

ದಾವಣಗೆರೆ : ಉದ್ಯಮಿಗೆ ಹನಿ ಖೆಡ್ಡಕ್ಕೆ ಕೆಡವಲು ನರ್ಸ್ ಫ್ಲಾನ್.! 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಹನಿ ಗ್ಯಾಂಗ್ ಅಂದರ್.!ಆರೇಸ್ಟ್ ಆಗಿದ್ದು ಹೇಗೆ.?
ಘಟನೆ ಹಿನ್ನೆಲೆ
ಮೊದಲು ಉದ್ಯಮಿ ಪ್ರಭು ಎನ್ನುವರನ್ನು ಪರಿಚಯ ಮಾಡಿಕೊಂಡ ನರ್ಸ್ ಸುಷ್ಮಿತಾ, ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಪರಿಚಯ ಮಾಡಿಕೊಂಡ ಬಳಿಕ ಸುಷ್ಮಿಯಾ, ಒಂದು ತಿಂಗಳ ಹಿಂದೆ ಮೊದಲ ಬಾರಿಗೆ ಪ್ರಭು ಅವರನ್ನ ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ಸರ್ವೀಸ್ ಅಪಾರ್ಟ್ಮೆಂಟ್ ಗೆ ಕರೆಯಿಸಿಕೊಂಡಿದ್ದಳು. ಹೀಗೆ ಹಲವು ಬಾರಿ ಸರ್ವಿಸ್ ಅಪಾರ್ಟ್ಮೆಂಟ್ ನಲ್ಲಿ ಇಬ್ಬರ ಭೇಟಿ ನಡೆಯುತ್ತಿತ್ತು…

news.ashwasurya.in
ಅಶ್ವಸೂರ್ಯ/ದಾವಣಗೆರೆ : ಉದ್ಯಮಿ ಪ್ರಭು ಬಳಿ ಹತ್ತಿರವಾಗಿದ್ದ ಸ್ಟಾಫ್ ನರ್ಸ್ ಒಬ್ಬಳು ಕಷ್ಟ ಇದೆ ಎಂದು ಹಣಕಾಸಿನ ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಆ ಬಳಿಕ ಹನಿಟ್ರ್ಯಾಪ್ ಮಾಡಲು ದೊಡ್ಡದೊಂದು ಫ್ಲಾನ್ ಮಾಡಿದ್ದಳು.
ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣ (Honeytrap Case) ಮತ್ತೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸದ್ದು ಮಾಡಿದೆ. ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹನಿಟ್ರ್ಯಾಪ್ ಕೇಸ್ ದಾಖಲಾಗಿದೆ. ಕಷ್ಟ ಅಂತಾ ಹೇಳಿಕೊಂಡು ಉದ್ಯಮಿ ಬಳಿ ಸಹಾಯ ಕೋರಿ ಬಂದ ಸ್ಟಾಫ್ ನರ್ಸ್ ಒಬ್ಬಳು 66 ವರ್ಷದ ಉದ್ಯಮಿ ಪ್ರಭು ಎಂಬುವವರಿಗೆ ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣ ವರದಿಯಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ವಿದ್ಯಾನಗರ ಠಾಣೆ ಪೊಲೀಸರು ಸ್ಟಾಫ್ ನರ್ಸ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಏನಿದು ಉದ್ಯಮಿ ಹನಿ ಟ್ರ್ಯಾಪ್ ಪ್ರಕರಣ.!?

ದಾವಣಗೆರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 27 ವರ್ಷದ ಸುಷ್ಮಿತಾ ಎನ್ನುವ ಮಹಿಳೆ, ರಾಜಕೀಯ ಪಕ್ಷವೊಂದರ ಜೊತೆ ಗುರುತಿಸಿಕೊಂಡಿದ್ದ 66 ವರ್ಷದ ಪ್ರಭು ಎಂಬ ಉದ್ಯಮಿಯನ್ನು ಎರಡು ತಿಂಗಳ ಹಿಂದೆ ಸ್ಟಾಫ್ ನರ್ಸ್ ಸುಷ್ಮಿತಾ ಪರಿಚಯ ಮಾಡಿಕೊಂಡಿದ್ದಳು. ಉದ್ಯಮಿಯ ಪರಿಚಯಸ್ಥ ಮಹಿಳೆ ಮೂಲಕ ಸ್ಟಾಫ್ ನರ್ಸ್ ಸುಷ್ಮಿತಾ ಉದ್ಯಮಿ ತೀರ ಹತ್ತಿರವಾಗಿದ್ದಳಂತೆ.
ಪರಿಚಯವಾಗುತ್ತಿದ್ದಂತೆ ಸಹಾಯ ಮಾಡುವಂತೆ ಸುಷ್ಮಿತಾ ಉದ್ಯಮಿಯನ್ನು ಕೇಳಿಕೊಂಡಿದ್ದಾಳೆ.
ಉದ್ಯಮಿ ಬಳಿ ಹತ್ತಿರವಾಗಿದ್ದ ಸ್ಟಾಫ್ ನರ್ಸ್ ಸುಷ್ಮಿತಾ, ಮಕ್ಕಳ ಫೀಸ್ ಕಟ್ಟಲು ಹಣಕಾಸಿನ ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಆ ಬಳಿಕ ಹನಿಟ್ರ್ಯಾಪ್ ಮಾಡಲು ಖೆಡ್ಡಾ ತೋಡಿದ್ದ ಸುಷ್ಮಿತಾ, ಕಳೆದ ಮಾರ್ಚ್ 1ರಂದು ಉದ್ಯಮಿಯನ್ನು ಸರ್ವೀಸ್ ಅಪಾರ್ಟ್ಮೆಂಟ್ಗೆ ಕರೆಸಿಕೊಂಡಿದ್ದಳು. ಈ ವೇಳೆ ತನ್ನ ಜೊತೆ ಸಂಜನಾ ಎಂಬ ಮತ್ತೋರ್ವ ಮಹಿಳೆ ಕರೆದುಕೊಂಡು ಬಂದಿದ್ದಳು.
ಮೊಬೈಲ್ ಹಿಡಿದು ರೂಮ್ ಗೆ ಎಂಟ್ರಿ
ಈ ವೇಳೆ ಅಪಾರ್ಟ್ಮೆಂಟ್ನ ರೂಂನಲ್ಲಿ ಉದ್ಯಮಿ ಮತ್ತು ಮಹಿಳೆ ಇಬ್ಬರೇ ಇದ್ದಾಗ ಬೆಕ್ಕಿನ ಕಣ್ಣು ಕೃಷ್ಣ, ರಾಹುಲ್ ಎಂಬ ಇಬ್ಬರು ಎಂಟ್ರಿ ಕೊಟ್ಟಿದ್ದಾರೆ. ಕೈಯಲ್ಲಿ ಮೊಬೈಲ್ ಹಿಡಿದು ರೂಮ್ಗೆ ಬಂದಿದ್ದಾರೆ. ಬಳಿಕ ರಾಜಿ ಪಂಚಾಯತಿ ಮಾಡಿಸುವ ನೆಪದಲ್ಲಿ ಮತ್ತೋರ್ವ ಆರೋಪಿ ಚನ್ನಬಸಪ್ಪ ಕೂಡ ಸ್ಥಳಕ್ಕೆ ಆಗಮಿಸಿದ್ದಾನೆ.

ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ
ಮಹಿಳೆಯ ಜೊತೆ ರೂಮ್ನಲ್ಲಿದ್ದಾಗ ಉದ್ಯಮಿಯನ್ನು ಲಾಕ್ ಮಾಡಿದ ಆರೋಪಿಗಳು 25 ಲಕ್ಷ ನೀಡದಿದ್ದರೆ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಎರಡು ದಿನಗಳಲ್ಲಿ 12 ಲಕ್ಷ ನೀಡುತ್ತೇನೆ ಎಂದು ಉದ್ಯಮಿ ತೆರಳಿದ್ದರು.
ಅ ನಂತರದಲ್ಲಿ ಪೊಲೀಸರಿಂದ ಆರೋಪಿಗಳು ಲಾಕ್
ಮಾರ್ಚ್ 3ರಂದು ಹಣ ನೀಡುವುದಾಗಿ ಉದ್ಯಮಿ ದಾವಣಗೆರೆಯ ಆಂಜನೇಯ ನಗರ ಬಡಾವಣೆಗೆ ಆರೋಪಿಗಳನ್ನು ಕರೆಸಿಕೊಂಡಿದ್ದರು. ಉದ್ಯಮಿ ಬಳಿ ಒಂದು ಲಕ್ಷ ಹಣ ಪಡೆದು ಎಸ್ಕೇಪ್ ಆಗುತ್ತಿದ್ದ ವೇಳೆ ಪೊಲೀಸರು ನಾಲ್ವರು ಆರೋಪಿಗಳು ಖೆಡ್ಡಕ್ಕೆ ಕೆಡವಿಕೊಂಡಿದ್ದಾರೆ. ಬೆಕ್ಕಿನ ಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಸೇರಿ ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡಿದ ಸ್ಟಾಫ್ ನರ್ಸ್ ಸುಷ್ಮಿತಾಳನ್ನು ದಾವಣಗೆರೆ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಕಿಲಾಡಿ ಲೇಡಿ ಸಂಜನಾ ಎಸ್ಕೇಪ್ ಆಗಿದ್ದು, ಆಕೆಗಾಗಿ ಪೊಲೀಸರು ಬಲೆ ಬೀಸಿದ್ದು ಆಕೆಯ ಬಂಧನದ ನಂತರ ಮತ್ತಷ್ಟು ಮಾಹಿತಿ ಬೆಳಕಿಗೆ ಬರುವ ಸಾಧ್ಯತೆ ಇದೆ.


