
ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಹರಿದ ನೆತ್ತರು.! ರೌಡಿಶೀಟರ್ ಪವನ್ ಭೀಕರ ಹತ್ಯೆ.! ಹೆತ್ತ ತಾಯಿಯ ಎದುರಲ್ಲೇ ಉಸಿರು ಚೆಲ್ಲಿದ ಮಗ.!

news.ashwasurya.in
ಅಶ್ವಸೂರ್ಯ/ಬೆಂಗಳೂರು : ಹೆತ್ತ ತಾಯಿ ಎದುರೇ ಆಕೆಯ ಮಗನನ್ನು ಕೊಚ್ಚಿ ಕೊಂದ ಹಂತಕರು.ಪ್ರತ್ಯಕ್ಷ ಸಾಕ್ಷಿಗಳ ಮಾಹಿತಿ ಪ್ರಕಾರ, ಮೂರು ಬೈಕ್ಗಳಲ್ಲಿ ಬಂದಿದ್ದ ಆರು ಮಂದಿ ಹಂತಕರು ಹೆಲ್ಮೆಟ್ ಧರಿಸಿಕೊಂಡು ಪವನ್ ಕುಮಾರ್ ಮನೆ ಬಳಿ ಹೊಂಚು ಹಾಕಿ ಕುಳಿತಿದ್ದರು. ಪವನ್ ಮನೆಯ ಹತ್ತಿರ ಬಂದು ಆತನ ತಾಯಿಯ ಜೊತೆಯಲ್ಲಿ ನಿಂತಿದ್ದಾಗ ಆರೋಪಿಗಳು ಅವನ ಮೇಲೆ ಏಕಾಏಕಿ ದಾಳಿಮಾಡಿ ಮನಬಂದತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹೆತ್ತ ಅಮ್ಮನ ಕಣ್ಣೇದುರಲ್ಲೆ ಪವನ್ ಉಸಿರು ಚೆಲ್ಲಿದ್ದಾನೆ.! ಹೆತ್ತ ಮಗನನ್ನು ರಕ್ಷಿಸಲು ಸಹಾಯಕ್ಕಾಗಿ ತಾಯಿ ಕೋಮಲ ಗೋಗರೆದ ದೃಶ್ಯ ಮನಕಲಕುವಂತಿತ್ತು.
ಮರ್ಡರ್ ಕೇಸ್ ನಲ್ಲಿ ಜೈಲಿನಲ್ಲಿದ್ದು ಬಂದಿದ್ದ ಪವನ್ ನ
ಹತ್ಯೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಪವನ್ ಕುಮಾರ್ ಹಿಂದೆ ಮರ್ಡರ್ ಪ್ರಕರಣವೊಂದರಲ್ಲಿ A5 ಆರೋಪಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದನಂತೆ. ಕಳೆದ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಗೊಂಡು ಮನೆಗೆ ಮರಳಿದ್ದನು. ಮಗ ಇನ್ನು ಕೆಟ್ಟ ಹಾದಿ ಹಿಡಿಯೋದು ಬೇಡ. ಒಳ್ಳೆಯವನಾಗಿ ಬದಲಾಗಲಿ ಎಂಬ ಕಾರಣಕ್ಕೆ ಒಂದೂವರೆ ತಿಂಗಳ ಹಿಂದಷ್ಟೇ ಮನೆ ಸಮೀಪವೇ ಕುಟುಂಬದವರು ಅವನಿಗೆ ಬೇಕರಿ ಉದ್ಯಮ ನಡೆಸಲು ಅಂಗಡಿ ತೆರೆದು ಕೊಟ್ಟಿದ್ದರು.

ಕಪಿಲ್ ಮರ್ಡರ್ ರಿವೆಂಜ್ಗೆ ನಡೀತಾ ಪವನ್ ಮರ್ಡರ್..?
ಹೌದು ಕಳೆದ ಮೂರು ವರ್ಷದ ಹಿಂದೆ ಕಪಿಲ ಎಂಬಾತನ ಹತ್ಯೆ ನಡೆದಿತ್ತು. ಅದರ ರಿವೆಂಜ್ ಗಾಗಿ ಅದೇ ಮಾದರಿಯಲ್ಲಿ ಪವನ್ ಕುಮಾರ್ ಕೊಲೆ ನಡೆಯಿತಾ ಎಂಬ ಅನುಮಾನ ಬಲವಾಗಿದೆ. ಜುಲೈ 11 ,2023 ರಲ್ಲಿ ಕಪಿಲ ಎಂಬಾತನ ಭೀಕರ ಹತ್ಯೆ ನಡೆದಿತ್ತು. ಡಿಜೆ ಹಳ್ಳಿ ಬಳಿ ಕಪಿಲನನ್ನು ಆರೋಪಿಗಳು ಮರ್ಡರ್ ಮಾಡಿದ್ದರು. ಅದೇ ಕೇಸ್ ನಲ್ಲಿ ಮೃತ ಪವನ್ ಕುಮಾರ್ A5 ಆರೋಪಿ ಆಗಿದ್ದ. ಕಪಿಲನ ಕೊಲೆ ಮಾಡಿದಾಗಲೂ ಮುಖ ತೋರಿಸದೆ ಹೆಲ್ಮೆಟ್ ಹಾಕಿಕೊಂಡು ಬಂದು 6 ಜನ ಕೊಚ್ಚಿ ಕೊಲೆ ಮಾಡಿದ್ರು.ಅದೇ ಮಾದರಿಯಲ್ಲಿ ಬಂದು ಪವನ್ ಕುಮಾರ್ನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಕಪಿಲನ ತಮ್ಮ ಪ್ರೇಮ್ ಸೇರಿದಂತೆ ಹಲವರ ಮೇಲೆ ಅನುಮಾನವಿದ್ದು,ಪ್ರೇಮ್ ಫಾಲೋ ಮಾಡ್ತಿದ್ದಾನೆ ಎಂದು ತಾಯಿ ಬಳಿ ಪವನ್ ಹೇಳಿಕೊಂಡಿದ್ದ.

ಆದರೆ ಹಳೆಯ ವೈಷಮ್ಯಗಳು ಈ ಕೊಲೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. “ಪ್ರೇಮ್ ಎಂಬಾತ ನನ್ನನ್ನು ಹೊಡೆಸಲು ಯತ್ನಿಸುತ್ತಿದ್ದಾನೆ” ಎಂದು ಪವನ್ ಕುಮಾರ್ ಕೆಲವು ದಿನಗಳ ಹಿಂದೆ ತಾಯಿಯ ಬಳಿ ಆತಂಕ ವ್ಯಕ್ತಪಡಿಸಿದ್ದನಂತೆ. ಇದೇ ವೈಷಮ್ಯವೇ ಕೊನೆಗೂ ಅವನ ಜೀವಕ್ಕೆ ಕುತ್ತು ತಂದಿದೆಯೇ ಎಂಬ ದಿಕ್ಕಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಗರದಲ್ಲಿ ಮತ್ತೆ ರೌಡಿಶೀಟರ್ ಹತ್ಯೆ ನಡೆದಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿದೆ.


