
🚨 ರಾಮ್ ರಾಮ್ ಬೀಕಾನಾ?ನಕಲಿ ಟೀ ಪುಡಿ ದಂಧೆ.!! ಇವನ ಮುಂದೆ ಬ್ರಾಂಡೆಡ್ ಕಂಪನಿ ಟೀ ಪುಡಿಗಳೆ ಡಮಾರ್.!
ಮುಂದಿನ ಸಂಚಿಕೆಯಲ್ಲಿ ಸಂಪೂರ್ಣ ವರದಿ.
news.ashwasurya.in
ಶಿವಮೊಗ್ಗದಲ್ಲಿ ನಕಲಿ ಟೀ ಪುಡಿ ದಂಧೆಯ ಆರೋಪ — ಮಲೆನಾಡಿನಿಂದ ಕರಾವಳಿವರೆಗೆ ಜಾಲ ವಿಸ್ತರಣೆ.!!
ಅಶ್ವಸೂರ್ಯ/ಶಿವಮೊಗ್ಗ : ನಗರದ ಗಾಂಧಿ ಬಜಾರ್ ಹಾಗೂ ಡಬ್ಬಲ್ ರಸ್ತೆಯ ಸುತ್ತಮುತ್ತ ನಕಲಿ ಟೀ ಪುಡಿ ತಯಾರಿಕೆ ಮತ್ತು ಮಾರಾಟದ ಕುರಿತು ಗಂಭೀರ ಆರೋಪಗಳು ಕೇಳಿಬರುತ್ತಿವೆ. ವಿವಿಧ ಬ್ರಾಂಡೆಡ್ ಕಂಪನಿಗಳ ಹೆಸರಿನಲ್ಲಿ ಟೀ ಪುಡಿಯನ್ನು ನಕಲಿಯಾಗಿ ತಯಾರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ ಎಂಬ ಮಾಹಿತಿ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ದಂಧೆಯ ಹಿಂದೆವರಾಮ್ ರಾಮ್ “ಬೀಕಾ” ನಾ ಹೆಸರು ಕೇಳಿಬರುತ್ತಿದ್ದು, ಹಲವು ವರ್ಷಗಳಿಂದ ಇದೇ ನೀಚಾ ದಂಧೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ ಎನ್ನುವ ಆರೋಪಗಳು ಕೇಳಿಬಂದಿವೆ. ಪತ್ರಿಕೆ ಇವನ ಜಾಲವನ್ನು ಬಯಲು ಮಾಡಲು ತನಿಖಾ ವರದಿಗೆ ಮುಂದಾಗಿದೆ.
🔎 ಮಲೆನಾಡಿನಿಂದ ಕರಾವಳಿವರೆಗೆ ಇವನಾ ಜಾಲ.?ಅಕ್ರಮ ಟೀ ಪುಡಿ ದಂಧೆಯ ವಹಿವಾಟು.!
ಶಿವಮೊಗ್ಗ ಜಿಲ್ಲೆಯನ್ನು ಕೇಂದ್ರವಾಗಿಸಿಕೊಂಡು, ಪಕ್ಕದ ಚಿಕ್ಕಮಗಳೂರು, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಿಗೂ ನಕಲಿ ಟೀ ಪುಡಿ ಸರಬರಾಜಾಗುತ್ತಿದೆ ಎಂಬ ಆರೋಪಗಳು ಭರ್ಜರಿಯಾಗಿ ಸದ್ದು ಮಾಡುತ್ತಿದೆ.
ಬ್ರಾಂಡೆಡ್ ಕಂಪನಿಗಳ ಮೂಲ ಪ್ಯಾಕೆಟ್‌ಗಳನ್ನು ಹೋಲುವ ರೀತಿಯಲ್ಲಿ ಪ್ಯಾಕಿಂಗ್ ಮಾಡಿ, ಗ್ರಾಹಕರಿಗೆ ನಿಜವಾದ ಉತ್ಪನ್ನವೆಂಬ ಭಾವನೆ ಮೂಡಿಸುವ ಮಟ್ಟಕ್ಕೆ ಇದರ ನಿಗಿನಿಗಿಸುತ್ತಿದೆ.!
⚠️ ಗ್ರಾಹಕರ ಆರೋಗ್ಯದ ಮೇಲೂ ಪ್ರಶ್ನೆ.?
ಟೀ ಪುಡಿಯಲ್ಲಿ ಬಳಸುವ ಕಚ್ಚಾ ವಸ್ತುಗಳು, ಬಣ್ಣ, ಸುಗಂಧ ದ್ರವ್ಯಗಳು ಹಾಗೂ ಇತರೆ ಮಿಶ್ರಣಗಳ ಗುಣಮಟ್ಟದ ಬಗ್ಗೆ ಯಾವುದೇ ಅಧಿಕೃತ ಪರೀಕ್ಷೆ ನಡೆದಿರುವುದಿಲ್ಲ.ಅಲ್ಲಿಗೆ ಈ ನಕಲಿ ಟೀ ಪುಡಿಯಿಂದ ಟೀ ಮಾಡಿ ಕುಡಿದವನ ಬದುಕು ಅ ದೇವರೆ ಕಾಪಾಡಬೇಕು.
🏭 ನಕಲಿ ಟೀ ಪುಡಿ ಎಲ್ಲಿ ತಯಾರಾಗುತ್ತದೆ?
ಈ ಆರೋಪಗಳ ಹಿಂದಿರುವ ಖದೀಮ ಯಾರು.?
- ಟೀ ಪುಡಿ ನಿಖರವಾಗಿ ಎಲ್ಲಿ ತಯಾರಾಗುತ್ತದೆ?
- ತಯಾರಿಕಾ ಘಟಕಕ್ಕೆ ಅಗತ್ಯ ಪರವಾನಗಿ ಇದೆಯೇ?
- ಯಾವ ಕಂಪನಿಗಳ ಹೆಸರಿನಲ್ಲಿ ಉತ್ಪನ್ನಗಳನ್ನು ಪ್ಯಾಕ್ ಮಾಡಲಾಗುತ್ತಿದೆ?
- ಕಚ್ಚಾ ವಸ್ತುಗಳನ್ನು ಎಲ್ಲಿಂದ ತರಲಾಗುತ್ತಿದೆ?
- ಪ್ಯಾಕಿಂಗ್ ಮತ್ತು ಲೇಬಲಿಂಗ್ ಎಲ್ಲಿ ನಡೆಯುತ್ತಿದೆ?
- ಶಿವಮೊಗ್ಗ ಹೊರತುಪಡಿಸಿ ಬೇರೆ ಜಿಲ್ಲೆಗಳಿಗೆ ಸರಬರಾಜು ಮಾಡುವ ವ್ಯವಸ್ಥೆ ಹೇಗಿದೆ?
- ಆಹಾರ ಸುರಕ್ಷತಾ ಇಲಾಖೆ ಈ ಬಗ್ಗೆ ಯಾವುದೇ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದೆಯೇ?
ಈ ಎಲ್ಲಾ ಪ್ರಶ್ನೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಅಧಿಕೃತ ತನಿಖೆಯ ಮೂಲಕ ಉತ್ತರ ಸಿಗಬೇಕಿದೆ.
👥 ಹೊರ ರಾಜ್ಯದ ಕಾರ್ಮಿಕರ ಬಗ್ಗೆಯೂ ಆರೋಪ
ತಯಾರಿಕಾ ಘಟಕಗಳಲ್ಲಿ ಹೊರ ರಾಜ್ಯಗಳಿಂದ ಯುವಕರನ್ನು ಕರೆತಂದು ಕೆಲಸ ಮಾಡಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಅವರು ಯಾವ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರಿಗೆ ಕಾನೂನುಬದ್ಧ ಉದ್ಯೋಗ ದಾಖಲೆಗಳಿವೆಯೇ, ಘಟಕದಲ್ಲಿ ಕಾರ್ಮಿಕ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನೂ ಸಂಬಂಧಪಟ್ಟ ಇಲಾಖೆ ಪರಿಶೀಲಿಸಬೇಕಿದೆ.
💰 ಕೋಟ್ಯಂತರ ಆಸ್ತಿ ಸಂಪಾದನೆಯ ಆರೋಪ.!
ಕಳೆದ ಹಲವು ವರ್ಷಗಳಿಂದ ಇದೇ ವ್ಯವಹಾರ ನಡೆಸಿ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಈ ಆರೋಪ ನಿಜವೇ ಆಗಿದ್ದರೆ, ಸಂಬಂಧಪಟ್ಟ ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಸಂಬಂಧಿಸಿದ ಆಸ್ತಿ, ಬ್ಯಾಂಕ್ ವ್ಯವಹಾರ, ತೆರಿಗೆ ದಾಖಲೆಗಳು ಹಾಗೂ ವಾಣಿಜ್ಯ ಪರವಾನಗಿಗಳನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಪರಿಶೀಲಿಸಬೇಕಾಗಿದೆ.
👨👦ದಂಧೆಕೋರನ ಕುಟುಂಬ ಸದಸ್ಯರ ಪಾತ್ರವೇನು?
ದಂಧೆಯಲ್ಲಿ ಕುಟುಂಬದ ಇತರ ಸದಸ್ಯರೂ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಅವರ ಪಾತ್ರ ಏನು? ಉತ್ಪಾದನೆ, ಪ್ಯಾಕಿಂಗ್, ಸಾಗಾಟ ಮತ್ತು ಮಾರಾಟವನ್ನು ಯಾರು ನಿರ್ವಹಿಸುತ್ತಿದ್ದಾರೆ? ಎಂಬುದೂ ಮುಂದಿನ ದಿನಗಳಲ್ಲಿ ಪತ್ರಿಕೆ ಬಹಿರಂಗ ಪಡಿಸಲಿದೆ.
ಈ ಹಿಂದೆ ಪೋಲಿಸರ ಖೆಡ್ಡಕ್ಕೆ ಬಿದ್ದಿದ್ದನೆ ಬೀಕಾ.❓
ಶಿವಮೊಗ್ಗದಲ್ಲಿ ಇಂತಹ ಯಾವುದೇ ನಕಲಿ ಟೀ ಪುಡಿ ಘಟಕ ಪತ್ತೆಯಾಗಿದೆಯೇ?
ಆಹಾರ ಸುರಕ್ಷತಾ ಇಲಾಖೆ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದೆಯೇ?
ಬ್ರಾಂಡೆಡ್ ಕಂಪನಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ದೂರು ದಾಖಲಾಗಿದೆಯೇ?
ನಕಲಿ ಉತ್ಪನ್ನಗಳು ಬೇರೆ ಜಿಲ್ಲೆಗಳಿಗೆ ಸಾಗಾಟವಾಗುತ್ತಿವೆಯೇ?
ಆರೋಪಗಳು ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಯಾವ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ?
ಈ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖೆಗಳು ಅಧಿಕೃತ ಉತ್ತರ ನೀಡಬೇಕಾಗಿದೆ.
ಅಶ್ವಸೂರ್ಯ ನ್ಯೂಸ್ ಈತನ ದಂಧೆಯ ವಿರುದ್ಧ ಸಂಪೂರ್ಣ ಮಾಹಿತಿ ಕಲೆ ಹಾಕಲು ಮುಂದಾಗಿದೆ.ಈತನ ಅಕ್ರಮ ಸರಬರಾಜು ಸರಪಳಿ,ಯಾವ ವಾಹನದಲ್ಲಿ ಸಾಗಾಟ ವಾಗುತ್ತದೆ, ಮತ್ತು ಯಾವ ಯಾವ ಬಸ್ಸುಗಳಲ್ಲಿ ಸರಬರಾಜು ಆಗುತ್ತದೆ ಎಲ್ಲವನ್ನೂ ನಿರೀಕ್ಷಿಸಿ..
🔥 “ರಾಮ್ ರಾಮ್ ಬೀಕಾನಾ?”ನಕಲಿ ಟೀ ಪುಡಿ ಸಾಮ್ರಾಜ್ಯದ ಹಿಂದೆ ಯಾರು ಯಾರು ಕೈ ಮಿಲಾಯಿಸಿದ್ದಾರೆ.?
ಎಲ್ಲಿ ತಯಾರಾಗುತ್ತದೆ? ಎಲ್ಲಿ ಎಲ್ಲಿಗೆ ಸರಬರಾಜಾಗುತ್ತದೆ,?ಯಾವ ಯಾವ ಸಗಟು ವ್ಯಾಪಾರಿಗಳು ಈತನಿಂದ ನಕಲಿ ಬ್ರಾಂಡೆಡ್ ಟೀ ಪುಡಿ ಖರೀದಿಸುತ್ತಾರೆ.
ಹಣದ ಹರಿವು ಎಲ್ಲಿಗೆ ಹೋಗುತ್ತದೆ?
ಸಂಪೂರ್ಣ ತನಿಖಾ ವರದಿ — ಶೀಘ್ರದಲ್ಲೇ ನಿಮ್ಮ ಅಶ್ವಸೂರ್ಯ ನ್ಯೂಸ್‌ನಲ್ಲಿ.
ಸುದ್ದಿಯ ಹಿಂದೆ ಸತ್ಯ… ಜನರ ಜೊತೆ ಅಶ್ವಸೂರ್ಯ.

