

ಭದ್ರಾವತಿ : ಹಣಕ್ಕಾಗಿ ಅರಿವಳಿಕೆ ಮದ್ದು ಕಟ್ಟು ದೊಡ್ಡಪ್ಪ , ದೊಡ್ಡಮ್ಮನನ್ನು ಕೊಂದು ಮುಗಿಸಿದ ಕಿರಾತಕ ಮಗ.! ಎಂತಹ ಕ್ರೂರಿ ಇವನು.!?
ಪ್ರೊಪೋಫೋಲ್ ಇಂಜೆಕ್ಷನ್ ಒಂದು ಸಾಮಾನ್ಯ ಅರಿವಳಿಕೆ ಔಷಧಿಯಾಗಿದ್ದು, ಶಸ್ತ್ರಚಿಕಿತ್ಸೆ ಅಥವಾ ವೈದ್ಯಕೀಯ ಕಾರ್ಯವಿಧಾನಗಳ ಸಮಯದಲ್ಲಿ ರೋಗಿಗಳನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ನಿದ್ರಿಸಲು ಬಳಸಲಾಗುತ್ತದೆ, ನೋವು ಇಲ್ಲದೆ ಪ್ರಕ್ರಿಯೆಗಳನ್ನು ನಡೆಸಲು ಸಹಾಯ ಮಾಡುತ್ತದೆ; ಇದು ವೈದ್ಯರ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಯಲ್ಲಿ ಮಾತ್ರ ನೀಡಲಾಗುವುದು. ಇದು ರಕ್ತದೊತ್ತಡ ಮತ್ತು ಉಸಿರಾಟದ ದರವನ್ನು ಕಡಿಮೆ ಮಾಡಬಹುದು ಮತ್ತು ತಲೆನೋವು, ವಾಕರಿಕೆ ಮತ್ತು ವಾಂತಿಯಂತಹ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು, ಆದ್ದರಿಂದ ವೈದ್ಯರ ಸೂಚನೆಯಂತೆ ಮಾತ್ರ ಬಳಸಬೇಕು.ಇಂಜೆಕ್ಷನ್ ಡೋಸೇಜ್ ಹೆಚ್ಚಾದರೆ ಅ ವ್ಯಕ್ತಿ ಸಾವಿನಮನೆ ಸೇರೊದ್ರಲ್ಲಿ ಅನುಮಾನವೆ ಬೇಡ.! ಭದ್ರಾವತಿ ಪ್ರಕರಣದಲ್ಲೂ ಅರವಳಿಕೆ ಮದ್ದಿನಲ್ಲಿ ಹೆಚ್ಚಿಗೆ ಡೋಸೇಜ್ ನೀಡಿ ಹಣದಾಸೆಗೆ ದೊಡ್ಡಪ್ಪ, ದೋಡ್ಡಮ್ಮನನ್ನು ಸಾವಿನ ಮನೆ ಸೇರಿಸಿದ್ದಾನೆ ಕಿರಾತಕ ಮಗ.!…..

news.ashwasurya.in
ಅಶ್ವಸೂರ್ಯ/ಭದ್ರಾವತಿ : ಭದ್ರಾವತಿಯ ಹಳೇನಗರ ಪೊಲೀಸ್ ಠಾಣಾ ಸರಹದ್ದಿನ ಭೂತನಗುಡಿ ಏರಿಯಾದ ವಾಸಿ ವಿಶ್ವನಾಥ. ಜಿ.ಸಿ ಇವರು ತನ್ನ ತಂದೆ ಚಂದ್ರಪ್ಪ ಮತ್ತು ತಾಯಿ ಜಯಮ್ಮ ಇವರುಗಳು ವಾಸವಾಗಿದ್ದ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಸಾವಿನ ಬಗ್ಗೆ ತಮಗೆ ಅನುಮಾನವಿರುತ್ತದೆ ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ನಂ 01/2026 ಕಲಂ 194(3) (iv) ರೀತ್ಯ ಪ್ರಕರಣ ದಾಖಲಾಗಿತ್ತು. ದೂರುದಾರರಾದ ವಿಶ್ವನಾಥ್ ಅವರು ಹಳೆನಗರ ಠಾಣೆಗೆ ಭೇಟಿ ನೀಡಿ ನನ್ನ ತಂದೆ-ತಾಯಿ ಸಾವಿನ ಬಗ್ಗೆ ನನಗೆ ಅನುಮಾನವಿರುವುದಾಗಿ ದೂರು ನೀಡಿದ್ದರು ಆದರೆ ಅವರು ಮೃತಪಟ್ಟ ವಿಚಾರವನ್ನು ತನ್ನ ಚಿಕ್ಕಪ್ಪನ ಮಗನಾದ ಜಿ.ಪಿ. ಮಲ್ಲೇಶ್ ರವರಿಗೆ ಫೋನ್ ಮಾಡಿ ತಿಳಿಸಿದಾಗ ನಾನು 19ನೇ ತಾರೀಖಿನಂದು ಯೋಗಕ್ಷೇಮ ವಿಚಾರಿಸಲು ಅವರ ಮನೆಗೆ ಹೋಗಿದ್ದು, ಆಗ ಅವರು ಆರೋಗ್ಯವಾಗಿದ್ದರು ಎಂಬುದಾಗಿ ತಿಳಿಸಿದ್ದು, ಅವರು ಮೃತಪಟ್ಟ ವಿಚಾರ ತಿಳಿಸಿದಾಗ್ಯೂ ಸಹ ಮೃತರ ದೇಹ ನೋಡಲು ಬಂದಿರುವುದಿಲ್ಲ. ತನ್ನ ತಂದೆ-ತಾಯಿಯವರ ಮೈಮೇಲಿದ್ದ ಚಿನ್ನಾಭರಣಗಳು ಮತ್ತು ಮನೆಯಲ್ಲಿರುವ ಚಿನ್ನಾಭರಣಗಳು ಕಾಣೆಯಾಗಿದ್ದು, ತನ್ನ ತಂದೆ-ತಾಯಿ ಸಾವಿನ ಬಗ್ಗೆ ತನ್ನ ಚಿಕ್ಕಪ್ಪನ ಮಗನಾದ ಜಿ.ಪಿ ಮಲ್ಲೇಶ್ ತಂದೆ ಲೇಟ್ ವಿ ಪಾಲಾಕ್ಷಪ್ಪ, 44 ವರ್ಷ, ಬಿ.ಎ.ಎಂ.ಎಸ್ ವೈದ್ಯರು ಇವರ ಮೇಲೆ ತಮಗೆ ಬಲವಾದ ಅನುಮಾನ ಇರುತ್ತದೆ ಎಂದು ದೂರು ನೀಡಿದ್ದರಿಂದ, ಈಗಾಗಲೇ ಹಳೇನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಯು.ಡಿ.ಆರ್ ನಂ 01/2026 ರ ಪ್ರಕರಣವನ್ನು ಪರಿವರ್ತಿಸಿಕೊಂಡು ಅಪರಾಧ ಸಂಖ್ಯೆ 14/2026 ಕಲಂ 103(1) ಬಿ.ಎನ್.ಎಸ್ ರೀತ್ಯ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿ,

ಆರೋಪಿ ಪತ್ತೆಯ ಸಲುವಾಗಿ ಪಿ.ಎಸ್.ಐ ಸುನಿಲ್ ಬಿ ತೇಲಿ, ಎ.ಎಸ್.ಐ ವೆಂಕಟೇಶ್, ಹೆಡ್ ಕಾನ್ಸ್ ಸ್ಟೆಬಲ್ ಚಿನ್ನಾನಾಯ್ಕ, ಹಾಲಪ್ಪ, ಪೊಲೀಸ್ ಕಾನ್ಸ್ ಸ್ಟೆಬಲ್ ಕಾಂತರಾಜ್, ಸುನಿಲ್ ಕುಮಾರ್, ಮಂಜುನಾಥ ಮತ್ತು ಬಸವರಾಜ್ ಇವರುಗಳ ತಂಡವನ್ನು ರಚಿಸಿದ್ದು, ಸದರಿಯವರು ಈ ದಿವಸ ಬೆಳಿಗ್ಗೆ ಆರೋಪಿ ಜಿ.ಪಿ. ಮಲ್ಲೇಶ್ ಇವರನ್ನು ಪತ್ತೆಮಾಡಿ ಕರೆತಂದು ಹಾಜರುಪಡಿಸಿದ್ದು, ಸದರಿ ಆಸಾಮಿಯನ್ನು ವಿಚಾರಣೆಗೆ ಒಳಪಡಿಸಿದಾಗ, ತನಗೆ ಹಣದ ಅವಶ್ಯಕತೆ ಇದ್ದುದರಿಂದ ತನ್ನ ದೊಡ್ಡಪ್ಪ ಚಂದ್ರಪ್ಪ ಮತ್ತು ದೊಡ್ಡಮ್ಮ ಜಯಮ್ಮನವರು ವಯೋವೃದ್ಧರಾಗಿದ್ದು, ಮನೆಯಲ್ಲಿ ಇಬ್ಬರೇ ವಾಸವಾಗಿದ್ದರಿಂದ ಅವರ ಕುಶಲೋಪರಿ ವಿಚಾರಿಸುವ ಸಲುವಾಗಿ ಅವರ ಮನೆಗೆ ತೆರಳಿ, ಕಳೆದ 19ನೇ ತಾರೀಖಿನಂದು ಮಧ್ಯಾಹ್ನ ಸುಮಾರು 12-45 ರಿಂದ 1-00 ಗಂಟೆ ಅವಧಿಯಲ್ಲಿ ಅವರಿಗೆ Propofol injection ನ್ನು ನೀಡಿ,
ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡು, ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ಮತ್ತು ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿರುತ್ತಾನೆ.
ಸದರಿ ಪ್ರಕರಣವು ವರದಿಯಾಗಿ 24 ಗಂಟೆಗಳ ಅವಧಿಯ ಒಳಗೆ ಆರೋಪಿಯನ್ನು ಪತ್ತೆಮಾಡಿದ್ದು, ಸದರಿ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಶ್ಲಾಘಿಸಿರುತ್ತಾರೆ. ಸದರಿ ಪತ್ತೆ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರಿಯಪ್ಪ, ಮತ್ತು ರಮೆಶ್. ಬಿ, ಶಿವಮೊಗ್ಗ ಜಿಲ್ಲೆ ಇವರ ಮಾರ್ಗದರ್ಶನದಲ್ಲಿ ಪ್ರಕಾಶ್ ರಾಠೋಡ್, ಡಿ.ವೈ.ಎಸ್.ಪಿ ಭದ್ರಾವತಿ, ನಾಗಮ್ಮ.ಕೆ, ಸಿ.ಪಿ.ಐ ನಗರವೃತ್ತ, ಭದ್ರಾವತಿ ಮತ್ತು ಶ್ರೀ ಸುನಿಲ್ ಬಿ ತೇಲಿ, ಪಿ.ಎಸ್.ಐ ಹಳೇನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರಾದ ಎ.ಎಸ್.ಐ ವೆಂಕಟೇಶ್, ಹೆಡ್ ಕಾನ್ಸ್ಟೆಬಲ್ ಚಿನ್ನಾನಾಯ್ಕ, ಹಾಲಪ್ಪ, ಪೊಲೀಸ್ ಕಾನ್ಸ್ಸ್ಟೆಬಲ್ ಕಾಂತರಾಜ್, ಸುನಿಲ್ ಕುಮಾರ್, ಮಂಜುನಾಥ ಮತ್ತು ಬಸವರಾಜ್ ತನಿಖಾ ತಂಡದಲ್ಲಿದ್ದು ಅಪರಾಧಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುತ್ತಾರೆ.


