

ಚಿಕ್ಕಮಗಳೂರು: ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆ ಪತ್ತೆ! ಡೇವಿಡ್ ಎಂಬುವವನ ಜೊತೆಗೆ ಮಹಿಳೆ ಸಿಕ್ಕಿದ್ದು ಎಲ್ಲಿ ಗೊತ್ತಾ.!?
news.ashwasurya.in

ನಮ್ಮ ವರದಿಯಂತೆ ಮಹಿಳೆಯ ನಾಪತ್ತೆ ಪ್ರಕರಣ ಬಯಲಾಗಿದೆ.ಅವಳ ನಾಟಕ ಎನೆಂದು ತಿಳಿಯಬೇಕಿದೆ.?ನಾಪತ್ತೆ ಆಗಿದ್ದ ಮಹಿಳೆ ಡೆವಿಡ್ ಎಂಬುವವನ ಜೋತೆಗೆ ಸಿಕ್ಕಿಬಿದ್ದಿದ್ದಾಳೆ.!
ಚಿಕ್ಕಮಗಳೂರು ಬಳಿ ಕುಣಿಗಲ್ ಮೂಲದ ಮಹಿಳೆ ಡೇವಿಡ್ ಎಂಬ ಯುವಕನ ಜೊತೆಗೆ ಸಿಕ್ಕಿಬಿದ್ದಿದ್ದಾರೆ.! ಬೇಲೂರು ಪೊಲೀಸರು ಮಹಿಳೆ ಮತ್ತು ಡೇವಿಡ್ನನ್ನ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
30 ಲಕ್ಷ ರೂಪಾಯಿ ಒಡವೆ ಧರಿಸಿ ನಿಗೂಢವಾಗಿ ನಾಪತ್ತೆಯಾಗಿದ್ದು ರಾಜ್ಯದಲ್ಲೇಡೆ ಸುದ್ದಿಯಾಗಿತ್ತು.
ಅಶ್ವಸೂರ್ಯ/ಚಿಕ್ಕಮಗಳೂರು : ಸುಮಾರು 30 ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನಾಭರಣ ಧರಿಸಿ ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿಗೂಢ ರೀತಿಯಲ್ಲಿ ಕಣ್ಮರೆಯಾಗಿ ಪೊಲೀಸ್ ಇಲಾಖೆಯ ನಿದ್ದೆಗೇಡಿಸಿದ್ದ ಮಹಿಳೆ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಗುರುವಾರ ರಾತ್ರಿ ನಾಪತ್ತೆಯಾಗಿದ್ದ ಮಹಿಳೆ ಕುಣಿಗಲ್ನಲ್ಲಿ ಪತ್ತೆಯಾಗಿದ್ದಾರೆ. ಮಹಿಳೆ ಪತ್ತೆಯಾದ ಬಗ್ಗೆ ಪೊಲೀಸ್ ಇಲಾಖೆ ಮೂಲಗಳು ಖಾತ್ರಿಪಡಿಸಿವೆ. ಮಹಿಳೆ ಜೀವಂತ ಇರೋದನ್ನ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಬಳಿ ಕುಣಿಗಲ್ ಮೂಲದ ಮಹಿಳೆ ಪ್ರಿಯಾಂಕ, ಡೇವಿಡ್ ಎಂಬುವನ ಜೊತೆಗೆ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಮಾದ್ಯಮಗಳಿಗೆ ಪೊಲೀಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಬೇಲೂರು ಪೊಲೀಸರು ಮಹಿಳೆ ಮತ್ತು ಡೇವಿಡ್ನನ್ನ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ಮಹಿಳೆ
ತುಮಕೂರು ಜಿಲ್ಲೆ ಕುಣಿಗಲ್ನಿಂದ ಚಿಕ್ಕಮಗಳೂರಿಗೆ ಸಂಭಂದಿಕರ ಮದುವೆಗೆ ಬಂದಿದ್ದ ಮಹಿಳೆ ಪ್ರಿಯಾಂಕ ಕಲ್ಯಾಣ ಮಂದಿರದಿಂದ ನಿಗೂಢವಾಗಿ ಕಣ್ಮರೆಯಾಗಿದ್ದರು. ಹಾಸನ ತಾಲ್ಲೂಕಿನ ಕಲ್ಕೆರೆ ಬಳಿ ಮಹಿಳೆಯ ಸಂಪೂರ್ಣ ಉಡುಪು ಪತ್ತೆಯಾಗಿತ್ತು. ಮಹಿಳೆಯ ಚಪ್ಪಲಿ, ವ್ಯಾನಿಟಿ ಬ್ಯಾಗ್ ಪತ್ತೆಯಾಗಿತ್ತು. ಇದಷ್ಟೇ ಅಲ್ಲದೇ ಮಹಿಳೆಯ ಬಳಿ ಸುಮಾರು 30 ಲಕ್ಷ ಚಿನ್ನಾಭರಣ ಇತ್ತು ಎನ್ನಲಾಗಿತ್ತು. ಒಡವೆ ಸಮೇತ ಮಹಿಳೆ ನಾಪತ್ತೆಯಾಗಿದ್ದರು. ಮಹಿಳೆ ಮೇಲಿದ್ದ ಒಡವೆಗಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿರೊ ಆರೋಪ ಕೂಡ ಕೇಳಿ ಬಂದಿತ್ತು.
ಈ ಪ್ರಕರಣ ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು.!ಮಹಿಳೆ ಮಿಸ್ಸಿಂಗ್ ಕೇಸ್ ದಾಖಲಾಗುತ್ತಿದ್ದಂತೆ
ಪೊಲೀಸರು ತಕ್ಷಣವೇ ಅಲರ್ಟ್ ಆಗಿ ಕಾರ್ಯಚರಣೆಗೆ ಇಳಿದಿದ್ದು. ಮಹಿಳೆಯ ಕೊಲೆ ಆಗಿರಬಹುದು ಎಂದು ಶಂಕಿಸಿ ಡ್ರೋನ್ ಬಳಸಿ ಕಾರ್ಯಾಚರಣೆಗೂ ಪೊಲೀಸರು ಮುಂದಾಗಿದ್ದರು. ಅಷ್ಟೇ ಅಲ್ಲದೇ ಬೇಲೂರು ಪೊಲೀಸರ ವಿರುದ್ಧ ನಾಪತ್ತೆಯಾದ ಮಹಿಳೆಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ರಾತ್ರಿ ಎಲ್ಲಾ ಕೆರೆಯಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಂದ ಶೋಧ ಕಾರ್ಯ.
ಇನ್ನೂ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದಿಂದ ಕೆರೆಯಲ್ಲಿ ಶೋಧಕಾರ್ಯ ಕೂಡ ನಡೆಸಲಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಇಡೀ ದಿನ ಶೋಧ ನಡೆಸಿದರೂ ಮಹಿಳೆಯ ಸುಳಿವು ಪತ್ತೆಯಾಗಿರಲಿಲ್ಲ. ಕೊಲೆ ಮಾಡಿ ಕೆರೆಯಲ್ಲಿ ಎಸೆಯಲಾಗಿದೆ ಎನ್ನುವ ಅನುಮಾನದಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.
ಆದರೀಗ ಮಹಿಳೆ ಜೀವಂತವಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ನಿಗೂಢ ರೀತಿಯಲ್ಲಿ ಕಣ್ಮರೆಯಾಗಿ ಪೊಲೀಸ್ ಇಲಾಖೆಯ ನಿದ್ದೆಗೇಡಿಸಿದ್ದ ಮಹಿಳೆ ವ್ಯಕ್ತಿಯೊಬ್ಬನ ಜೊತೆ ಪತ್ತೆಯಾಗಿದ್ದಾಳೆ. ಸದ್ಯ ಬೇಲೂರು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದ್ದಾರೆ.


