ತುಮಕೂರು :ಜ್ಯುವೆಲ್ಲರಿ ಶಾಪ್ ಶಟರ್ ಮುರಿದಿಲ್ಲ, ಬೀಗ ಒಡೆದಿಲ್ಲ.! ಖತರ್ನಾಕ್ ಕಳ್ಳ ₹10 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ.!
news.ashwasurya.in
ಅಶ್ವಸೂರ್ಯ/ತುಮಕೂರು : ಶಟರ್ ಮುರಿದಿಲ್ಲ, ಬೀಗ ಒಡೆದಿಲ್ಲ. ಆದರೂ ರಾತ್ರಿ ಬೆಳಗಾಗುವಷ್ಟರಲ್ಲಿ ಜ್ಯುವೆಲ್ಲರಿ ಅಂಗಡಿಯಲ್ಲಿದ್ದ ಸುಮಾರು ₹10 ಲಕ್ಷ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಕಳ್ಳತನದ ಹಿಂದೆ ಮನುಷ್ಯರಲ್ಲ, ಇಲಿಯೊಂದು ಕಾರಣವಾಗಿದೆ ಎಂಬುದು ಸಿಸಿಟಿವಿ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಹೌದು. ತುಮಕೂರಿನ ವಿಶ್ವಾಸ್ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದ ಅಪರೂಪದ ಘಟನೆಯೊಂದು ಅಚ್ಚರಿ ಮೂಡಿಸಿದೆ. ಅಂಗಡಿಯ ಶಟರ್ ಮುರಿಯದೇ, ಬೀಗ ಒಡೆಯದೇ ಸುಮಾರು ₹10 ಲಕ್ಷ ಮೌಲ್ಯದ 10 ಚಿನ್ನದ ಉಂಗುರಗಳು ಮತ್ತು 3 ಚಿನ್ನದ ಸರಗಳು ಕಾಣೆಯಾಗಿದ್ದವು. ಸಿಸಿಟಿವಿ ಪರಿಶೀಲಿಸಿದಾಗ ಇಲಿಯೊಂದು ಚಿನ್ನಾಭರಣಗಳನ್ನು ಒಂದೊಂದಾಗಿ ಎಳೆದುಕೊಂಡು ಹೋಗಿ ತನ್ನ ಬಿಲದಲ್ಲಿ ಸಂಗ್ರಹಿಸಿದ್ದ ದೃಶ್ಯಗಳು ಸೆರೆಯಾಗಿದ್ದು, ಬಳಿಕ ಬಿಲದಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆತುಮಕೂರಿನ ವಿಶ್ವಾಸ್ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದ ಈ ವಿಚಿತ್ರ ಘಟನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅಂಗಡಿ ತೆರೆಯುತ್ತಿದ್ದ ಸಿಬ್ಬಂದಿಗೆ ಕೆಲವು ಚಿನ್ನಾಭರಣಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.

ಸಿಸಿ ಟಿವಿ ಪರಿಶೀಲಿಸಿದಾಗ ಖತರ್ನಾಕ್ ಕಳ್ಳನ ಬಾಯ್ ಚಳಕ ಬಯಲಾಗಿದೆ.!
ಸಿಸಿಟಿವಿಯಲ್ಲಿ ಇಲಿಯೊಂದು ಅಂಗಡಿಗೆ ಸದ್ದಿಲ್ಲದೆ ನುಗ್ಗಿ, ಚಿನ್ನಾಭರಣಗಳನ್ನು ಒಂದೊಂದಾಗಿ ಬಾಯಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಬಳಿಕ ಅಂಗಡಿಯೊಳಗಿನ ಬಿಲದಲ್ಲಿ ಅವುಗಳನ್ನು ಅಡಗಿಸಿಟ್ಟಿರುವುದೂ ಪತ್ತೆಯಾಗಿದೆ. ಪರಿಶೀಲನೆ ವೇಳೆ 10 ಚಿನ್ನದ ಉಂಗುರಗಳು ಹಾಗೂ 3 ಚಿನ್ನದ ಸರಗಳನ್ನು ಇಲಿ ಬಿಲದಲ್ಲಿ ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ. ಒಟ್ಟಾರೆ ಸುಮಾರು ₹10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಬಿಲದಿಂದ ವಶಪಡಿಸಿಕೊಳ್ಳಲಾಗಿದೆಈ ಅಪರೂಪದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, “ಕಳ್ಳನಲ್ಲ… ಇಲಿ ಕದ್ದ ಚಿನ್ನ!” ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಅಂಗಡಿಯ ಸಿಸಿಟಿವಿ ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ಘಟನೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.


