ಖುಷಿಯಾಗಿ ಜಾತ್ರೆಗೆ ಹೊದ ಹುಡುಗಿ ಬರುವಾಗ ಹೊಳೆಗೆ ಹಾರಿ ಆತ್ಮಹತ್ಯೆಗೆ ಶರಣು.!! ವೀಡಿಯೋ ವೈರಲ್.!
news.ashwasurya.in
ಅಶ್ವಸೂರ್ಯ/ ಜಮ್ಮು – ಕಾಶ್ಮೀರ : ಇತ್ತೀಚಿನ ದಿನಗಳಲ್ಲಿ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ.ಎದುರಿಸಲಾಗದೆ ತಮ್ಮ ಮನಸ್ಸಿನಲ್ಲೇ ಇಟ್ಟುಕೊಂಡು ಸಾವಿನ ದಾರಿ ಹಿಡಿಯುವವರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದೆ.ಯಾವುದೊ ಒಂದು ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ದಿನೆ ದಿನೆ ಹೆಚ್ಚಾಗುತ್ತಿವೆ.ಇಂತವುದೆ ಪ್ರಕರಣಕ್ಕೆ ಸಾಕ್ಷಿ ಎನ್ನುವಂತಹ ಘಟನೆಯೊಂದು ಜಮ್ಮು- ಕಾಶ್ಮೀರದಲ್ಲಿ ನೆಡೆದಿದೆ.ಇದರ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗುತ್ತಿದೆ.
ಆ ಯುವತಿ ಖುಷಿಯಾಗಿಯೆ ಮನೆಯವರಿಗೆ ಹೇಳಿ ಜಾತ್ರೆಗೆ ತೆರಳಿದ್ದಾಳೆ ಅಲ್ಲಿ ಎನಾಯಿತೊ ಅ ದೇವರಿಗೆ ಗೊತ್ತು. ಮನಸ್ಸಿನಲ್ಲಿ ಸಾವಿಗೆ ಶರಣಾಗುವಂತಹ ನೋವೋ… ಮಾನಸಿಕ ಒತ್ತಡವೋ… ಆದರೆ, ಅ ಯುವತಿ ಅ ಕ್ಷಣದಲ್ಲಿ ತಿರ್ಮಾನಿಸಿದ್ದು ಮಾತ್ರ ಸಾಯುವ ತೀರ್ಮಾನ. ಯುವತಿಯೊಬ್ಬಳು ತಂದೆಯ ಜೊತೆ ಮೊಬೈಲ್’ನಲ್ಲಿ ಮಾತನಾಡುತ್ತ ಬೈ, ಬೈ ಪಪ್ಪಾ ಎಂದು ಹೇಳಿ ನದಿಗೆ ಜಿಗಿದ ಘಟನೆ ಜಮ್ಮು – ಕಾಶ್ಮೀರದ ದೋಡಾದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಪಾಯಲ್ ದೇವಿ ಎಂದು ಗುರುತಿಸಲಾಗಿದೆ. ಪಾಯಲ್ ಜಾತ್ರೆಗೆ ಹೋಗಿದ್ದು, ಬಳಿಕ ಪರಿಚಿತ ವ್ಯಕ್ತಿಯೊಬ್ಬರ ಜೊತೆ ಬೈಕ್ನಲ್ಲಿ ಮನೆಗೆ ಹಿಂತಿರುಗುತ್ತಿದ್ದಳು.
ಬೈಕ್ ಸೇತುವೆ ಸಮೀಪ ಬಂದಾಗ ಆಕೆಯ ದುಪ್ಪಟ್ಟಾ ಬೈಕ್ ಚಕ್ರಕ್ಕೆ ಸಿಲುಕಿಕೊಂಡಿತ್ತು.ಅಥವಾ ಅವಳೆ ಸಿಲುಕುವಂತೆ ಮಾಡಿದಳ.? ಈ ವೇಳೆ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಬೈಕ್ ನಿಲ್ಲಿಸಿ ದುಪಟ್ಟಾ ಬಿಡಿಸಲು ಮುಂದಾಗಿದ್ದರೆ. ಅದೆ ಸಮಯದಲ್ಲಿ ಪಾಯಲ್ ನದಿಯ ಸೇತುವೆಯ ಅಂಚಿಗೆ ತೆರಳಿದ್ದಾಳೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾಳೆ.
ಈ ವೇಳೆ ಅಲ್ಲೆ ಸ್ಥಳದಲ್ಲಿದ್ದವರು ಗಾಬರಿಯಾಗಿ ಆಕೆಯನ್ನು ಸಮಾಧನ ಪಡಿಸಲು ಪ್ರಯತ್ನಿಸಿದ್ದಾರೆ. ಆದರೂ ಆಕೆ ಕೇಳದೆ ಇದ್ದಾಗ ಆಕೆಯ ಜೊತೆಗಿದ್ದ ಬೈಕ್ ಸವಾರ ಪಾಯಲ್’ನ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ತಂದೆಯೂ ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವೊಲಿಸಲು ಪ್ರಯತ್ನಿಸಿದರೂ ಕೇಳದ ಆಕೆ ಇದು ನನ್ನ ಜೀವನ ಕೊನೆಯ ಕ್ಷಣ ಇದನ್ನು ಅಂತ್ಯಗೊಳಿಸಲು ನಿರ್ಧಾರಿಸಿದ್ದೇನೆ. ಬೈ ಪಪ್ಪಾ ಎಂದು ಹೇಳಿದ ಕೆಲವೇ ಕ್ಷಣದಲ್ಲಿ ಸೇತುವೆಯಿಂದ ನದಿಗೆ ಹಾರಿದ್ದಾಳೆ.!
ಇನ್ನು ವಿಷಯ ತಿಳಿಯುತ್ತಿದಂತೆ ಪೊಲೀಸರು, ರಾಜ್ಯ ವಿಪತ್ತು ಪಡೆಯ ಸಿಬ್ಬಂದಿ ಪಾಯಲ್’ಗಾಗಿ ತಕ್ಷಣ ಕಾರ್ಯಚರಣೆ ಆರಂಭಿಸಿದ್ದರು. ಆದರೆ, ಇಲ್ಲಿಯವರೆಗೆ ಪಾಯಲ್ ಮೃತದೇಹ ಪತ್ತೆಯಾಗಿಲ್ಲ. ನದಿಯಲ್ಲಿ ಶೋಧ ಕಾರ್ಯ ಮುಂದುವರೆದಿದೆ ಎಂದು ವರದಿಯಾಗಿದೆ.


