
ಬೆಂಗಳೂರು : ಡಿಕೆ ಶಿವಕುಮಾರ್ ಡಿನ್ನರ್ ಪಾರ್ಟಿಯಲ್ಲಿ ಸಿಎಂ ಸಿದ್ಧರಾಮಯ್ಯ ಹಾಜರ್.!
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ 6 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾರ್ಚ್ 10, 2026 ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಭರ್ಜರಿ ಡಿನ್ನರ್ ಪಾರ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರು, ಮತ್ತು 120ಕ್ಕೂ ಹೆಚ್ಚು ಶಾಸಕರು/MLCಗಳು ಭಾಗವಹಿಸಿದ್ದರು.
ರಾಜ್ಯ ಕಾಂಗ್ರೆಸ್ನಲ್ಲಿ ಒಗ್ಗಟ್ಟು ಪ್ರದರ್ಶನ ಮತ್ತು ನಾಯಕತ್ವದ ಚರ್ಚೆಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿದಂತಾಗಿದೆ.
ಈ ಭೋಜನ ಕೂಟವು ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ವದಂತಿಗಳಿಗೆ ತೆರೆ ಎಳೆದಿದೆ…..

news.ashwasurya.in
ಅಶ್ವಸೂರ್ಯ/ಬೆಂಗಳೂರು : ಡಿಕೆ ಶಿವಕುಮಾರ್ ಡಿನ್ನರ್ ಪಾರ್ಟಿ, ಸಿಎಂ ಸಹಿತ ಎಲ್ಲ ಶಾಸಕರು ಹಾಜರಿದ್ದದ್ದು ವಿಷೇಶವಾಗಿತ್ತು
ಜೋತೆಗೆ ಔತಣಕೂಟಕ್ಕೆ ಮೆರಗು ನೀಡಿತ್ತು.!
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಕೆಪಿಸಿಸಿ ಅಧ್ಯಕ್ಷರಾಗಿ (KPCC prsident) ನಿನ್ನೆಗೆ ( ಮಾರ್ಚ್,10) 6 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಕಾಂಗ್ರೆಸ್ ಪಕ್ಷದ ಶಾಸಕರಿಗೆ (congress MLA) ಭೋಜನಕೂಟ (Dinner Party) ಆಯೋಜಿಸಲಾಗಿತ್ತು. ರಾಜಕೀಯ ಲೆಕ್ಕಾಚಾರ, ಪವರ್ ಶೇರಿಂಗ್ ಮಾತುಕತೆಗಳ ನಡುವೆ ಡಿಸಿಎಂ ಡಿನ್ನರ್ ಕೂಟ ಸಾಕಷ್ಟು ಕುತೂಹಲ ಮೂಡಿಸಿತ್ತು.

ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಹಾಗೂ ಶಾಸಕರು ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟು ಕೊಡೋ ಬಗ್ಗೆ ಡಿಕೆಶಿ ಸುಳಿವು ಕೊಟ್ಟಿದ್ದರು. ಬಿಜೆಪಿ ಶಾಸಕರಾದ ಎಸ್ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಡಿನ್ನರ್ ಪಾರ್ಟಿಗೆ ಹಾಜರಾಗಿದ್ದರು.
ದಿನೇಶ್ ಗೂಳಿಗೌಡ, ಟಿಬಿ ಜಯಚಂದ್ರ, ಕುಣಿಗಲ್ ರಂಗನಾಥ್, ಪ್ರಿಯಾಂಕ್ ಖರ್ಗೆ, ಡಿ.ಸುಧಾಕರ್, ಶರತ್ ಬಚ್ಚೇಗೌಡ, ಬಸಂತಪ್ಪ, ಎಂ,ಕೃಷ್ಣಪ್ಪ, ಕೆ.ಹೆಚ್.ಮುನಿಯಪ್ಪ, ಎಸಿ ಶ್ರೀನಿವಾಸ್, ಪುಟ್ಟರಂಗಶೆಟ್ಟಿ, ಮಾಗಡಿ ಬಾಲಕೃಷ್ಣ, ಬಿ.ನಾಗೇಂದ್ರ, ಜಿಟಿ ಪಾಟೀಲ್, ಯುಬಿ ಬಣಕಾರ್, ಚನ್ನರಾಜ್ ಹಟ್ಟಿಹೊಳಿ, ಸುನಿಲ್ ಕುಮಾರ್, ಚಂದ್ರಶೇಖರ ಪಾಟೀಲ್, ಎಸ್ಎಸ್ ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಗೌಡ, ಮಂಜುನಾಥ್ ಭಂಡಾರಿ, ಅಶೋಕ್ ರೈ, ಎಆರ್ ಕೃಷ್ಣಮೂರ್ತಿ, ಎನ್ಎಸ್ ಭೋಸರಾಜು, ಬೇಳೂರು ಗೋಪಾಲಕೃಷ್ಣ, ಜಗದೇವ್ ಗುತ್ತೇದಾರ್, ಮಧು ಬಂಗಾರಪ್ಪ ಇತರರು ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

ಸಿಎಂ ಸಿದ್ದರಾಮಯ್ಯ ಜೊತೆ ಡಿನ್ನರ್ ಪಾರ್ಟಿಗೆ ಕೆಎನ್ ರಾಜಣ್ಣ ಆಗಮಿಸಿದ್ದರು. ಸಚಿವರಾದ ಈಶ್ವರ ಖಂಡ್ರೆ, ಚಲುವರಾಯಸ್ವಾಮಿ, ಜಿ.ಪರಮೇಶ್ವರ್, ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ ಕೂಡ ಆಗಮಿಸಿದ್ದರು.ಒಟ್ಟಿನಲ್ಲಿ ಡಿಕೆ ಡಿನ್ನರ್ ಪಾರ್ಟಿ ಕಾಂಗ್ರೆಸ್ ಪಕ್ಷದ ಗಟ್ಟಿತನಕ್ಕೆ (ಒಗ್ಗಟ್ಟಿಗೆ) ವೇದಿಕೆ ಆಯಿತು.


