ನಕಲಿ ಫೇಸ್ಬುಕ್ ಖಾತೆಗಳ ಬಗ್ಗೆ ಎಚ್ಚರ!
ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲೂ ನಕಲಿ ಫೇಸ್ಬುಕ್ ಖಾತೆ.!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ದುಷ್ಕರ್ಮಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಗಳನ್ನು ಸೃಷ್ಟಿಸಿ, ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಇತರೆ ಸಾಮಗ್ರಿಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದಾರೆ.

⚠️ ಎಚ್ಚರಿಕೆಯಿಂದಿರಿ:
❌ ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಆಕರ್ಷಕ ಆಫರ್ಗಳನ್ನು ಪರಿಶೀಲಿಸದೆ ನಂಬಬೇಡಿ.
❌ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿರುವ ಫೇಸ್ಬುಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಬೇಡಿ.
❌ ಮುಂಗಡ ಹಣ ಪಾವತಿಸುವ ಮೊದಲು ಖಾತೆಯ ನೈಜತೆಯನ್ನು ಖಚಿತಪಡಿಸಿಕೊಳ್ಳಿ.
✅ ಅನುಮಾನಾಸ್ಪದ ಫೇಸ್ಬುಕ್ ಖಾತೆಗಳು ಅಥವಾ ಪೋಸ್ಟ್ಗಳನ್ನು ತಕ್ಷಣ ವರದಿ ಮಾಡಿ.
✅ ವಂಚನೆ ನಡೆದರೆ ತಕ್ಷಣ 1930ಕ್ಕೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ.
ಸಾರ್ವಜನಿಕರು ಜಾಗರೂಕರಾಗಿರಿ. ಪರಿಶೀಲಿಸಿ ನಂತರವೇ ಹಣ ಪಾವತಿಸಿ. ನಿಮ್ಮ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಿ.
ಶಿವಮೊಗ್ಗ ಜಿಲ್ಲಾ ಪೋಲಿಸ್ ಇಲಾಖೆ.

