

ಶಿವಮೊಗ್ಗ : ಅಂಟಿ ಸುಚಿತ್ರಾಗೆ ಐಷಾರಾಮಿ ಬದುಕು,ದುಬಾರಿ ಕಾರು,ಬೆಲೆ ಬಾಳುವ ಗಿಫ್ಟ್.! ತನ್ನ ಕಂಪನಿಯನ್ನೆ ಧಾರೆ ಎರೆದು ಬಿಟ್ಟಿದ್ದ ಕಚ್ಚೆ ಹರುಕ ಕಮಲಾಕರ ಭಟ್ಟ.!

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗದ ಜ್ಯೋತಿಷಿ ಕಮಲಾಕರ್ ಭಟ್ಟ ಅದ್ಯಾವ ಯ್ಯಾಂಗಲ್ನಿಂದ ಆಕೆಯನ್ನು ನೋಡಿದ್ನೊ ಅದರಲ್ಲೂ ಅವಳ ಎದೆಮೆಲಿದ್ದ “ಅಪ್ಪು” ಅನ್ನುವ ಟ್ಯಾಟೋ ನೋಡಿದ್ನೊ ಆಕೆಯನ್ನು ಬಿಗಿದಪ್ಪಿ ಬಿಟ್ಟ ಭಟ್ಟ.!ಆಮೇಲೆ ಅಂಟಿಯ ತೆಕ್ಕೆಗೆ ಬಿದ್ದು ಭಟ್ಟನಿಗೆ ಫಿಕ್ಸ್ ಆಯ್ತು ಜೈಲೂಟ.! ಸಿದ್ಧಾಪುರದ ಕೊಲೆ ಪ್ರಕರಣದಿಂದ, ಸುಚಿತ್ರಾ ಜೊತೆಗಿನ ಆತನ ಸಂಬಂಧ ಮತ್ತು ಐಷಾರಾಮಿ ಜೀವನಶೈಲಿ ಬೆಳಕಿಗೆ ಬಂದಿದೆ. ಕಮಲಾಕರ್ ಭಟ್ಟ, ಸುಚಿತ್ರಾಳಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದಲ್ಲದೆ, ತನ್ನ ‘ಕನಸು ಎಂಟರ್ಪ್ರೈಸಸ್’ ಸಂಸ್ಥೆಯ ಜವಾಬ್ದಾರಿಯನ್ನೂ ಸಂಪೂರ್ಣವಾಗಿ ವಹಿಸಿದ್ದನಂತೆ.!
ಹತ್ಯೆ ಪ್ರಕರಣದ ಬೆನ್ನಿಗೆ ಬೆಳಕಿಗೆ ಬಂದಿರುವ ಜ್ಯೋತಿಷಿ ಕಮಲಾಕರ ಭಟ್ಟನ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಿದ್ದು, ತನಿಖೆ ಚುರುಕು ಗೊಳ್ಳುತ್ತಿದ್ದಂತೆ ಹಲವು ಆಘಾತಕಾರಿ ಅಂಶಗಳು ಬಹಿರಂಗವಾಗುತ್ತಿವೆ. ಈ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ಟ ಮತ್ತು ಸುಚಿತ್ರಾ ನಡುವೆ ಇದ್ದ ಅಕ್ರಮ ಸಂಬಂಧ, ಅವರ ಜೀವನ ಶೈಲಿ ಹಾಗೂ ಹಣಕಾಸು ವ್ಯವಹಾರಗಳು ಇದೀಗ ಒಂದೊಂದಾಗ ಬಿದಿಗೆ ಬಿಳುತ್ತಿದೆ.! ಐಷಾರಾಮಿ ಜೀವನ, ರೀಲ್ಸ್ ಹುಚ್ಚಿಗೆ ಬಿದ್ದಿದ್ದ ಸುಚಿತ್ರಾ ಗಂಡ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋದರೆ ಹೈನಾತಿ ಹೆಂಡತಿ ಸುಚಿತ್ರ ಮಕ್ಕಳನ್ನು ಕರೆದುಕೊಂಡು ಶಿವಮೊಗ್ಗಕ್ಕೆ ಬಂದು ಕಮಲಾಕರ ಭಟ್ಟನ ಮನೆಯಲ್ಲಿ ಆತನ ಜೊತೆಗೆ ಹೆಂಡತಿಯ ಅಂತೆಯೇ ಆರಾಮ ಜೀವನ ನಡೆಸುತ್ತಿದ್ದಳು.
ಶಿವಮೊಗ್ಗ ನಗರದ ಪಂಪಾನಗರದಲ್ಲಿ ಭಟ್ಟ ತನ್ನ ಕಛೇರಿಯ ಸಮೀಪವೆ ಬಾಡಿಗೆ ಮನೆಯನ್ನು ಮಾಡಿದ್ದ.!ಅಲ್ಲಿ ಇಬ್ಬರು ದಂಪತಿಗಳಂತೆ ವಾಸವಾಗಿದ್ದರಂತೆ.
ಕಳೆದ ಹಲವು ತಿಂಗಳಿನಿಂದ ಅ ಬಾಡಿಗೆ ಮನೆಯಲ್ಲಿ ಅವರಿಬ್ಬರ ಜೀವನ ಐಷಾರಾಮಿಯಾಗಿತ್ತಂತೆ. ಎನ್ನಲಾಗುತ್ತಿದೆ. ಪಂಪನಗರದ ಈ ಮನೆಯಲ್ಲಿ ಸುಚಿತ್ರಾ ಮತ್ತು ಕಮಲಾಕರ್ ಭಟ್ಟ ಪತಿ–ಪತ್ನಿಯರಂತೆ ವಾಸವಾಗಿದ್ದರು.ಪಂಪನಗರದಲ್ಲಿ ಭಟ್ಟನ ಕಾಮದ ಘಮಲು ಮುಗಿಲು ಮುಟ್ಟಿದ್ದರಿಂದ ಮೂರ್ನಲ್ಕು ಮನೆ ಬದಲಿಸುವಂತೆಯಾಗಿತ್ತು.

ಐಷಾರಾಮಿ ಗಿಫ್ಟ್ ಕೊಡಿಸಿದ್ದ ಗುರೂಜಿ ಅಂಟಿ
ಸುಚಿತ್ರಾಳಿಗೆ ಕೊಟ್ಟಿದ್ದನಂತೆ.ಆಕೆಯ ಮೇಲೆ ಅಪಾರ ಪ್ರೀತಿ ಹಾಗೂ ನಂಬಿಕೆ ಹೊಂದಿದ್ದ ಜ್ಯೋತಿಷಿ ಕಮಲಾಕರ್ ಭಟ್ಟ, ಆಕೆಗೆ ಹಲವು ದುಬಾರಿ ಉಡುಗೊರೆಗಳನ್ನು ನೀಡಿದ್ದಾನೆ. ಕಾರು, ಎನ್ಫೀಲ್ಡ್ ಬೈಕ್ ಹಾಗೂ ಥಾರ್ ಕಾರು ಸೇರಿದಂತೆ ಹಲವು ಐಷಾರಾಮಿ ವಾಹನಗಳನ್ನು ಸುಚಿತ್ರಾಳಿಗೆ ಗಿಫ್ಟ್ ರೂಪದಲ್ಲಿ ನೀಡಿರುವುದು ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಈ ಉಡುಗೊರೆಗಳು ಅವರಿಬ್ಬರ ನಡುವಿನ ನಿಕಟ ಸಂಬಂಧದ ಆಳವನ್ನು ತೋರಿಸುತ್ತವೆ. ಇದರ ಜೊತೆಗೆ ಕಮಲಾಕರ್ ಭಟ್ಟ 10 ಎಕರೆ ಭೂಮಿ ಕೂಡ ಖರೀದಿಸಿ, ಸುಚಿತ್ರಾಳ ಹೆಸರಿಗೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು ಈ ವಿಷಯದ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ.ಇದ್ದರೂ ಅದು ಕಮಲಾಕರ ಭಟ್ಟನ ಹೆಸರಿಗೆ ಇರಬಹುದು.

ಸುಚಿತ್ರಾ, ಕಮಲಾಕರ್ ಭಟ್ಟನ ಜೊತೆಗೆ ಐಷಾರಾಮಿ ಜೀವನ ನಡೆಸುತ್ತಿದ್ದಳು ಎನ್ನುವುದು ತನಿಖೆಯಿಂದ ದೃಢವಾಗಿದೆ. ದುಬಾರಿ ವಾಹನಗಳು, ಆರಾಮದಾಯಕ ವಾಸ, ವೈಭವದ ದಿನಚರಿ ಎಲ್ಲವೂ ಆಕೆಯ ಜೀವನ ಶೈಲಿಯ ಭಾಗವಾಗಿತ್ತು. ಈ ಐಷಾರಾಮಿ ಬದುಕಿಗೆ ಮೂಲವಾದ “ಕರಂಗೂಲಿ ಮಾಲೆ” ಯ ಮಾರಾಟದಿಂದಲೆ ತಿಂಗಳಿಗೆ ಶಿವಮೊಗ್ಗದ ಕಛೇರಿಯಿಂದಲೆ ಒಂದು ಅಂದಾಜಿನ ಪ್ರಕಾರ ತಿಂಗಳಿಗೆ 3 ಲಕ್ಷ ರೂಪಾಯಿ ಅದಾಯವಿತ್ತಂತೆ.! ಹಣಕಾಸಿನ ಹರಿವು ಕೂಡ ಜ್ಯೋತಿಷಿ ಭಟ್ಟನಿಗೆ ಜೋರಾಗಿಯೆ ಇತ್ತು.!

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿರುವ ಸಂಗತಿಯೆಂದರೆ, ಜ್ಯೋತಿಷಿ ಕಮಲಾಕರ ಭಟ್ಟ ನಡೆಸುತ್ತಿದ್ದ “ಕನಸು ಎಂಟರ್ಪ್ರೈಸಸ್” ಎಂಬ ಹೆಸರಿನ ಕಾಲ್ ಸೆಂಟರ್ (ಬಿಪಿಒ) ಸಂಸ್ಥೆಯ ಜವಾಬ್ದಾರಿಯನ್ನು ಸುಚಿತ್ರಾಳೇ ವಹಿಸಿಕೊಂಡಿದ್ದಳು. ದಿನನಿತ್ಯದ ಕಾರ್ಯಾಚರಣೆ, ಸಿಬ್ಬಂದಿ ನಿರ್ವಹಣೆ ಹಾಗೂ ಹಣಕಾಸು ವ್ಯವಹಾರಗಳಲ್ಲಿ ಸುಚಿತ್ರಾಳ ಪಾತ್ರ ಪ್ರಮುಖವಾಗಿತ್ತು ಎಂದು ವರದಿಯಾಗಿದೆ.
ಸುಚಿತ್ರ ಅಂಟಿ ಕಮಲಾಕರ ಭಟ್ಟನ ಅನೈತಿಕ ಸಂಬಂಧ ಬಯಲಾಗಿದ್ದು ಆಕೆಯ ಮಗಳಿಂದ.!
ಶಿವಮೊಗ್ಗದ ಜ್ಯೋತಿಷಿ ಕಮಲಾಕರ್ ಭಟ್ಟ ಮತ್ತು ಸುಚಿತ್ರಾ ನಡುವಿನ ಅನೈತಿಕ ಸಂಬಂಧ ಕುರಿತು ಮಗಳು ಸುಮಶ್ರೀ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಸಂಬಂಧದ ಹಿನ್ನೆಲೆಯಲ್ಲಿ, ಸುಚಿತ್ರಾ ಕಮಲಾಕರ ಭಟ್ಟ ಮತ್ತು ಆತನ ಸಹಚರರನ್ನು ಶಿವಮೊಗ್ಗದಿಂದ ಸಿದ್ಧಾಪುರಕ್ಕೆ ಕರೆದುಕೊಂಡು ಹೋಗಿ ತನ್ನ ಪತಿ ಮತ್ತು ಆತನ ಕುಟುಂಬದವರ ಮೇಲೆ ದಾಳಿ ಮಾಡಿಸಿ ಗಂಡನ ಅಣ್ಣನನ್ನೆ ಕೊಂದು ಮುಗಿಸಿದ್ದಾಳೆ.!
ಶಿವಮೊಗ್ಗದಲ್ಲಿ ವಾಸವಾಗಿರುವ ಜ್ಯೋತಿಷಿ ಕಮಲಾಕರ್ ಭಟ್ಟನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೊಸ ಹೊಸ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಶಿವಮೊಗ್ಗದ ಪಂಪ ನಗರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ಟ ಹಾಗೂ ಸುಚಿತ್ರಾ ನಡುವೆ ಕಳೆದ 9 ತಿಂಗಳಿಂದ ಅಕ್ರಮ ಸಂಬಂಧ ಇತ್ತು ಎಂಬುದಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳನ್ನು, ಚಾಕು ಇರಿತ ಪ್ರಕರಣದಲ್ಲಿ ಹಲ್ಲೆಗೊಳಗಾದ ಮಹೇಶ್ ಅವರ ಪುತ್ರಿ ಸುಮಶ್ರೀ ಬಹಿರಂಗಪಡಿಸಿದ್ದಾರೆ.
ಕಮಲಾಕರ್ ಭಟ್ಟ ಅಂಟಿ ಸುಚಿತ್ರಾ ಪ್ರಕರಣದಲ್ಲಿನಲ್ಲಿ ದೊಡ್ಡ ಮಾಹಿತಿ ಹೊರಬಿದ್ದಿದೆ.! ಸುಚಿತ್ರಾಳಿಗೆ ಗಂಡನಿಗಿಂತ ಮಗಳೇ ಟಾರ್ಗೆಟ್ ಆಗಿದ್ದಳಂತೆ.?

ವಸಂತ್ ನಾಯ್ಕ್ ಕೊಲೆಗೆ ಜ್ಯೋತಿಷಿ ಕಮಲಾಕರ ಭಟ್ಟ ಮತ್ತು ಸುಚಿತ್ರಾ ನಡುವಿನ ಅನೈತಿಕ ಸಂಬಂಧವೇ ಮುಖ್ಯ ಕಾರಣವಾಗಿರಬಹುದು ಎನ್ನಲಾಗಿದೆ. ಇವರ ಈ ಸರಸ ಸಲ್ಲಾಪಕ್ಕೆ ಅಡ್ಡಿಯಾಗಿದ್ದು ಸುಚಿತ್ರಾ ಮಗಳು ಎನ್ನಲಾಗುತ್ತಿದ್ದು ಅವರ ಆಡಿಯೋ ಮತ್ತು ಮಗಳ ಹೇಳಿಕೆಯಲ್ಲಿ ಹಲವು ಸತ್ಯಗಳು ಬಯಲಾಗಿದೆ.
ಸುಚಿತ್ರಾ ಅವರ ಮಗಳನ್ನೆ ಮುಗಿಸುವ ಮಟ್ಟಕ್ಕೆ ಭಯಾನಕ ಸಂಚುಗಳು ರೂಪಿಸಿರ ಬಹುದು ಎಂಬ ಸಂಶಯಗಳು ಮೂಡಿದೆ. ವೈರಲ್ ಆಡಿಯೋ ಕ್ಲಿಪ್ ಮತ್ತು ಮಗಳ ಹೇಳಿಕೆಗಳು ಈ ಪ್ರಕರಣಕ್ಕೆ ಹೊಸ ತಿರುವು ನೀಡಿವೆ. ಇವರ ಟಾರ್ಗೆಟ್ ಇದ್ದಿದ್ದು ಸುಚಿತ್ರಾ ಗಂಡ ಮಹೇಶ್ ನಾಯ್ಕ್ ಎನ್ನುವುದಕ್ಕಿಂತ ಹೆಚ್ಚಾಗಿ ಮಗಳೇ ಇವರ ಏಕಾಂತಕ್ಕೆ ಅಡ್ಡಿಯಾಗಿದ್ದಳು ಮತ್ತು ಇವರ ಕಾಮಕಾಂಡವನ್ನು ಮಗಳು ಕಣ್ಣಾರೆ ಕಂಡಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ.
ಕಮಲಾಕರ್ ಭಟ್ಟ ಮತ್ತು ಸುಚಿತ್ರಾ ಗ್ಯಾಂಗ್ ಸಿದ್ದಾಪುರದಲ್ಲಿ ವಸಂತ್ ನಾಯ್ಕ್ (43) ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಅವರ ಸಹೋದರ ಮಹೇಶ್ ನಾಯ್ಕ್ (ಸುಚಿತ್ರಾ ಗಂಡ) ಅವರಿಗೆ ಗಂಭೀರ ಗಾಯಗಳಾಗಿದ್ದು . ಪೊಲೀಸರು ತನಿಖೆ ಆರಂಭಿಸಿದ ನಂತರ ಕಮಲಾಕರ್ ಭಟ್ಟರು ಮತ್ತು ಸುಚಿತ್ರಾ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಕಮಲಾಕರ್ ಭಟ್ಟ ಮತ್ತು ಸುಚಿತ್ರಾ (ಮಹೇಶ್ ನಾಯ್ಕ್ ಅವರ ಪತ್ನಿ) ನಡುವೆ ಅನೈತಿಕ ಸಂಬಂಧವಿತ್ತು. ಇದು ಬಯಲಿಗೆ ಬಂದ ನಂತರ ಮಹೇಶ್ ಮತ್ತು ವಸಂತ್ ನಾಯ್ಕ್ ವಿರೋಧಿಸಿದ್ದರು. ಇದರಿಂದಾಗಿ ಘರ್ಷಣೆ ಉಂಟಾಗಿ ವಸಂತ್ ನಾಯ್ಕ್ ಹತ್ಯೆ ಮಾಡಲಾಗಿದೆ.! ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಮಗಳ ಹೇಳಿಕೆ ಮತ್ತು ಆಡಿಯೋ ಕ್ಲಿಪ್ ಬೇರೆಯೇ ಸಂದೇಶ ರವಾನೆ ಮಾಡುತ್ತಿದೆ.

ಸುಚಿತ್ರಾಗೆ ಗಂಡನಿಗಿಂದ ಮಗಳೇ ಟಾರ್ಗೆಟ್ ಆಗಿರಬಹುದು.?
ಕಮಲಾಕರ್ ಭಟ್ ಶಿವಮೊಗ್ಗ ಮೂಲದ ಜ್ಯೋತಿಷಿಯಾಗಿದ್ದು, ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ತಲೆಮಾಸಿದ ಕಚ್ಚೆಹರುಕ ಭಟ್ಟ. ಸುಚಿತ್ರಾ ಅಂಟಿಯ ಜೋತೆಗೆ ಸಂಬಂಧ ಬೆಳೆದ ನಂತರ ಶಿವಮೊಗ್ಗ ನಗರದ ಪಂಪಾ ನಗರದಲ್ಲಿ ಮನೆಮಾಡಿ ಸುಚಿತ್ರಾ ಜೋತೆ ಒಟ್ಟಿಗೆ ಗಂಡ ಹೆಂಡತಿಯಂತೆ ಜೋತೆಗಿದ್ದರು ಈ ಅಕ್ರಮ ಸಂಬಂಧದ ಹಿನ್ನೆಲೆಯಿಂದ ಕೊನೆಗೆ ಅಮಾಯಕನ ಕೊಲೆಯೊಂದಿಗೆ ಅಂತ್ಯವಾಗಿದೆ. ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಮಗಳ ಸಾಕ್ಷಿ ಪ್ರಮುಖವಾಗಿದೆ.
ಸುಚಿತ್ರಾ ಅವರ ಮಗಳು ಪೊಲೀಸರಿಗೆ ಹೇಳಿಕೆ ನೀಡಿದ್ದು, ತಾಯಿ ಮತ್ತು ಕಮಲಾಕರ್ ಭಟ್ಟನ ನಡುವಿನ ಆಪ್ತ ಸಂಬಂಧವನ್ನು ನೋಡಿದ್ದಳು ಎಂದು ಹೇಳಿದ್ದಾಳೆ. ಮಗಳು “ತೀರಾ ಕ್ಲೋಸ್ ಆಗಿರುವ ದೃಶ್ಯ” ನೋಡಿದ್ದಳು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾಳೆ. ಇದರಿಂದ ಸುಚಿತ್ರಾ ಮತ್ತು ಭಟ್ಟನಿಗೆ ಸುಚಿತ್ರಾ ಮಗಳಿಗೆ ತಮ್ಮ ಸಂಬಂಧದ ರಹಸ್ಯ ತಿಳಿದಿದೆ ಎಂಬ ಭಯ ಕೂಡ ಇತ್ತು ಎಂದು ಸಂಶಯವಿತ್ತು. ವೈರಲ್ ಆಡಿಯೋದಲ್ಲಿ ಸುಚಿತ್ರಾ “ತನ್ನ ಮಗಳು ಇಲ್ಲದಿದ್ದರೆ ನಾವು ಹೇಗೆ ಬೇಕಾದರೂ ಇರಬಹುದು” ಎಂಬ ರೀತಿಯ ಮಾತುಗಳನ್ನು ಆಡಿದ್ದಾಳೆ.ಹಾಗಾದರೆ ಮಗಳನ್ನು ಮುಗಿಸುವ ಸಂಚನ್ನು ರೂಪಿಸಿದ್ದರಾ ಎಂಬ ಅನುಮಾನ ಮೂಡಿಸಿದೆ.

ಮಗಳ ಬಳಿ ತಮ್ಮ ಅಕ್ರಮ ಸಂಬಂಧದ ವಿಡಿಯೋ ಇದ್ಯಾ ಎಂಬ ಬಗ್ಗೆ ಸುಚಿತ್ರಾಳಿಗೆ ಅನುಮಾನ ಇತ್ತಾ.?
ಸುಚಿತ್ರಾಳಿಗೆ ತನ್ನ ಅಕ್ರಮ ಸಂಬಂಧಕ್ಕೆ ಗಂಡ ಮಹೇಶ್ ನಾಯ್ಕ್ನಿಗಿಂತಲೂ ಮಗಳೇ ದೊಡ್ಡ ಅಡ್ಡಿಯಾಗಿದ್ದಳು ಎನ್ನುವ ಸಂಶಯವಿದೆ. ಮಗಳ ಬಳಿ ತಮ್ಮ ಸಂಬಂಧದ ವಿಡಿಯೋ ಅಥವಾ ಸಾಕ್ಷ್ಯ ಇದೆಯೇ ಎಂಬ ಭಯ ಸುಚಿತ್ರಾ ಅವರಿಗೆ ಇತ್ತು ಎಂದು ಆರೋಪಗಳಿವೆ. ಇದರಿಂದಾಗಿ ಮಗಳನ್ನು ಹಿಂಸಿಸುತ್ತಿದ್ದಳು ಎಂದು ಮಗಳ ಹೇಳಿಕೆಯಲ್ಲಿ ಉಲ್ಲೇಖಸಿದ್ದಾಳೆ.! ಘಟನೆಯ ದಿನ ಮಧ್ಯಾಹ್ನ ಮಗಳು ಸಿದ್ದಾಪುರ ಪೊಲೀಸ್ ಠಾಣೆಗೆ ಬಂದು ತಾಯಿಯ ಹಿಂಸೆಯ ಬಗ್ಗೆ ದೂರು ನೀಡಿದ್ದಳು. ಆದರೆ ಪೊಲೀಸರು ನಿರ್ಲಕ್ಷ್ಯ ತೋರಿದ್ದರಿಂದ ಸಂಜೆ ಕೊಲೆ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ.
ಸುಚಿತ್ರಾ ಮತ್ತು ಗ್ಯಾಂಗ್ ಮಗಳನ್ನು ಕರೆದುಕೊಂಡು ಬರಲು ಶಿವಮೊಗ್ಗದ ಸಿದ್ಧಾಪುರಕ್ಕೆ ಹೋಗಿದ್ದರು.ಮಗಳನ್ನು ಕಳಿಸಿಕೊಡಿ ಎಂದು ಗಲಾಟೆ ಮಾಡಿದ್ದರು.
ಹತ್ಯೆನಂತರ ಆರೋಪಿಗಳಿಗೆ ಶಿಕ್ಷೆ ಕೊಡಬೇಕೆಂದು ಆಗ್ರಹಿಸಿ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ ಸಾರ್ವಜನಿಕರು..
ಮಹೇಶ್ ನಾಯ್ಕ್ ಮಗಳನ್ನು ಕೊಡಲು ನಿರಾಕರಿಸಿದಾಗ ಮಾತಿಗೆ ಮಾತು ಬೆಳೆದು ಕರೆದುಕೊಂಡು ಹೋಗಿದ್ದ ಭಟ್ಟನ ಸಹಚರರು ಚಾಕು ಇರಿಯಲು ಮುಂದಾಗಿದ್ದಾರೆ ಈ ಸಮಯದಲ್ಲಿ ವಸಂತ್ ನಾಯ್ಕ್ ಸಹೋದರನನ್ನು ರಕ್ಷಿಸಲು ಮಧ್ಯೆ ಬಂದು ಚಾಕು ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.! ಆಡಿಯೋದಲ್ಲಿ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗಪಡಿಸುವ ರೀತಿಯಲ್ಲಿ ಮಾತನಾಡಿದ್ದಾರೆ.ಇಬ್ಬರ ಅಕ್ರಮ ಸಂಬಂಧದ ವಿಷಯ ಬದಲಾಗಬಹುದು ಎನ್ನುವ ಭಯದಲ್ಲಿ ಮಗಳನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರಾ ಎಂಬ ಪ್ರಶ್ನೆ ಮೂಡಿದೆ.!? ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದು, ಇದು ಪೂರ್ಣಗೊಂಡ ನಂತರ ಇನ್ನಷ್ಟು ಮಾಹಿತಿ ಬಯಲಾಗಲಿದೆ.


