತೋಷ್ ಎಂಬ ಕೊಲೆ ಆರೋಪಿಯ ಮೇಲೆ ಶರತ್ ಮತ್ತು ಆತನ ಗ್ಯಾಂಗ್ ಸ್ಕೆಚ್ ಹಾಕಿ ಕಾದು ಮಾರಕಾಸ್ತ್ರಗಳಿಂದ ಸುಮಾರು 68 ಬಾರಿ ಮನಬಂದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಹಲ್ಲೆ ನಡೆಸಿದ್ದಾರೆ. ಬರೋಬ್ಬರಿ 68 ಬಾರಿ ಮಚ್ಚಿನಿಂದ ಏಟು ತಿಂದಿದ್ದರೂ ಸಂತೋಷ್ ಇನ್ನೂ ಜೀವಂತವಾಗಿದ್ದು ಇದು ಪವಾಡವೇ ಹೌದು ಎಂದು ಆತನ ಆತ್ಮಿಯರು ಮತ್ತು ಕುಟುಂಬದವರು ಹೇಳುತ್ತಿದ್ದಾರೆ. ಹಲ್ಲೆ ನಡೆಸಿದ ಬಳಿಕ ದುಷ್ಕರ್ಮಿಗಳು ಸ್ಥಳದಲ್ಲೇ ಡ್ಯಾನ್ಸ್ ಮಾಡುವ ಮೂಲಕ ತಮ್ಮ ವಿಕೃತಿಯನ್ನು ಪ್ರದರ್ಶಿಸಿದ್ದಾರೆ.

ಆರೋಪಿಗಳ ಪೈಕಿ ಒಬ್ಬನ ಸಹೋದರನ ಹತ್ಯೆಗೆ ಪ್ರತೀಕಾರವಾಗಿ, ಅಗ್ರಹಾರ ದಾಸರಹಳ್ಳಿ ನಿವಾಸಿ ಸಂತೋಷ್ ಮೇಲೆ ಶರತ್ ಮತ್ತು ಆತನ ಸ್ನೇಹಿತರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. 2024ರಲ್ಲಿ ಸಂತೋಷ್ನಿಂದ ಮೋಹನ್ ಎಂಬಾತನ ಕೊಲೆ ನಡೆದಿತ್ತು. ಮಂಡ್ಯದಲ್ಲಿ ಕುಡಿದು ಕೊಳ್ಳೇಗಾಲಕ್ಕೆ ಹೋಗಿ ಗಲಾಟೆ ಮಾಡಿದ್ದ ಸಂತೋಷ್ ಮೋಹನ್ಗೆ ಕಾಲಿನಿಂದ ಒದ್ದು ಕೊಲೆ ಮಾಡಿದ್ದಲ್ಲದೇ, ಬಳಿಕ ಕೊಳ್ಳೆಗಾಲದ ಕೆರೆಯಲ್ಲಿ ಮೃತದೇಹವನ್ನು ಬಿಸಾಡಿ ಹೋಗಿದ್ದ ಎನ್ನಲಾಗಿದೆ.
ಈ ಕುರಿತು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ಯುಡಿಆರ್ ಆಗಿತ್ತು. ನಂತರ ಕೊಲೆ ಪ್ರಕರಣ ದಾಖಲಿಸಿ ಆರೋಪಿ ಸಂತೋಷ್ನನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು. ಈ ಪ್ರಕರಣದಿಂದ ಜೈಲಿನಲ್ಲಿ ನಾಲ್ಕು ವರ್ಷ ಇದ್ದು, ಇತ್ತೀಚೆಗಷ್ಟೇ ಜಾಮೀನು ಮೇಲೆ ಸಂತೋಷ್ ಹೊರ ಬಂದಿದ್ದ ಎನ್ನಲಾಗಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿ ಶರತ್ ಅಂಡ್ ಗ್ಯಾಂಗ್ ನಶೆ ಎನಿಸಿಕೊಂಡು ಸಂತೋಷ್ ಮೇಲೆ ಮನಸ್ಸೊ ಇಚ್ಚೆ ದಾಳಿ ನಡೆಸಿದ್ದಾರೆ. ಪ್ರಸ್ತುತ ಮಾಗಡಿ ರಸ್ತೆ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


