Headlines

ಹೈದರಾಬಾದ್ : ತಾಯಿ ತನ್ನ ಇಬ್ಬರು ಮಕ್ಕಳ ಜೊತೆಗೆ ರೈಲಿಗೆ ಡಿಕ್ಕಿ ಹೊಡೆಸಿಕೊಂಡು ಆತ್ಮಹತ್ಯೆಗೆ ಶರಣು.!

ಅಶ್ವಸೂರ್ಯ/ಶಿವಮೊಗ್ಗ :
ಹೈದರಾಬಾದ್‌ನಲ್ಲಿ ದುರ್ಘಟನೆಯೊಂದು ನಡೆದು ಹೋಗಿದೆ. ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ತಾಯಿಯೊಬ್ಬರು ತಮ್ಮ ಇಬ್ಬರು ಹದಿಹರೆಯದ ಇಬ್ಬರು ಮಕ್ಕಳೊಂದಿಗೆ ರೈಲಿಗೆ ಡಿಕ್ಕಿ ಹೊಡೆಸಿಕೊಂಡು ಆತ್ಮಹತ್ಯೆಗೆ‌ ಶರಣಾಗಿದ್ದಾರೆ.! ಘಟನಾ ಸ್ಥಳದಲ್ಲಿ ನಿಲ್ಲಿಸಿದ್ದ ಅವರ ಕಾರಿನಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಸಾವಿಗೂ ಮೊದಲು ಅವರು ತಮ್ಮ ಸಂಬಂಧಿಕರ ಕ್ಷಮೆ ಕೇಳಿದ್ದಾರೆ.

ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಹಾಸ್ಟೆಲ್‌ನಲ್ಲಿ ಓದುತ್ತಿದ್ದ ತಮ್ಮ ಇಬ್ಬರು ಹದಿಹರೆಯದ ಮಕ್ಕಳನ್ನು ಹಾಸ್ಟೆಲ್‌ನಿಂದ ಕರೆದುಕೊಂಡು ಬಂದು ಕಾರಿನಲ್ಲಿ ರೈಲು ಟ್ರ್ಯಾಕ್ ಬಳಿಗೆ ತೆರಳಿದ್ದಾರೆ ಅಲ್ಲಿ ರೈಲು ಬರುವುದನ್ನು ಗಮನಿಸಿ ಒಬ್ಬರಿಗೊಬ್ಬರು ಕೈಹಿಡಿದು ಕೊಂಡು ರೈಲು ಹಳಿಯ ಮೇಲೆ ನಡೆದುಕೊಂಡು ಹೋಗಿ ಡಿಕ್ಕಿ ಹೊಡೆಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಶನಿವಾರ ಹೈದರಾಬಾದ್ ಹೊರವಲಯದಲ್ಲಿ ಈ ದುರಂತ ನಡೆದಿದೆ. ಅವರ ಇಬ್ಬರು ಮಕ್ಕಳು 17 ಹಾಗೂ 18ರ ವರ್ಷದವರಾಗಿದ್ದು ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದುತ್ತಿದ್ದರು. ಮಹಿಳೆಯ ಪತಿ ವಿಜಯ್‌ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಮೇಲ್ನೋಟಕ್ಕೆ ಸ್ಥಿತಿವಂತರಾಗಿದ್ದ ಇವರಿಗೆ ಸಾಯುವಂತಹ ಸ್ಥಿತಿ ಇರಲಿಲ್ಲ ಎನ್ನುವುದು ಗೊತ್ತಾಗಿದೆ.!? ಏನಾಗಿತ್ತೋ ಗೊತ್ತಿಲ್ಲ.ಮೂವರು ರೈಲಿಗೆ ಡಿಕ್ಕಿ ಹೊಡೆಸಿಕೊಂಡು ಜೀವನ ಅಂತ್ಯಗೊಳಿಸಿಕೊಂಡಿದ್ದಾರೆ. ತೆಲಂಗಾಣದ ಚೆರ್ಲಪಲ್ಲಿ ಮತ್ತು ಘಟ್ಕೇಸರ್ ನಿಲ್ದಾಣಗಳ ನಡುವಿನ ರೈಲ್ವೆ ಹಳಿಗಳಲ್ಲಿ ಈ ದುರಂತ ನಡೆದಿದೆ. ಸರಕು ರೈಲು ಬರುವುದನ್ನು ಗಮನಿಸಿ ಹಳಿಯ ಮೇಲೆ ನಡೆದುಕೊಂಡು ಹೋಗಿ ತಾಯಿ ಮಕ್ಕಳು ರೈಲಿಗೆ ಡಿಕ್ಕಿ ಹೊಡೆಸಿಕೊಂಡು ಸಾವನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೃತರನ್ನು 38 ವರ್ಷದ ವಿಜಯಶಾಂತಿ ರೆಡ್ಡಿ, ಅವರ ಮಗಳು 18 ವರ್ಷದ ಚೇತನಾ ರೆಡ್ಡಿ ಅವರ 17 ವರ್ಷದ ಮಗ ವಿಶಾಲ್ ರೆಡ್ಡಿ ಎಂದು ಗುರುತಿಸಲಾಗಿದೆ. ವಿಜಯಶಾಂತಿ ಅವರು ತೆಲಂಗಾಣದ ಮೆಡ್ಚಲ್-ಮಲ್ಕಜ್‌ಗಿರಿ ನಿವಾಸಿಯಾಗಿದ್ದು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ಹಾಗೆಯೇ ಅವರ ಇಬ್ಬರೂ ಮಕ್ಕಳು ಸ್ಥಳೀಯ ಕಾಲೇಜುಗಳಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ವಿಜಯಾ ರೆಡ್ಡಿ ಮನೆಯಿಂದ ಹೊರಟು ಬಂದಿದ್ದು, ಹಾಸ್ಟೆಲ್‌ನಲ್ಲಿ ಓದುತ್ತಿದ್ದ ತಮ್ಮ ಮಕ್ಕಳನ್ನು ಹಾಸ್ಟೆಲ್ ನಿಂದ ಕರೆದುಕೊಂಡು ಬಂದು. ನಂತರ ಕಾರಿನಲ್ಲಿ ರೈಲು ಹಳಿಗಯ ಸಮೀಪಕ್ಕೆ ಹೋಗಿ ಹಳಿಗಳ ಮೇಲೆ ಸ್ವಲ್ಪ ಸಮಯ ನಡೆದುಕೊಂಡು ಹೋಗಿದ್ದಾರೆ. ಅದೇ ಸಮಯದಲ್ಲಿ ಆ ಹಳಿಯ ಮೇಲೆ ಹಾದು ಹೋಗುತ್ತಿದ್ದ ಗೂಡ್ಸ್ ರೈಲಿನ ಚಾಲಕ ಅವರನ್ನು ಗಮನಿಸಿ ಪದೇ ಪದೇ ಹಾರ್ನ್ ಹಾಕಿದ್ದಾರೆ. ಅದರೆ ಅಮ್ಮ ಮಕ್ಕಳು ಮಾತ್ರ ಹಳಿಯಿಂದ ದೂರ ಸರಿದಿಲ್ಲ, ಪರಿಣಾಮ ಮೂವರಿಗೂ ರೈಲು ಡಿಕ್ಕಿ ಹೊಡೆದು ದೇಹಗಳು ಛಿದ್ರವಾಗಿವೆ.! ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸಿಕಂದರಾಬಾದ್ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಕುಟುಂಬದ ಕಾರಿನಲ್ಲಿ ವಿಜಯಶಾಂತಿ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ ಅವರು ಸಂಬಂಧಿಕರಿಗೆ ಕ್ಷಮೆಯಾಚಿಸಿದ್ದಾರೆ.ಮಕ್ಕಳ ಯನ್ನು ತಾನು ಇನ್ನು ಮುಂದೆ ಬದುಕಲು ಬಯಸುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಮಕ್ಕಳನ್ನು ಒಂಟಿಯಾಗಿ ಬಿಡುವ ಬಗ್ಗೆ ಭಯವಾಗುತ್ತಿದೆ ಎಂದು ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಆದರೆ ಸಾಯುವ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಬಹುಶಃ ಮಕ್ಕಳು ಅಮ್ಮನಿಲ್ಲದೇ ಒಂಟಿಯಾಗಿ ಬಿಡುತ್ತಾರೆ ಎಂಬ ಭಯದಲ್ಲೇ ಆ ತಾಯಿ ಸಾಯುವುದಕ್ಕೆ ಮಕ್ಕಳ ಮನಸ್ಸನ್ನು ಒಲಿಸಿ ಒಟ್ಟಿಗೆ ಸಾವಿಗೆ ಶರಣಾಗಿರುವ ಸಾಧ್ಯತೆ ಇದೆ. ಆದರೆ ಹೀಗೆ ಹಠಾತ್ ಆಗಿ ಸಾಯುವುದಕ್ಕೆ ಕಾರಣ ಏನಿತ್ತು ಎಂಬುದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರಿಗೆ ಬಂದ ಕರೆಗಳ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.
ದುಬೈನಲ್ಲಿ ಕೆಲಸ ಮಾಡುತ್ತಿರುವ ವಿಜಯಾ ಅವರ ಪತಿ, ಸಾವಿನ ಬಗ್ಗೆ ತಿಳಿದು ನಗರಕ್ಕೆ ಮರಳಿದ್ದು, ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಸಂಬಂಧಿಕರು ಮತ್ತು ನೆರೆಹೊರೆಯವರ ಪ್ರಕಾರ ಈ ಕುಟುಂಬಕ್ಕೆ ಆರ್ಥಿಕ ತೊಂದರೆ ಇರಲಿಲ್ಲ, ಸಂಘರ್ಷದ ಯಾವುದೇ ಸ್ಪಷ್ಟ ಲಕ್ಷಣಗಳಿರಲಿಲ್ಲ ಆದರೂ ಅವರ ಹಠಾತ್ ಸಾವು ಅವರ ಸಂಬಂಧಿಗಳಿಗೆ ತೀವ್ರ ಆಘಾತ ನೀಡಿದೆ. ಶವಗಳನ್ನು ಸಿಕಂದರಾಬಾದ್‌ನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕುಟುಂಬವು ಮೂರು ಆತ್ಮಹತ್ಯೆಗೆ ಮಾಡಿಕೊಳ್ಳಲು ಕಾರಣವೇನು.? ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.ಪೊಲೀಸರ ತನಿಖೆಯಿಂದಷ್ಟೆ ಸತ್ಯಾಂಶ ಹೊರ ಬರಬೇಕಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!