ಕೇರಳ : 1 ಕೋಟಿ ಲಾಟರಿ ಗೆದ್ದವನ ಕಿಡ್ನಾಪ್.!ಲಾಟರಿ ಕಿತ್ತುಕೊಂಡು ಎಸ್ಕೇಪ್ ಅದ ಗ್ಯಾಂಗ್.!

news.ashwasurya.in
ಅಶ್ವಸೂರ್ಯ/ಕಣ್ಣೂರು : ಇತ್ತೀಚೆಗೆ ಕೇರಳ ಲಾಟರಿಯಲ್ಲಿ 1 ಕೋಟಿ ಗೆದ್ದ ಪೆರವೂರಿನ ಸಾದಿಕ್ ಎ ಕೆ ಎಂಬಾತನನ್ನು ಗ್ಯಾಂಗ್ವೊಂದು ಕಿಡ್ನಾಪ್ ಮಾಡಿ ಅವನಿಂದ ಕೋಟಿ ಗೆದ್ದ ಲಾಟರಿ ಟಿಕೆಟ್ ಅನ್ನು ಕಿತ್ತುಕೊಂಡು ಎಸ್ಕೇಪ್ ಅದ ಘಟನೆ ಕೇರಳದ ರಾಜ್ಯದ ಕಣ್ಣೂರಿನಲ್ಲಿ ನಡೆದಿದೆ.
ಪೊಲೀಸರ ವರದಿ ಪ್ರಕಾರ ಪೆರವೂರಿನ ನಿವಾಸಿ ಸಾದಿಕ್ ಎ ಕೆ ಅವರನ್ನು ಐದು ಜನ ಸದಸ್ಯರ ತಂಡವೊಂದು ಅಪಹರಿಸಿದೆ. ಎಂದು ಆರೋಪಿಸಲಾಗಿದೆ. ಡಿಸೆಂಬರ್ 30 ರ ಡ್ರಾದಲ್ಲಿ ₹ 1 ಕೋಟಿ ಪ್ರಥಮ ಬಹುಮಾನ ಗೆದ್ದಿದ್ದ ಅವರ ಸ್ತ್ರೀ ಶಕ್ತಿ ವಿಜೇತ ಲಾಟರಿ ಟಿಕೆಟ್ ಅನ್ನು ಕಸಿದು ಕೊಂಡಿದ್ದಾರೆ .
ಈ ಘಟನೆ ಬುಧವಾರ ರಾತ್ರಿ ನಡೆದಿದ್ದು, ಸಾದಿಕ್ ಗುರುವಾರ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ ನಂತರ ಪೊಲೀಸರು ತನಿಖೆ ಚುರುಕು ಗೋಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿದ್ದಿಕ್ ಎಕೆ ಲಾಟರಿ ಗೆದ್ದ ನಂತರ, ಬಹುಮಾನದ ಹಣದ ಒಂದು ಭಾಗವನ್ನು ತೆರಿಗೆಯಾಗಿ ಕಡಿತಗೊಳಿಸಲಾಗುವುದು ಎಂದು ಭಾವಿಸಿ, ತಕ್ಷಣದ ಪಾವತಿಯನ್ನು ಪಡೆಯಲು ಟಿಕೆಟ್ ಅನ್ನು ಬ್ಲ್ಯಾಕ್ ಮಾರ್ಕೆಟ್ ನಲ್ಲಿ ಮಾರಾಟ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಒಬ್ಬ ಸ್ನೇಹಿತನ ಮೂಲಕ ಗ್ಯಾಂಗ್ ಒಂದರ ಪರಿಚಯವಾಗಿದೆ. ಗ್ಯಾಂಗ್ ಸದಸ್ಯರಲ್ಲಿ ಒಬ್ಬನ ಲಾಟರಿ ಟಿಕೆಟ್ ತೆಗೆದುಕೊಂಡು ಅವನಿಗೆ ನಗದು ನೀಡಲು ಒಪ್ಪಿಕೊಂಡನು ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ, ಸಾದಿಕ್ ಮತ್ತು ಅವನ ಸ್ನೇಹಿತ ಟಿಕೆಟ್ ಹಸ್ತಾಂತರಿಸಲು ಮತ್ತು ಒಪ್ಪಿಕೊಂಡ ಮೊತ್ತವನ್ನು ಪಡೆಯಲು ಪೆರಾವೂರ್ ಪಟ್ಟಣದ ಮನಾಥನ ಪ್ರದೇಶಕ್ಕೆ ತಲುಪಿದರು. ಆದರೆ, ಇಬ್ಬರನ್ನೂ ಗ್ಯಾಂಗ್ ಕಾರಿನೊಳಗೆ ಎಳೆದುಕೊಂಡು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಲ್ಪ ದೂರ ಪ್ರಯಾಣಿಸಿದ ನಂತರ, ಸಾದಿಕ್ ಸ್ನೇಹಿತನನ್ನು ಬಿಡುಗಡೆ ಮಾಡಲಾಯಿತು.
ರಾತ್ರಿ 11.30 ರ ಸುಮಾರಿಗೆ ಸಾದಿಕ್ ಅವರನ್ನು ವಾಹನದೊಳಗೆ ಬೆದರಿಸಿ, ಲಾಟರಿ ಟಿಕೆಟ್ ಕಸಿದುಕೊಂಡು ಬೇರೆ ಸ್ಥಳದಲ್ಲಿ ಆತನನ್ನು ಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾದಿಕ್ ನೀಡಿದ ವಿವರಗಳ ಆಧಾರದ ಮೇಲೆ, ಪೊಲೀಸರು ಸುಹೈಬ್ ಎಂದು ಗುರುತಿಸಲಾದ ಒಬ್ಬ ಶಂಕಿತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದರು.
ಮತ್ತೊಬ್ಬ ಆರೋಪಿ ಗ್ಯಾಂಗ್ ಸದಸ್ಯ ಫಾರಿಸ್ ಎಂಬಾತನ ಹೆಸರೂ ದಾಖಲಾಗಿದ್ದು, ಉಳಿದ ಆರೋಪಿಗಳನ್ನು ಗುರುತಿಸಿ ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


