
ಮುಂಬಯಿ :ಗೆಳೆಯನ ಕಿರುಕುಳ ಡೆತ್ನೋಟ್ ಬರೆದಿಟ್ಟು ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.! ಸಾವಿನ ಪತ್ರದಲ್ಲಿ ಏನಿದೆ.?
news.ashwasurya.in
ಅಶ್ವಸೂರ್ಯ/ಮುಂಬಯಿ : ದಂತ ವೈದ್ಯಕೀಯ ಸ್ನಾತಕೋತ್ತರ ಪದವಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗೆಳೆಯನೊಬ್ಬನ ಮಾನಸಿಕ ಕಿರುಕುಳದಿಂದ ನೊಂದು ಮುಂಬೈನ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.!
24 ವರ್ಷದ ಸ್ತುತಿ ಸೋನ್ವಾನೆ ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದೆ.! ಎಂಡಿಎಸ್ ವಿದ್ಯಾರ್ಥಿನಿಯಾಗಿದ್ದ ಸ್ತುತಿ ಸೋನ್ವಾನೆ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು. ಈಕೆ ಮೋಸ ಮಾಡಿದ್ದಾಳೆಂದು ಗೆಳೆಯ ಯಾವಾಗಲೂ ಅವಮಾನಿಸುತ್ತಿದ್ದನಂತೆ.! ಮನಸ್ಸಿಗೆ ನೋವುಂಟು ಮಾಡುವ ಮಾತುಗಳನ್ನು ಆಡುತ್ತಿದ್ದನಂತೆ. ಇತನ ಮಾತುಗಳಿಂದ ಮನನೊಂದು ಸ್ತುತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾಗಿದೆ.ಆಕೆ ಬರೆದಿಟ್ಟ ಡೆತ್ನೋಟ್ನಲ್ಲಿ ದೆಹಲಿಯ ಹೃದಯವಿದ್ರಾವಕ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ.!?

ಮುಂಬೈನ ಆಂಟೋಪ್ ಹಿಲ್ ಬಳಿ ಸ್ತುತಿ ಸೋನ್ವಾನೆ ತನ್ನ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದಳು.ಕಳೆದ ಫೆಬ್ರವರಿ 9 ರ ಬೆಳಗ್ಗೆ 11 ಗಂಟೆಯವರೆಗೆ ಆಕೆ ತನ್ನ ಕೋಣೆಯಿಂದ ಹೊರಬರದಿದ್ದಾಗ, ಪೋಷಕರು ಕರೆ ಮಾಡಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೋಣೆಯ ಬಾಗಿಲು ಒಡೆದು ನೋಡಿದಾಗ, ಸ್ತುತಿ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಜರು ನೆಡೆಸಿ ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಈಗ ಆಕೆಯ ಗೆಳೆಯನ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆಕೆಯ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು ಪೋಲಿಸ್ ತನಿಖೆಯಿಂದ ಒಂದಷ್ಟು ಸತ್ಯಗಳು ಹೊರ ಬರಬೇಕಿದೆ..

ಅದೇನೇ ಇರಲಿ ಜೀವನದ ಹಾದಿಯಲ್ಲಿ ತನ್ನವರಲ್ಲದ ಮೂರನೇ ವ್ಯಕ್ತಿಯ ಮಾತಿಗೆ ನೊಂದು ಹೆತ್ತವರನ್ನು ಒಡಹುಟ್ಟಿದವರನ್ನು ಜೋತೆಗೆ ಬಂದುಬಳಗವನ್ನು ಮರೆತು ತಮ್ಮ ಸುಂದರವಾದ ಜೀವನವನ್ನು ತಮ್ಮ ಕೈಯಾರ ನಾಶಪಡಿಸಿಕೊಳ್ಳುವುದು ಮಾತ್ರ ದುರಂತವೆ ಹೌದು.! ತನಗಾದ ಹಿಂಸೆ ನೋವಿಗೆ ಹೆತ್ತವರ ಬಳಿ ಹೇಳಿಕೊಂಡಿದ್ದರೆ ಇದಕ್ಕೆ ಪರಿಹಾರ ಸಿಗುತ್ತಿತ್ತು. ನಡು ಹಾದಿಯಲ್ಲಿ ಸಿಕ್ಕ ಅವನನ್ನು ಮರೆತು ಬದುಕು ಕಟ್ಟಿ ಕೊಳ್ಳಬಹುದಿತ್ತು.ಹೆತ್ತು ಹೊತ್ತು ಸಾಕಿ ಸಲುಹಿದ ಅಪ್ಪ ಅಮ್ಮನ ಮರೆತು ಅವರ ಕನಸುಗಳಿಗೆ ತಮ್ಮ ಸಾವಿನೊಂದಿಗೆ ಸಮಾಧಿ ಕಟ್ಟುವುದು ಎಷ್ಟು ಸರಿ.!ಒಂದು ಕ್ಷಣ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವ ಪ್ರತಿಯೊಬ್ಬರೂ ತಮ್ಮ ಹೆತ್ತವರ ಮತ್ತು ಅವರುಗಳು ನಿಮ್ಮ ಮೇಲಿಟ್ಟ ಭರವಸೆ ನಂಬಿಕೆಯನ್ನು ನೆನಪಿಸಿಕೊಳ್ಳಿ ಜೀವನದ ಅಸಲಿ ಸತ್ಯ ತಿಳಿಯುವುದು ಅದು ಬಿಟ್ಟು ಜೀವನದ ಹಾದಿಯಲ್ಲಿ ಸಿಕ್ಕ ಕೆಟ್ಟ ಹುಳಗಳಿಗೊಸ್ಕರ ನಿಮ್ಮ ಬದುಕನ್ನು ಅಂತ್ಯ ಮಾಡಿಕೊಳ್ಳವು ಎಷ್ಟು ಸರಿ….?


