Headlines

ತೀರ್ಥಹಳ್ಳಿ : ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಸಿಎಂ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ.

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಮಾತನಾಡಿ, ಮಲೆನಾಡು ಭಾಗದ ಜನರ ಆತಂಕ ನಿವಾರಿಸುವ ಕೆಲಸವನ್ನು ಮಾಡುತ್ತೇವೆಂದು ಮಾನ್ಯ ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಭರವಸೆ ನೀಡಿದ್ದಾರೆ.
ಮನೆ ಬಾಗಿಲಿಗೆ ಬಂದು ಅರಣ್ಯ ಸಮಸ್ಯೆಗಳನ್ನು ತಿಳಿಯಲು ಬಂದಿರುವುದು ಪುಣ್ಯದ ಸುದಿನ. ಮನೆ, ಭೂಮಿ ಅರಣ್ಯವಾಸಿಗಳಿಗೆ ತೊಂದರೆ ಕೊಡುತ್ತಿರವ
ಕೇಂದ್ರದ ನಿಲುವನ್ನು ಧಿಕ್ಕರಿಸಬೇಕಿದೆ.
ಗುಟ್ಕಾದಿಂದಲ್ಲ ಬದಲಾಗಿ ಕೇಂದ್ರದ ಸೇಲ್ಸ್ ತೆರಿಗೆ ಯಿಂದ ತೊಂದರೆಯಾಗಿದೆ.
1990 ರಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ನೀಡಿದ ಉಚಿತ ವಿದ್ಯುತ್ ನಿಂದ 1.48 ಲಕ್ಷ ಜನರು 14 ಸಾವಿರ ಹೆ.ಅಡಿಕೆ ಬೆಳೆಯುತ್ತಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು ಕಸ್ತೂರಿ ರಂಗನ್ ವರದಿಯನ್ನು‌ ಒಪ್ಪಿಲ್ಲ. ನಮ್ಮ ಹಕ್ಕುಗಳ ರಕ್ಷಣೆಗಾಗಿ ನಮ್ಮ ಊರಿಗೆ ಬಂದಿದ್ದಾರೆ. ರೈತರಿಂದ ಪರಿಸರ ಉಳಿದಿದೆ ಎಂದ ಅವರು ಇತ್ತೀಚೆಗೆ ಹುಲಿಲ್ ಘಾಟ್ ಕಾಮಗಾರಿ ವೇಳೆ ಮಣ್ಣು ಕುಸಿತದಿಂದ ಮರಣ ಹೊಂದಿದ ಮೂರು ಜನರ ಅವಲಂಬಿತರಿಗೆ ನಿವೇಶನ ಕೊಡಿಸಲು ಮನವಿ ಮಾಡಿದರು.

ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗ ರೆಡ್ಡಿ, ಪ್ರಾಣಿ-ಮಾನವ ಸಂಘರ್ಷ ಸೇರಿದಂತೆ ಅರಣ್ಯ ವಿಷಯಗಳ‌ಕುರಿತು ಇಲ್ಲೇ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ಶೆಟ್ಟಿಹಳ್ಳಿ ಅಭಯಾರಣ್ಯ ಅಧಿಸೂಚನೆಯಾಗಬೇಕಿದೆ. ಜನ, ಅರಣ್ಯ, ವನಮೂಲ, ಪ್ರಾಣಿ ಸಂಕುಲ ಎಲ್ಲ ಉಳಿಯಬೇಕು. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರ ಜೊತೆಗಿರಲಿದೆ ಎಂದರು.
ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ತೀರ್ಥಹಳ್ಳಿ, ಸಾಗರ, ಹೊಸನಗರ ತಾಲ್ಲೂಕಿನ ಗ್ರಾಮಗಳು ಹಾಗೂ ಇನ್ನೂ ಕೆಲ ಗ್ರಾಮ ಸೇರಿ 400 ಕ್ಕೂ ಹೆಚ್ಚು ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಅಧಿಸೂಚನೆ ಒಳಪಟ್ಟಿದ್ದು, ಆಕ್ಷೇಪಣೆ ಸಲ್ಲಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ.
ಜನರ ಹಿತ ಕಾಪಾಡುವ ಜವಾಬ್ದಾರಿ ಕೇಂದ್ರ, ರಾಜ್ಯ ಸರ್ಕಾರಗಳ‌ ಮೇಲಿದೆ. ಹಿಂದೆಯೂ ಅಧಿಸೂಚನೆಗಳಿಗೆ ಮಾಜಿ ಮುಖ್ಯಮಂತ್ರಿಗಳು ಸರಿಯಾದ ಉತ್ತರ ನೀಡಿದ್ದಾರೆ. ಕಸ್ತೂರಿ ರಂಗನ್ ವರದಿ ಅಪ್ರಸ್ತುತ ಎಂದು ತಿಳಿಸಿದ್ದಾರೆ.
ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹೋರಾಟ ಮಾಡುತ್ತಲೇ ಬರಲಾಗಿದೆ.
ಪ್ರಸ್ತುತ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಮಲೆನಾಡಿನಲ್ಲಿ ಭೌತಿಕ ಸರ್ವೇ ಆಗಬೇಕು.
ಒಟ್ಟಾಗಿ, ಒಂದಾಗಿ ವರದಿ ವಿರುದ್ದ ಹೋರಾಟ ಮಾಡೋಣ, ಸರಿಯಾದ ದಾಖಲಾತಿಗಳನ್ನು‌ ಕೇಂದ್ರಕ್ಕೆ ನೀಡಿ ಮನವರಿಕೆ ಮಾಡೋಣ ಎಂದರು.
ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ, ಅರಣ್ಯ ಅಧಿಸೂಚನೆಗಳು ಸಾಕಷ್ಟು ಬಾಧೆ ನೀಡುತ್ತಿವೆ. ಗಾಡ್ಗಿಳ್ ಮತ್ತು ಕಸ್ತೂರಿ ರಂಗನ್ ವರದಿಗಳಲ್ಕಿ ವಿದೇಶಿ ಕೈವಾಡ ಇರುವ ಬಗ್ಗೆ ಮಾತುಗಳಿದ್ದು ಈ ಬಗ್ಗೆ ವಿಚಾರಣೆ ಆಗಬೇಕಿದೆ. 6 ರಾಜ್ಯಗಳಲ್ಲಿ ಓಡಾಡಿ ಅಧ್ಯಯನ ಮಾಡಿ ವರದಿ ನೀಡಲು ಸಮಿತಿ ರಚನೆ ಆಗಿದೆ. 1 ವರ್ಷದೊಳಗೆ ಸರ್ವೇ ಆಗಬೇಕು.
ಬಗರ್ ಹುಕುಂ ಹಕ್ಕು ಪತ್ರ ಪಡೆದಿದ್ದು ಇದನ್ನು
ರದ್ದುಪಡಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಶರಾವತಿ ಮುಳಗಡೆಗೆ ಪರಿಹಾರ ನೀಡಬೇಕಿದೆ. ಗಾಡ್ಗಿಳ್ ಮತ್ತು ಕಸ್ತೂರಿ ರಂಗನ್ ವರದಿಗಳು ಜಾರಿಯಾಗದಿದ್ದರೂ ಅರಣ್ಯ ಇಲಾಖೆ ಸೂಕ್ಷ್ಮ ಪ್ರದೇಶದಂತೆ ನೋಡುತ್ತದೆ. ವರದಿಯಿಂದ ಎದುರಾಗುವ ಸಮಸ್ಯೆಗಳು, ಬದುಕನ್ನು‌ವಕಸಿಯುವ ಪ್ರಯತ್ನಕ್ಕೆ
ಶಾಶ್ವತ ಪರಿಹಾರ ನೀಡಬೇಕು.
ಶೇ.70 ಅಡಿಕೆ ಬೆಳೆಗಾರರು ಇಲ್ಲಿದ್ದು, ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕು.
ತೀರ್ಥಹಳ್ಳಿ ತಾಲ್ಲೂಕಿನಲ್ಲು ಇಕೋ ಟೂರಿಸಂ ಗೆ ಅವಕಾಶ ಮಾಡಿಕೊಡಬೇಕು. ನಗರಸಲ್ಲಿ ಕೊಳಚೆ ನೀರು ನೇರವಾಗಿ ತುಂಗಾ ನದಿಗೆ ಸೇರುತ್ತಿದ್ದು ಸಂಸ್ಕರಣಾ ಘಟಕ ಸ್ಥಾಪಿಸಬೇಕು. ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ ಯನ್ನು ಮಂಜೂರು ಮಾಡಬೇಕೆಂದು ಮನವಿ ಮ
ಆರ್ ಎಂ.ಮಂಜುನಾಥ್ ಗೌಡ ಮಾತನಾಡಿ, 7 ನೇ ಬಾರಿ ಕರಡು ಅಧಿಸೂಚನೆ ನೀಡಿದೆ. ಆಕ್ಷೇಪಣೆ ಕೇಳಿದೆ. ೬ ರಾಜ್ಯಗಳು ಮಾಡದ ಕೆಲಸವನ್ನು‌ಮಾನ್ಯ ಮುಖ್ಯಮಂತ್ರಿಗಳು ಸ್ಥಳಕ್ಕೇ ಬಂದು ಪರಿಶೀಲಿಸುತ್ತಿದ್ದಾರೆ. ಅಡಿಕೆ ಬೆಳೆಯನ್ನು ಸಂರಕ್ಷಿಸಬೇಕು. ನೂರಾರು ವರ್ಷದಿಂದ ಬದುಕುತ್ತಿರುವವರಿಗೆ ವರದಿ ಅನ್ಯಾಯ ಮಾಡುತ್ತಿದೆ. ಶರಾವತಿ ಸಂತ್ರಸ್ತರಿಗೆ, ಮಾಣಿ ಸಂತ್ರಸ್ತರಿಗೆ ನ್ಯಾಯ ಒದಗಿಲ್ಲ. ಇದಕ್ಕೆಲ್ಲ‌ ಮಾನ್ಯ ಮುಖ್ಯಮಂತ್ರಿಗಳು ವಿಶೇಷ ಗಮನ ಕೊಡಬೇಕೆಂದು ಮನವಿ ಮಾಡಿದರು.
ಶಾಸಕರಾದ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ಇಲ್ಲಿನ ಜನರ ಮಾರಣ ಹೋಮ ಆಗಲಿದೆ. ಇದನ್ನು ತಡೆಯಲು ಪಾದಯಾತ್ರೆ ಕೈಗೊಳ್ಳಲಾಯಿತು. ಇದಕ್ಕೆ ಸ್ಪಂದಿಸಿ ಜನರ ಮನೆ ಬಾಗಿಲಿಗೆ ಮಾನ್ಯ ಮುಖ್ಯಮಂತ್ರಿಗಳು ಬಂದಿರುವುದು ಐತಿಹಾಸಿಕ ಹಾಗೂ ಅತೀವ ಸಂತಸ ತಂದಿದೆ. ಮಲೆನಾಡಿನ‌ಜನ ಅನೇಕ ಸವಾಲು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಹಂದಿ, ಆನೆ, ಮಂಗಗಳ ಕಾಟಕ್ಕೆ ಜನ
ಊರು ಬಿಡುವ ಮಟ್ಟಿಗೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ 440 ಗ್ರಾಮಗಳು
ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಗಾಗಿರುವುದು ಶೋಚನೀಯ.

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ವೇ ಮಾಡಿ ಸುಪ್ರೀಂ ಕೋರ್ಟ್ ಗೆ ಕಳುಹಿಸಲಾಗಿದೆ. ಸಮರ್ಪಕ ನ್ಯಾಯ ಒದಗಬೇಕಿದೆ ಎಂದರು.
ಶಾಸಕ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ರಾಜ್ಯದ 10 ಜಿಲ್ಲೆ ವ್ಯಾಪ್ತಿಯ ಸುಮಾರು 4576 ಗ್ರಾಮಗಳಿಗೆ ತೊಂದರೆಯಾಗಲಿದೆ. ಇದು ಜಾರಿಯಾದರೆ ಇಲ್ಲಿನ ಜನ ಜೀವನ ದುಸ್ತರವಾಗುತ್ತದೆ. ಮಾನ್ಯ ಮುಖ್ಯಮಂತ್ರಿಗಳು ಗಂಭೀರ ಆಲೋಚನೆ ಮಾಡಿ, ಶಾಶ್ವತ ಪರಿಹಾರ ಒದಗಿಸಬೇಕೆಂದು ಮನವಿ‌ ಮಾಡಿದರು.
ಶಾಸಕಿ ಶಾರದಾ ಪೂರ್ಯಾನಾಯ್ಕ್ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಹೋರಾಟಳು ನಡೆದಿದ್ದು, ಕಸ್ತೂರಿ ರಂಗನ್ ವರದಿ‌ ಕುರಿತು ಉತ್ತಮ‌ನ್ಯಾಯ ಒದಗಲಿದೆ ಎಂಬ ಭರವಸೆ ಇದೆ. ಶರಾವತಿ‌ ಮುಳುಗಡೆಯಿಂದ ಈಗಾಗಲೇ ಸಂಕಟದಲ್ಲಿರುವವರಿಗೇ ಕಸ್ತೂರಿ ರಂಗನ್ ವರದಿ ತೂಗುಗತ್ತಿ ಎದುರಾಗಿದ್ದು, ಈ ಸಂಬಂಧ ಒಳ್ಳೆಯ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದರು.

ತೀರ್ಥಹಳ್ಳಿಯ ಪವಿತ್ರ ರಾಮೇಶ್ವರನ ಸನ್ನಿಧಿಯಲ್ಲಿ ಮುಖ್ಯಮಂತ್ರಿ ಶಿಕೆ ಶಿವಕುಮಾರ್.

ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಮಾತನಾಡಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುತ್ತೇವೆ ಎಂದರು.

ಕಸ್ತೂರಿ ರಂಗನ್ ವರದಿಯ ಆಧಾರದ ಮೇಲೆ ಪಶ್ಚಿಮ ಘಟ್ಟಗಳನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಈ ನಿರ್ಧಾರವು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಪರಿಸರ ಸೂಕ್ಷ್ಮ ಪ್ರದೇಶದ ಕಾನೂನು ಜಾರಿಯು ಕೇಂದ್ರ ಸರ್ಕಾರದ ಶಾಸನವಾಗಿದ್ದು, ‘ಪರಿಸರ ಸಂರಕ್ಷಣಾ ಕಾಯ್ದೆ 1986’ರ ಸೆಕ್ಷನ್ 3ರ ಪ್ರಕಾರ ಕೇಂದ್ರ ಸರ್ಕಾರಕ್ಕೆ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವಿದೆ.
ಈ ಹಿಂದೆ ರಾಜ್ಯ ಸರ್ಕಾರವು ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ, ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದಾಗ್ಯೂ, ರಾಜ್ಯ ಸರ್ಕಾರದ ಶಿಫಾರಸನ್ನು ಪರಿಗಣಿಸದೆ ಕೇಂದ್ರ ಸರ್ಕಾರವು ಪದೇ ಪದೇ ಕರಡು ಅಧಿಸೂಚನೆ ಹೊರಡಿಸುತ್ತಿರುವುದು ಭಾರಿ ವಿರೋಧಕ್ಕೆ ಕಾರಣವಾಗಿದೆ.

ಭೌತಿಕ ಪರಿಶೀಲನೆ ನಡೆಸದೆ ಇಡೀ ಗ್ರಾಮವನ್ನು, ಜನವಸತಿ ಪ್ರದೇಶ, ಅಡಿಕೆ-ಕಾಫಿ ತೋಟಗಳು ಹಾಗೂ ಮೂಲಭೂತ ಸೌಕರ್ಯಗಳಿರುವ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಹೊರಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಭೂಮಿಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವವರ ಮತ್ತು ಬಗರ್ ಹುಕುಂ ಸಾಗುವಳಿದಾರರ ಹಕ್ಕುಗಳು ಸೇರಿದಂತೆ ಜನ ಜೀವನ ದುಸ್ತರವಾಗಲಿದೆ.

– ರಮೇಶ್, ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ವಕೀಲರು.

ಕರ್ನಾಟದ ಸ್ವಿಟ್ಜರ್ಲೆಂಡ್‌‌ ಆದ ತಾಲ್ಲೂಕು ಬರದ ಛಾಯೆಗೆ ಒಳಗಾಗಿದೆ. ಪರಿಸರ ಸೂಕ್ಷ್ಮ ಪ್ರದೇಶಕ್ಕೂ ಮೀರಿದ ಸ್ಥಳಗಳನ್ನು ತಾಲ್ಲೂಕು ಹೊಂದಿದ್ದು ಇವೂ ಸಹ ಬರ ಪರಿಸ್ಥಿತಿಗೆ ಒಳಗಾಗಿದೆ. ಇಂತಹ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿಯಿದ ಯಾವ ಉಪಯೋಗವೂ ಇಲ್ಲ.

ಕೃಷಿ ಬೆಳೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ

ಕಸ್ತೂರಿ ರಂಗನ್ ವರದಿಯಿಂದ ಎದುರಾಗುವ ಸವಾಲುಗಳು ಮತ್ತು ಶರಾವತಿ ಸಂತ್ರಸ್ತರ ಸಮಸ್ಯೆಗಳ ಕುರಿತು ವಿಶೇಷ ಅಧಿವೇಶನ ಕರೆದು ರೈತರ ಸಮಸ್ಯೆ ಬಗೆಹರಿಸುತ್ತಿರುವ ಮಾನ್ಯ ಮುಖ್ಯ ಮಂತ್ರಿಗಳಿಗೆ ಅಭಿನಂದನೆಗಳು.

ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸಾಕಮ್ಮ ಹರತಾಳು.


ಮಲೆನಾಡಿನ ಜನರು ಸವಾಲುಗಳಿಂದ ಬಳಲಿ ಸತ್ತು ಹೋಗಿದ್ದಾರೆ. 1499 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶವೆಂದು
ಅಧಿಸೂಚನೆ ಆಗಿದೆ. 17 ಸಾವಿರ ಚ. ಮೀ. ಸಂರಕ್ಷಿತ ಅರಣ್ಯಾಗಿದೆ. ಈಗ ಉಳಿದಿರುವುದು ಶೇ.20 ಮಾತ್ರ. ಇದನ್ನು ಉಳಿಸಿಕೊಡಿ.
ಶರಾವತಿ ಭೂಮಿ‌ ಕಳೆದುಕೊಂಡ ಎರಡು ತಲೆಮಾರು ಉರುಳಿದರು ಇನ್ನೂ ಭೂಮಿ ಸಿಕ್ಕಿಲ್ಲ. ವರದಿಯನ್ನು‌ 3 ವರ್ಷವಾದರೂ ದೆಹಲಿಗೆ ತಲುಪಿಸಲಿಲ್ಲ. ಕೂಡಲೇ ವರದಿ ತಲುಪುವಂತೆ ಮಾಡಬೇಕು. ರೈತರ 2.45 ಅರ್ಜಿ ವಜಾ ಮಾಡಿ ಅರಣ್ಯ ಇಲಾಖೆ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ರೀತಿಯ ಹಲವಾರು ಸಮಸ್ಯೆಗಳಿದ್ದು ಮುಖ್ಯ ಮಂತ್ರಿ ಬಗೆಹರಿಸಬೇಕಿದೆ.

– ಸಾಗರ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್

ಇಲ್ಲಿ ಭೌತಿಕ ಸರ್ವೇ ಬೇಡ. ಇದೊಂದು ವಿದೇಶಿ ಪಿತೂರಿ. ನಾವು ಗುಡ್ಡಗಾಡಿನ ಜನ. 3-4 ಶತಮಾನದಿಂದ ನಮ್ಮನ್ಬು ಹೊರತಳ್ಳಲು ನಿರಂತರ ಪ್ರಯತ್ನ ನಡೆದಿದೆ. ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳು
10 ಪಟ್ಟು ಕಿರುಕುಳ ಹೆಚ್ಚಿಸಲು ಮಾತ್ರ ಈ ವರದಿ ಬಂದಿವೆ. 375 ನೇ ವಿಧಿಯಡಿ ವಿಶೇಷ ಸ್ಥಾನಮಾನ ವರದಿ

ರಾಜೇಂದ್ರ ಕಮ್ಮಳಗಿರಿ

ಬೆಳ್ಳೂರು ತಿಮ್ಮಪ್ಪ :
ಕೇರಳ ಮಾದರಿಯನ್ನು ಅನುಸರಿಸಬಾರದು ಎಂದು‌ ಮನವಿ‌ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಅರಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ, ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗ ರೆಡ್ಡಿ, ಸಂಸದರಾದ ಬಿ.ವೈ.ರಾಘವೇಂದ್ರ, ಶಾಸಕರಾದ ಬೇಳೂರು ಗೋಪಾಲ ಕೃಷ್ಣ,ಎಸ್ ಎನ್ ಚನ್ನಬಸಪ್ಪ, ಆರಗ ಜ್ಞಾನೇಂದ್ರ, ಶಾರದಾ ಪೂರ್ಯಾನಾಯ್ಕ, ವಿಧಾನ ಪರಿಷತ್ ಶಾಸಕರಾದ ಡಿ.ಎಅ್.ಅರುಣ್, ಬಲ್ಕೀಶ್ ಬಾನು,ಡಾ.ಧನಂಜಯ ಸರ್ಜಿ,ಸೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್,
ರಾಜ್ಯ ಜವಳಿ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ.ಮಂಜುನಾಥ ಗೌಡ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್ , ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಓ, ಎಸ್ ಪಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಎಸಿಗಳು, ತಹಶೀಲ್ದಾರರು, ಮಲೆನಾಡು ಭಾಗದ ಜನಪ್ರತಿನಿಧಿಗಳು, ರೈತ ಸಂಘಟನೆಗಳ ಒಕ್ಕೂಟದ ಪ್ರಮುಖರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!