Government Employees : ಸರ್ಕಾರಿ ನೌಕರರಿಗೆ ಹೊಸ ರೂಲ್ಸ್.! ಆಗಸ್ಟ್ 20ರಿಂದ APAR, ಆಸ್ತಿ ವಿವರ ಆನ್ಲೈನ್ನಲ್ಲಿ ಸಲ್ಲಿಕೆ ಕಡ್.
news.ashwasurya.in
ಅಶ್ವಸೂರ್ಯ/ಬೆಂಗಳೂರು : ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. 2026ರ ಆಗಸ್ಟ್ 20ರಿಂದ ಎಲ್ಲ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ತಮ್ಮ ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನ ವರದಿ (APAR) ಮತ್ತು ಸ್ಥಿರ ಆಸ್ತಿ ಹಾಗೂ ಹೊಣೆಗಾರಿಕೆ ವಿವರ (IPR) ಗಳನ್ನು ಕಡ್ಡಾಯವಾಗಿ e-PAR Application ಮೂಲಕವೇ ಆನ್ಲೈನ್ನಲ್ಲಿ ಸಲ್ಲಿಸಬೇಕಾಗಿದೆ.
ರಾಜ್ಯ ಸರ್ಕಾರಿ ನೌಕರರು ತಮ್ಮ ವಾರ್ಷಿಕ ಆಸ್ತಿ ಹಾಗೂ ಹೊಣೆಗಾರಿಕೆ ವಿವರಗಳನ್ನು (Annual Property Return – APR) ಕಡ್ಡಾಯವಾಗಿ ಆನ್ಲೈನ್ ಮೂಲಕ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಸುತ್ತೋಲೆ ಹೊರಡಿಸಿದ್ದು, 2025-26ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು 2026ರ ಆಗಸ್ಟ್ 20ರೊಳಗೆ ಸಲ್ಲಿಸಬೇಕು ಎಂದು ತಿಳಿಸಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಅಧಿಕೃತ ಆದೇಶ ಹೊರಡಿಸಿದ್ದು, ಆಸ್ತಿ ಮತ್ತು ಹೊಣೆಗಾರಿಕೆಗಳ ವಾರ್ಷಿಕ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಸಲ್ಲಿಸಲು e-PAR ವೇದಿಕೆಯಲ್ಲಿ ಹೊಸ IPR ಮಾಡ್ಯೂಲ್ ಅನ್ನು ಪರಿಚಯಿಸಲಾಗಿದೆ. ಇದುವರೆಗೆ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು APAR ಮತ್ತು ಆಸ್ತಿ ವಿವರಗಳನ್ನು ಕೈಬರಹದ (ಮ್ಯಾನುಯಲ್) ವಿಧಾನದಲ್ಲಿ ಸಲ್ಲಿಸುತ್ತಿದ್ದರು. ಈ ಪ್ರಕ್ರಿಯೆ ಸಮಯ ತೆಗೆದುಕೊಳ್ಳುವುದರ ಜೊತೆಗೆ ಸಂಕೀರ್ಣವಾಗಿತ್ತು. ಹೊಸ ಡಿಜಿಟಲ್ ವ್ಯವಸ್ಥೆ ಜಾರಿಯಾಗುವುದರಿಂದ ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಹಿತಿಯನ್ನು ಸಲ್ಲಿಸಲು ಸಾಧ್ಯವಾಗಲಿದೆ ಎಂದು ಡಿಪಿಎಆರ್ ತಿಳಿಸಿದೆ.
ಅಧಿಕಾರಿಗಳು ಮತ್ತು ನೌಕರರು ಸಲ್ಲಿಸುವ ಕಾರ್ಯಕ್ಷಮತೆ ವರದಿ ಹಾಗೂ ಆಸ್ತಿ-ಹೊಣೆಗಾರಿಕೆಗಳ ವಿವರಗಳನ್ನು e-PAR ವ್ಯವಸ್ಥೆ ಸ್ವೀಕರಿಸಲಿದ್ದು, ನಂತರ ಸಂಬಂಧಿತ ಇಲಾಖೆಗಳು ಅವುಗಳನ್ನು ಪರಿಶೀಲಿಸಲಿವೆ.

ಈ e-PAR ವ್ಯವಸ್ಥೆಯನ್ನು ಈಗಾಗಲೇ ಅಖಿಲ ಭಾರತ ಸೇವೆಗಳ (AIS) ಅಧಿಕಾರಿಗಳು ಬಳಸುತ್ತಿರುವ ಮಾದರಿಯಲ್ಲೇ ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಅಭಿವೃದ್ಧಿಪಡಿಸಿದೆ. ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS) ಹಾಗೂ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಗಳು ಈ ವೇದಿಕೆಯನ್ನು ಬಳಸುತ್ತಿದ್ದಾರೆ. ಇದೀಗ ಇದೇ ವ್ಯವಸ್ಥೆಯನ್ನು ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೂ ವಿಸ್ತರಿಸಲಾಗಿದೆ.
ಸರ್ಕಾರದ 1994ರ ಸುತ್ತೋಲೆಯಲ್ಲಿ ನಿಗದಿಪಡಿಸಿರುವ ನಮೂನೆಯಲ್ಲಿಯೇ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ, ಇನ್ನು ಮುಂದೆ ಸಲ್ಲಿಕೆ ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ನಡೆಯಲಿದೆ. 2025-26ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ಎಲ್ಲ ಅಧಿಕಾರಿಗಳು ಹಾಗೂ ನೌಕರರು 2026ರ ಆಗಸ್ಟ್ 20ರಿಂದ e-PAR Application ಮೂಲಕ ಸಲ್ಲಿಸಬೇಕು. ನಂತರದ ವರ್ಷಗಳಿಂದ ಪ್ರತಿವರ್ಷಮಾರ್ಚ್ ಅಂತ್ಯದೊಳಗೆ ಇದೇ ಮಾಡ್ಯೂಲ್ ಮೂಲಕ ವಾರ್ಷಿಕ ಆಸ್ತಿ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.


