

ಬಾಗಲಕೋಟೆ : ಬಾಲಕನ ಬಿಲ್ಡಪ್ ಪ್ರಶ್ನಿಸಿದ್ದಕ್ಕೆ ಹೊಳಿ ಹಬ್ಬದ ದಿನವೆ ನೆತ್ತರ ಓಕಳಿ.! ಅಪ್ರಾಪ್ತನಿಂದ ಯುವಕನ ಹತ್ಯೆ.!
news.ashwasurya.in
ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ, ಗೆಳತಿ ಹಾಗೂ ಸ್ನೇಹಿತರ ಮುಂದೆ ಯುವಕನಿಗೆ ಥಳಿಸಿದ್ದಾಗಿ ಅಪ್ರಾಪ್ತನೊಬ್ಬ ಕೊಟ್ಟ ಬಿಲ್ಡಪ್ ಪ್ರಶ್ನಿಸಿದ್ದಕ್ಕೆ ಅಪ್ರಾಪ್ತ ಬಾಲಕನಿಂದಲೆ 19 ವರ್ಷದ ಯುವಕನ ಹತ್ಯೆಯಾಗಿದೆ. ಹೋಳಿ ಹಬ್ಬದ ವೇಳೆ ನಡೆದ ಸಣ್ಣ ಗಲಾಟೆಯ ಬಳಿಕ ನೆತ್ತರ ಓಕಳಿ ಕಾರಣವಾಗಿದೆ…..
ಅಶ್ವಸೂರ್ಯ/ಬಾಗಲಕೋಟೆ : ಗೆಳತಿ ಹಾಗೂ ತನ್ನ ಗೆಳೆಯರ ಎದುರು ಯುವಕನೋರ್ವನಿಗೆ ತಾನು ಥಳಿಸಿದ್ದಾಗಿ ಅಪ್ರಾಪ್ತ ಬಾಲಕನೋರ್ವ ದೊಡ್ಡ ಬಿಲ್ಡಪ್ ಕೊಟ್ಟಿದ್ದನಂತೆ ಅ ನಂತರದಲ್ಲಿ ಯುವಕ ಅಪ್ರಾಪ್ತನನ್ನು ಕರೆದು ಪ್ರಶ್ನಿಸಿದ್ದಾನೆ ಅ ಸಂಧರ್ಭದಲ್ಲಿ 19ರ ಹರೆಯದ ಯುವಕನನ್ನೇ ಅಪ್ರಾಪ್ತ ಬಾಲಕ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.
ಮೃತ ಯುವಕನನ್ನು 19 ವರ್ಷದ ರಾಹುಲ್ ಸಪ್ತಸಾಗರ ಎಂದು ಗುರುತಿಸಲಾಗಿದ್ದು ಹೋಳಿ ಹಬ್ಬದ ಆಚರಣೆ ವೇಳೆ ಇಬ್ಬರ ಮಧ್ಯೆ ಸಣ್ಣ ಕಿರಿಕ್ ನಡೆದಿದ್ದು, ಅಪ್ರಾಪ್ತ ಬಾಲಕ ತಾನು ರಾಹುಲ್ ಸಪ್ತಸಾಗರ್ಗೆ ಥಳಿಸಿದ್ದಾಗಿ ಗೆಳತಿ ಹಾಗೂ ಸ್ನೇಹಿತರ ಮುಂದೆ ಹೇಳಿಕೊಂಡು ಬಿಲ್ಡಪ್ ಕೊಟ್ಟಿದ್ದಾನೆ. ಇದನ್ನು ಆತನ ಸ್ನೇಹಿತರು ಹೋಗಿ ರಾಹುಲ್ ಸಪ್ತಸಾಗರ ಬಳಿ ಹೇಳಿದ್ದಾರೆ. ಹೀಗಾಗಿ ರಾಹುಲ್ ಸಪ್ತಸಾಗರ ಈ ಬಿಲ್ಡಪ್ ಕೊಟ್ಟ ಅಪ್ರಾಪ್ತ ಬಾಲಕನ ಬಳಿ ಈ ವಿಚಾರದ ಬಗ್ಗೆ ಪ್ರಶ್ನೆ ಮಾಡುವುದಕ್ಕಾಗಿ ಆತನನ್ನು ತೇರದಾಳದ ಸಿದ್ದೇಶ್ವರ ದೇವಸ್ಥಾನದ ಸಮೀಪ ಕರೆಸಿ ಕೊಂಡಿದ್ದಾನೆ.

ಬಿಲ್ಡಪ್ ಕೊಟ್ಟಿದ್ದನ್ನ ಪ್ರಶ್ನಿಸಿದ್ದಕ್ಕೆ ಕೊಲೆ ಮಾಡಿಬಿಟ್ಟ ಅಪ್ರಾಪ್ತ.!
ಮಾತುಕತೆ ವೇಳೆ ಇಬ್ಬರ ನಡುವೆ ಮತ್ತೆ ಜಗಳ ನಡೆದಿದ್ದು, ಇಬ್ಬರನ್ನು ಬೇರ್ಪಡಿಸಲು ಸ್ಥಳದಲ್ಲಿದ್ದ ಇನ್ನಿತರ ಸ್ನೇಹಿತರು ಪ್ರಯತ್ನಿಸಿದ್ದಾರೆ ಆದರೆ ಅದು ವಿಫಲವಾಗಿದೆ. ಗಲಾಟೆ ವೇಳೆ ಅರೋಪಿ ಅಪ್ರಾಪ್ತ ಬಾಲಕ ಬೈಕ್ ಕೀ ಚೈನ್ನಲ್ಲಿದ್ದ ಚಾಕುವಿನಿಂದ ರಾಹುಲ್ ಕುತ್ತಿಗೆಯನ್ನು ಇರಿದು ಕೊಲೆ ಮಾಡಿದ್ದಾನೆ. ತೇರದಾಳ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ರಾತ್ರಿ ವೇಳೆಯಲ್ಲಿ ಈ ಘಟನೆ ನಡೆದಿದೆ. ಮೃತ ರಾಹುಲ್ ದ್ವೀತಿಯ ವರ್ಷದ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್, ರಾಹುಲ್ ಮತ್ತು ಆರೋಪಿ ಅಪ್ರಾಪ್ತ ಬಾಲಕ ಪರಿಚಿತರಾಗಿದ್ದರು. ಹೋಳಿ ಬಣ್ಣದಾಟದಲ್ಲಿ ಸಣ್ಣ ವಿಚಾರಕ್ಕೆ ಗಲಾಟೆ ಆಗಿತ್ತು. ನಂತರ ಅಪ್ರಾಪ್ತ ಬಾಲಕ ರಾಹುಲ್ ನನ್ನ ಹೊಡೆದಿರೋದಾಗಿ ತನ್ನ ಗೆಳತಿ ಮತ್ತು & ಗೆಳೆಯರ ಮುಂದೆ ಹೇಳಿಕೊಂಡು ಬಿಲ್ಡಪ್ ಕೊಟ್ಟಿದ್ದನಂತೆ.! ಇದನ್ನ ಸ್ನೇಹಿತರು ರಾಹುಲ್ ಗೆ ಹೇಳಿಸಿದ್ದಾರೆ, ಇದನ್ನ ಪ್ರಶ್ನಿಸುವ ಸಲುವಾಗಿ ಆರೋಪಿಯನ್ನ ರಾಹುಲ್ ಕರೆಯಿಸಿಕೊಂಡಿದ್ದಾನೆ, ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದೆ. ಈ ವೇಳೆ ಅಪ್ರಾಪ್ತ ತನ್ನ ಕೈಯಲ್ಲಿದ್ದ ಬೈಕಿನ ಕೀ ಚೈನ್ನಲ್ಲಿದ್ದ ಚಾಕುವಿನಿಂದ ರಾಹುಲ್ ಕುತ್ತಿಗೆಯನ್ನು ಬಲವಾಗಿ ಇರಿದಿದ್ದಾನೆ. ರಕ್ತ ಸ್ರಾವದಿಂದ ನೆಲಕ್ಕೂರುಳಿದ ರಾಹುಲ್ ನನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ರಾಹುಲ್ ರಸ್ತೆಯ ಮದ್ಯದಲ್ಲಿಯೆ ಸಾವಿನ ಮನೆ ಸೇರಿದ್ದಾನೆ.! ಈ ವಿಚಾರವಾಗಿ ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ ಎಂದ ಎಸ್ಪಿ ಸಿದ್ದಾರ್ಥ ಗೋಯಲ್ ಹೇಳಿಕೆ ನೀಡಿದ್ದರು ಆರೋಪಿ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.


