ಬೆಂಗಳೂರು : 40 ವರ್ಷ ಮೀರಿದ ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ.!
news.ashwasurya.in
ಅಶ್ವಸೂರ್ಯ/ಬೆಂಗಳೂರು : 40 ವರ್ಷ ಮೀರಿದ ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ.!
ಬೆಂಗಳೂರು: 40 ವರ್ಷ ಮೀರಿದ ರಾಜ್ಯ ಸರ್ಕಾರಿ ನೌಕರರಿಗೆ ವಾರ್ಷಿಕ ವೈದ್ಯಕೀಯ ತಪಾಸಣೆ (Annual ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)’ ಯಡಿ ರಾಜ್ಯದ 6 ಪ್ರಮುಖ ಖಾಸಗಿ ಆಸ್ಪತ್ರೆಗಳನ್ನು ಅನುಮೋದಿಸಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) ಜುಲೈ 31, 2026ರಂದು ಈ ಕುರಿತು ಅಧಿಕೃತ ಜ್ಞಾಪನ ಪತ್ರವನ್ನು ಹೊರಡಿಸಿದೆ. ಸರ್ಕಾರದ ಆದೇಶದನ್ವಯ (ಆದೇಶ ಸಂಖ್ಯೆ: ಸಿಆಸುಇ 16 ಎಸ್ ಎಂ ಆರ್ 2020) 40 ವರ್ಷ ಮೇಲ್ಪಟ್ಟ ನೌಕರರ ವಾರ್ಷಿಕ ಆರೋಗ್ಯ ತಪಾಸಣೆ ಕೈಗೊಳ್ಳಲು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ (MoU) ಮಾಡಿಕೊಳ್ಳಲಾಗಿದ್ದು, ಸಕ್ಷಮ ಪ್ರಾಧಿಕಾರವು ಈ ಕೆಳಕಂಡ ಆಸ್ಪತ್ರೆಗಳಿಗೆ ಸೇವೆ ಒದಗಿಸಲು ಅಧಿಕೃತ ಅನುಮೋದನೆ ನೀಡಿದೆ.
ಅನುಮೋದನೆಗೊಂಡ ಆಸ್ಪತ್ರೆಗಳ ಪಟ್ಟಿ:
ಅನ್ನಪೂರ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ – ಬೆಳಗಾವಿ
ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ – ಬೆಂಗಳೂರು.

ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ – ಚಿತ್ರದುರ್ಗ.

ಬಸವೇಶ್ವರ ಟೀಚಿಂಗ್ ಮತ್ತು ಜನರಲ್ ಆಸ್ಪತ್ರೆ – ಕಲಬುರಗಿ
ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ – ಶಿವಮೊಗ್ಗ.

ಎಸ್.ಎನ್.ಎಂ.ಸಿ ಹೆಚ್.ಎಸ್.ಕೆ ಆಸ್ಪತ್ರೆ – ಬಾಗಲಕೋಟೆ

ಈ ಕುರಿತು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಉಪ ನಿರ್ದೇಶಕರು ಅಧಿಕೃತ ಸುತ್ತೋಲೆಗೆ ಡಿಜಿಟಲ್ ಸಹಿ ಹಾಕಿದ್ದಾರೆ. ಎಲ್ಲಾ ನೋಂದಾಯಿತ ಆಸ್ಪತ್ರೆಗಳು, ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಿಗೆ ಈ ಜ್ಞಾಪನ ಪತ್ರದ ಪ್ರತಿಯನ್ನು ರವಾನಿಸಲಾಗಿದೆ. ಇದರೊಂದಿಗೆ ಅರ್ಹ ಸರ್ಕಾರಿ ನೌಕರರು ತಮ್ಮ ವಾರ್ಷಿಕ ಆರೋಗ್ಯ ತಪಾಸಣೆಯನ್ನು ಈ ಆಸ್ಪತ್ರೆಗಳಲ್ಲಿ ಯೋಜನೆಯ ನಿಯಮಾನುಸಾರ ಪಡೆಯಬಹುದಾಗಿದೆ.


