

ಬೆಳಗಾವಿ : ಶ್ರೀಮಂತರೆ ಇವಳ ಟಾರ್ಗೆಟ್.! ಖತರ್ನಾಕ್ ಲೇಡಿ ಕೊನೆಗೂ ಅಂದರ್ ಅದ್ಲು…! ಈಕೆ ಮಾಡಿದ್ದಾದರು ಎನು.?
news.ashwasurya.in
ಅಶ್ವಸೂರ್ಯ/ಬೆಳಗಾವಿ : ಖತರ್ನಾಕ್ಲೇಡಿ ಫ್ಯಾಷನ್ ಡಿಸೈನರ್. ಶ್ರೀಮಂತರೇ ಗಾಳ ಹಾಕಿ ಬಲೆಗೆ ಬಿಳಿಸಿಕೊಳ್ಳುತ್ತಿದ್ದ ಈಕೆ ಹನಿಟ್ರ್ಯಾಪ್ ಬೆಡಗಿ.! ಫೇಸ್ ಬುಕ್ ಮತ್ತು ಇನ್ನಿತರ ಸೋಷಿಯಲ್ ಮಿಡಿಯಾ ಮುಖಾಂತರ ಪರಿಚಯ ಮಾಡಿಕೊಂಡು ಲಾಡ್ಜ್ಗೆ ಕರೆಸಿಕೊಂಡು ಅವರ ಹಣ, ಚಿನ್ನ, ಅಮೂಲ್ಯ ವಸ್ತುಗಳಿಗೆ ಕನ್ನ ಹಾಕುತ್ತಿದ್ದಳು. ಇದೀಗ ಈ ಖತರ್ನಾಕ್ ಲೇಡಿ ಬೆಳಗಾವಿ ಪೊಲೀಸರ ಅತಿಥಿಯಾಗಿದ್ದಾಳೆ.

ಹನಿ ಖೆಡ್ಡಕ್ಕೆ ಕೆಡವಿ ಲೂಟಿ.!
ಬಾಗಲಕೋಟೆ ಮೂಲದವಳಾದ 33 ವರ್ಷದ ದೀಪಾ ಅವಟಗಿ ಬಂಧಿತ ಮಹಿಳೆ. ಫ್ಯಾಷನ್ ಡಿಸೈನರ್ ಆಗಿದ್ದ ಆಕೆಗೆ ಹಣದ ದುರಾಸೆ ನೆತ್ತಿಗೇರಿತ್ತು. ಹೀಗಾಗಿ ಆಕೆ ಸೋಶಿಯಲ್ ಮೀಡಿಯಾ ಮೂಲಕ ಶ್ರೀಮಂತ ವ್ಯಕ್ತಿಗಳ ಪರಿಚಯ ಮಾಡಿಕೊಳ್ಳುತ್ತಿದ್ಲು.
ಫೋನ್ ನಂಬರ್ ಪಡೆದು ಮೆಸೇಜ್ ಮಾಡಿ ಲಾಡ್ಜ್ಗೆ ಕರೆಸಿಕೊಳ್ಳುತ್ತಿದ್ದಳು, ಬಂದ ಗಂಡಸರ ಜೊತೆ ಸಲುಗೆಯಿಂದ ವರ್ತಿಸಿ, ಅವರನ್ನು ಮೊದಲು ಸ್ನಾನಕ್ಕೆ ಕಳುಹಿಸುತ್ತಿದ್ದಳು. ಈ ವೇಳೆ ಅವರ ಬಳಿಯಿದ್ದ ಹಣ, ಚಿನ್ನ, ಬ್ಯಾಗ್ ಹಾಗೂ ಕಾರುಗಳೊಂದಿಗೆ ಎಸ್ಕೇಪ್ ಆಗುತ್ತಿದ್ದಳು.

ಆಪ್ತ ಸ್ನೇಹಿತನೆ ಕಳ್ಳತನಕ್ಕೆ ಸಾಥ್.!
ಇದೀಗ ದೀಪಾಳಿಂದ ಮೋಸ ಹೋಗಿದ್ದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆಕೆಯ ನಿಜ ಬಣ್ಣ ಬಟ್ಟ ಬಯಲಾಗಿದೆ. ದೀಪಾಳ ಈ ಖತರ್ನಾಕ್ ಕೆಲಸಕ್ಕೆ ಆಕೆಯ ಆಪ್ತ ಸ್ನೇಹಿತ ಬೆಳಗಾವಿಯ ಶಿವಾನಂದ ಮಠಪತಿ ಸಾಥ್ ನೀಡುತ್ತಿದ್ದ. ಆಕೆಗೆ ಶ್ರೀಮಂತ ವ್ಯಕ್ತಿಗಳ ಮಾಹಿತಿಯನ್ನು ನೀಡುತ್ತಿದ್ದ. ಆದರೆ, ಅದ್ಯಾವಾಗ ದೀಪಾ ಪೊಲೀಸರ ಬಲೆಗೆ ಬಿದ್ದಿದ್ದಾಳೆ ಎನ್ನುವ ವಿಷಯ ಬಯಲಾಗುತ್ತಿದ್ದಂತೆ ಶಿವಾನಂದ ಎಸ್ಕೇಪ್ ಆಗಿದ್ದಾನೆ.

ಬಂಧಿತಳಿಂದ ಸುಮಾರು 32 ಲಕ್ಷ 86 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಫಾರ್ಚೂನರ್ ಕಾರು, ಒಂದು ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್ಗಳು, ಒಂದು ಟ್ಯಾಬ್, ಒಂದು ಡೋಂಗಲ್, ಮೂರು ಕಾರಿನ ಕೀಗಳು ಹಾಗೂ 14 ಸಾವಿರ ರೂಪಾಯಿ ನಗದು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಆಕೆಯನ್ನು ಇನ್ನಷ್ಟು ವಿಚಾರಣಗೆ ಒಳಪಡಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.


