ತೆಲಂಗಾಣ : 2 ಕೋಟಿ ವಿಮಾ ಹಣಕ್ಕಾಗಿ ಲವ್ವರ್ ಜೋತೆ ಸೇರಿ ಪತಿಯನ್ನೇ ಕೊಂದು ಮುಗಿಸಿದ ಪತ್ನಿ.!!
ಹೈದರಾಬಾದ್ ಬಳಿಯ ನಿಜಾಮಾಬಾದ್‌ನಲ್ಲಿ, 2 ಕೋಟಿ ರೂ. ವಿಮಾ ಮೊತ್ತಕ್ಕಾಗಿ ಪತ್ನಿ ಸೌಮ್ಯಾ ತನ್ನ ಪ್ರಿಯಕರ ದೀಲೀಪ್ ಜೊತೆ ಸೇರಿ ಪತಿ ರಮೇಶ್‌ರನ್ನು ಹತ್ಯೆ ಮಾಡಿದ್ದಾಳೆ.! ಪೊಲೀಸರು ಪತಿಯನ್ನು ಉಸಿರು ಕಟ್ಟಿಸಿ ಕೊಂದ ಪ್ರಕರಣವನ್ನು ಬಯಲಿಗೆಳೆದಿದ್ದು, ಸೌಮ್ಯಾ, ದೀಲೀಪ್ ಮತ್ತು ಇತರರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆಕೆಯು ಪತಿ ರಮೇಶ್‌ಗೆ ನಿದ್ರೆ ಮಾತ್ರೆ ನೀಡಿ, ನಂತರ ಪ್ರಿಯಕರನ ಸಹಾಯದಿಂದ ಕೊಲೆ ಮಾಡಿ ಹೃದಯಾಘಾತದ ನಾಟಕವಾಡಿದ್ದಳು, ಆದರೆ ವಿದೇಶದಲ್ಲಿ ಇರುವ ರಮೇಶ್ ಸಹೋದರನ ಅನುಮಾನದಿಂದಾಗಿ ಈ ಪ್ರಕರಣ ಬಯಲಿಗೆ ಬಂದಿದೆ……..
