ರಾಜಸ್ಥಾನ : ಮದುವೆಗೆ ಒಂದೆರಡು ಗಂಟೆ ಬಾಕಿ ಇರುವಾಗ ಆತ್ಮಹತ್ಯೆಗೆ ಶರಣಾದ ಸಹೋದರಿಯರು.! ಹಸೆಮಣೆ ಏರಬೇಕಾದವರು ಚಿತೆ ಏರಿ ಮಲಗಿದರು.!
news.ashwasurya.in
ಅಶ್ವಸೂರ್ಯ/ರಾಜಸ್ಥಾನ : ಇನ್ನೇನು ಸಹೋದರಿಯರ ಮದುವೆ ಆಗೆ ಹೊಯ್ತು ಎಂದು ಕುಟುಂಬದವರರು ಅಂದು ಕೊಳ್ಳುವ ಹೊತ್ತಿಗೆ. ಕೆಲವೇ ಗಂಟೆಯ ಮೊದಲು ಸಹೋದರಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮೃತರನ್ನು ಮನೈ ಗ್ರಾಮದ ಶೋಭಾ (25) ಮತ್ತು ವಿಮಲಾ (23) ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇಶಾದ್ಯಂತ ಸಂಚಲ ಮೂಡಿಸಿದ ಬೆನ್ನಲ್ಲೇ ಇದೀಗ ರಾಜಸ್ಥಾನದಲ್ಲಿ ಅಕ್ಕ-ತಂಗಿಯರಿಬ್ಬರು ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜೋಧಾಪುರದ ಈ ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಮನೈ ಗ್ರಾಮದ ಶೋಭಾ (25) ಮತ್ತು ವಿಮಲಾ (23) ಎಂದು ಗುರುತಿಸಲಾಗಿದೆ ದೀಪ್ ಸಿಂಗ್ ಎನ್ನುವವರ ಪುತ್ರಿಯರಾದ ಇವರು ಶಿಕ್ಷಕಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದರಿಂದ ಮದುವೆಯ ಸಂಭ್ರಮದಲ್ಲಿದ್ದ ಮನೆ ಈಗ ಶೋಕ ಸಾಗರದಲ್ಲಿ ಮುಳುಗಿದೆ.
ಶೋಭಾ ಮತ್ತು ವಿಮಲಾ ಅವರ ಮದುವೆಗೆ ಮನೆಯವರು ಸಿದ್ಧತೆ ಮಾಡಿಕೊಳ್ಳುತ್ತಿರುವ ಮಧ್ಯೆ ಇವರು ಮೃತಪಟ್ಟಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.
ಘಟನೆ ವಿವರ :
ಫೆಬ್ರವರಿ 21ರಂದು ಕುಟುಂಬಸ್ಥರು ಸಹೋದರಿಯರ ಮದುವೆಯನ್ನು ನಿಗದಿಪಡಿಸಿದ್ದರು. ಫೆಬ್ರವರಿ 20ರ ಮಧ್ಯರಾತ್ರಿ ತನಕ ಮನೆಯಲ್ಲಿ ಮದುವೆ ಪೂರ್ವ ಶಾಸ್ತ್ರ ನೆರವೇರಿತ್ತು. ಅದಾದ ಬಳಿಕ ಇಬ್ಬರು ಮದುಮಕ್ಕಳು ಮಲಗಲೆಂದು ರೂಮಿಗೆ ತೆರಳಿದ್ದಾರೆ.ನಂತರ ಅದೇನಾಯಿತೊ ಗೋತ್ತಿಲ್ಲ ಸಾವಿಗೆ ಶರಣಾಗಿದ್ದರು. ಮನೆಯವರು ಬೆಳಗ್ಗೆ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪೊಲೀಸರ ಹೇಳಿದ್ದೇನು?
ʼಮುಂಜಾನೆ 4 ಗಂಟೆ ಸುಮಾರಿಗೆ ಶೋಭಾ ಮತ್ತು ವಿಮಲಾ ಅವರ ಆರೋಗ್ಯ ಹದಗೆಡಲು ಆರಂಭವಾಯ್ತು. ಇದರಿಂದ ಮನೆಯವರು ಗಾಬರಿಯಾಗಿ ಅವರನ್ನು ಜೋಧಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಹೀಗಾಗಿ ಮೃತದೇಹವನ್ನು ಮನೆಗೆ ತರಲಾಯಿತು. ಇದೀಗ ಸಹೋದರಿಯರ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿತ್ತುʼ ಎಂದು ತನಿಖೆ ಕೈಗೆತ್ತಿಕೊಂಡಿರುವ ಎಡಿಸಿಪಿ ರೋಷನ್ ಮೀನಾ ಹೇಳಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಮನೆಯವರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದರು. ಬಳಿಕ ಅಸಹಜ ಸಾವಿನ ಹಿನ್ನೆಲೆಯಲ್ಲಿ ಮೃತದೇಹಗಳನ್ನು ಪೋಸ್ಟ್ ಮಾರ್ಟಂಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಶವ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಸಹೋದರಿಯರ ಶವವನ್ನು ಹಸ್ತಾಂತರಿಸಲಾಯಿತು. ಪ್ರಾಥಮಿಕ ತನಿಖೆಯ ಪ್ರಕಾರ ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಾಗ್ಯೂ ಸಾವಿಗೆ ನಿಜವಾದ ಕಾರಣ ಪೋಸ್ಟ್ ಮಾರ್ಟಂ ವರದಿ ಕೈ ಸೇರಿದ ಬಳಿಕವಷ್ಟೇ ಗೊತ್ತಾಗಲಿದೆ. ಸ್ಥಳದಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ಹೀಗಾಗಿ ನೈಜ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ಸಾಕಷ್ಟು ಗೊಂದಲವಿದ್ದು ಅನುಮಾನಗಳು ಹರಿದಾಡುತ್ತಿವೆ.
ಸದ್ಯ ಸಹೋದರಿಯ ಸಾವಿನ ಬಗ್ಗೆ ನಾನಾ ರೀತಿಯ ಅನುಮಾನ ಹುಟ್ಟಿಕೊಂಡಿದೆ. ಪೊಲೀಸರಿಗೆ ತಿಳಿಸದೆ ಮನೆಯವರು ತರಾತುರಿಯಿಂದ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದು ಏಕೆ ಎನ್ನುವ ಪ್ರಶ್ನೆಯೂ ಕಾಡುತ್ತಿದೆ. ತಂದೆಯ ಕಡೆಯ ಸಂಬಂಧಿಕರು ಈ ಮದುವೆಗೆ ಒತ್ತಡ ಹೇರಿದ್ದರು. ಸಹೋದರಿಯರಿಗೆ ಈ ಮದುವೆ ಇಷ್ಟವಿರಲಿಲ್ಲವಂತೆ.! ಎಂದು ಕೆಲವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಹಸೆ ಎರಿ ಸಪ್ತಪದಿ ತುಳಿದು ಗಂಡನ ಮನೆ ಸೇರಬೇಕಾದ ಇಬ್ಬರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿ ಮಸಣ ಸೇರಿದ್ದಾರೆ…ಇಲ್ಲಿ ಸಾವಿಗೆ ಕಾರಣವನ್ನು ಹುಡುಕಲು ಹೋರಟರೆ ಸಾಕಷ್ಟು ಅನುಮಾನಗಳು ಸುಳಿದಾಡುತ್ತವೆ ಇನ್ನೂ ಪೊಲೀಸರ ತನಿಖೆ ಮತ್ತು ಶವ ಪರೀಕ್ಷೆಯ ರಿಪೋರ್ಟ್ ಪೊಲೀಸರು ಕೈಸೇರಿದ ಮೇಲೆಯೆ ಈ ಸಹೋದರಿಯರ ಆತ್ಮಹತ್ಯೆಯ ಅಸಲಿ ಸತ್ಯ ಬಯಲಾಗಲಿದೆ…


