ಶಿವಮೊಗ್ಗ : ಕುಳ್ಳಿ ಕಿರಣನ ಹತ್ಯೆಮಾಡಿದ ಆರೋಪಿಗೆ ಗುಂಡು ತೂರಿಸಿದ ಪೊಲೀಸರು.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಭಾನುವಾರ ರಾಮೇನಕೊಪ್ಪದ ಇಸ್ಪೀಟ್ ಅಡ್ಡದಲ್ಲಿ ನೆಡೆದ ಸೀಗೆಹಟ್ಟಿಯ ಕುಳ್ಳಿ ಕಿರಣನ ಹತ್ಯೆಗೆ ಸಂಭಂದಿಸಿದಂತೆ ಆರೋಪಿಗಳ ಹೆಡೆಮುರಿಕಟ್ಟಲು ಕಾರ್ಯಚರಣೆಗೆ ಇಳಿದ ಪೊಲೀಸರು ಆರೋಪಿಗಳನ್ನು ಬಂಧಿಸಲು ಮುಂದಾದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದಾರೆ. ಮುಂದಾಗುವ ಅನಾಹುತ ಅರಿತ ಪೊಲೀಸರರು ಆರೋಪಿಯೊಬ್ಬನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.ಪೊಲೀಸ್ ಇಲಾಖೆಯ ಹೇಳಿಕೆಯ ನಂತರ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದ್ದು ಮುಂದಿನ ಸಂಚಿಕೆಯಲ್ಲಿ ಸಂಪೂರ್ಣ ವರದಿ ನಿಮ್ಮ ಮುಂದಿಡಲಿದ್ದೇವೆ…


