AsiaCup Rising Stars: ಫೈನಲ್‌ನಲ್ಲಿ ಬಾಂಗ್ಲಾವನ್ನು ಬಗ್ಗುಬಡಿದು ಕಪ್ ಗೆದ್ದ ಭಾರತ, ಸತತ 2ನೇ ಬಾರಿಗೆ ಚಾಂಪಿಯನ್!
news.ashwasurya.in
ಅಶ್ವಸೂರ್ಯ/ದೆಹಲಿ : ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026ರ ಫೈನಲ್‌ನಲ್ಲಿ ಭಾರತ ಎ ತಂಡವು ಬಾಂಗ್ಲಾದೇಶ ಎ ತಂಡವನ್ನು 46 ರನ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿದೆ. ಬಾಂಗ್ಲಾದೇಶ ಸತತ ಎರಡನೇ ಬಾರಿಗೆ ರನ್ನರ್ ಅಪ್ ಸ್ಥಾನ ಗಳಿಸಿದೆ.
ಭಾರತೀಯ ಮಹಿಳಾ ಎ ತಂಡ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026ರ ಫೈನಲ್‌ನಲ್ಲಿ ಬಾಂಗ್ಲಾದೇಶ ಎ ತಂಡವನ್ನು 46 ರನ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿದೆ. ಬಾಂಗ್ಲಾದೇಶ ಸತತ ಎರಡನೇ ಬಾರಿಗೆ ರನ್ನರ್ ಅಪ್ ಸ್ಥಾನ ಗಳಿಸಿದೆ. ತೇಜಲ್ ಹಸಬ್ನಿಸ್ ಅವರ 51 ರನ್‌ಗಳ ಇನ್ನಿಂಗ್ಸ್ ಭಾರತವನ್ನು 134ಕ್ಕೆ ತಲುಪಿಸಿತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ 88 ರನ್‌ಗಳಿಗೆ ಆಲೌಟ್ ಆಯಿತು. ಪ್ರೇಮಾ ರಾವತ್, ಸೋನಿಯಾ ಮೆಂಧಿಯಾ ಮತ್ತು ತನುಜಾ ಕನ್ವರ್ ಅವರ ಮಾರಕ ಬೌಲಿಂಗ್ ಪಂದ್ಯವನ್ನು ಭಾರತವನ್ನು ಗೆಲುವಿನ ಹಾದಿಗೆ ತಲುಪಿಸಿತು..

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಕಳಪೆ ಆರಂಭ ಪಡೆಯಿತು. ಆರಂಭದಲ್ಲೆ ವಿಕೆಟ್‌ಗಳನ್ನು ಬಹು ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ತೇಜಲ್ ಹಸಬ್ನಿಸ್ 34 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡಂತೆ ನಿರ್ಣಾಯಕ 51 ರನ್ ಗಳಿಸಿ ಜವಾಬ್ದಾರಿ ವಹಿಸಿಕೊಂಡರು. ಅವರು ನಾಯಕಿ ರಾಧಾ ಯಾದವ್ ಅವರೊಂದಿಗೆ ಐದನೇ ವಿಕೆಟ್‌ಗೆ ನಿರ್ಣಾಯಕ ಪಾಲುದಾರಿಕೆಯನ್ನು ನೀಡಿ ತಂಡವನ್ನು ಸ್ಪರ್ಧಾತ್ಮಕ 134/7ಕ್ಕೆ ಕೊಂಡೊಯ್ದರು. ಬಾಂಗ್ಲಾದೇಶದ ನಾಯಕಿ ಫಹಿಮಾ ಖಾತುನ್ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ತಂಡಕ್ಕೆ ಸ್ಫೂರ್ತಿಯಾಗಿ ಗೆಲುವಿನ ಹಾದಿಗೆ ಕೊಡೊಯ್ದಿದ್ದರು ಆದರೆ ಬಾಂಗ್ಲಾದೇಶದ ಯಾವೊಬ್ಬ ಆಟಗಾರ್ತಿಯು ಗೆಲುವಿಗೆ ಬೇಕಾದ ರನ್‌ಗಳಿಸಲು ವಿಫಲರಾದರು ಭಾರತೀಯರ ಬೌಲಿಂಗ್ ದಾಳಿಗೆ ತತ್ತರಿಸಿ ಹೊದರು..


