
ಬಳ್ಳಾರಿ : ಆರತಕ್ಷತೆಯ ದಿನವೆ ರಾತ್ರಿ ಮದುಮಗನ ಭೀಕರ ಹತ್ಯೆ.! ಬೆಚ್ಚಿಬಿದ್ದ ಜನತೆ.ಮುಂದೆನಾಯ್ತು .?
ಜುಲೈ 16ರ ಗುರುವಾರ ರಾತ್ರಿ ಸುಮಾರು 11:30ರ ವೇಳೆಗೆ ಆರತಕ್ಷತೆ ಕಾರ್ಯಕ್ರಮ ಮುಗಿದ ನಂತರ, ನಬಿ ರಸೂಲ್ಗೆ ಸ್ನೇಹಿತನೊಬ್ಬನಿಂದ ಮೊಬೈಲ್ ಕರೆ ಬಂದಿದೆ. “ಮಾತನಾಡಿ ಬರುತ್ತೇನೆ” ಎಂದು ನವವಧುವಿಗೆ ತಿಳಿಸಿ ಹೋದವರು ಮರಳಿ ಬರಲಿಲ್ಲ. ತಡರಾತ್ರಿ ಸುಮಾರು 2 ಗಂಟೆಯ ವೇಳೆಗೆ ಮನೆಯಿಂದ ಕೇವಲ 700 ಮೀಟರ್ ದೂರದಲ್ಲಿ ನಬಿ ರಸೂಲ್ ರಕ್ತದ ಮಡುವಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಸೆಮಣೆ ಏರಿದ್ದ ಮನೆಯಲ್ಲಿ ಮದುಮಗನ ಶವ ಕಂಡು ಇಡೀ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ….
news.ashwasurya.in
ಅಶ್ವಸೂರ್ಯ/ಬಳ್ಳಾರಿ : ಬಳ್ಳಾರಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ನಭೀ ರಸೂಲ್ ಎಂಬ ಯುವಕನನ್ನು ಅವರ ಆರತಕ್ಷತೆಯ ದಿನದಂದೆ ಭೀಕರವಾಗಿ ಹತ್ಯೆ ಮಾಡಲಾಗಿದೆ. ಯುವತಿಯ ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಇದೊಂದು ಮರ್ಯಾದಾ ಹತ್ಯೆ ಎಂದು ಬಲವಾಗಿ ಶಂಕಿಸಲಾಗಿದ್ದು, ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.
ಬಳ್ಳಾರಿ ನಗರದ ಬಟ್ಟಿ ಏರಿಯಾದಲ್ಲಿ ಈ ಘಟನೆ ನಡೆದಿದ್ದು ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ಸಂಭ್ರಮದ ಮನೆಯಲ್ಲಿ ಮಸಣದ ಮೌನ.!
ಹತ್ಯೆಯಾದ ಯುವಕನನ್ನು ನಭೀ ರಸೂಲ್ ಎಂದು ಗುರುತಿಸಲಾಗಿದೆ. ನಭೀ ರಸೂಲ್ ಯುವತಿಯೊಬ್ಬರನ್ನು ಪ್ರೀತಿಸಿ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ನಿನ್ನೆಯಷ್ಟೇ ಯುವಕನ ಮನೆಯಲ್ಲಿ ಅದ್ಧೂರಿಯಾಗಿ ಆರತಕ್ಷತೆ (Reception) ಕಾರ್ಯಕ್ರಮ ನಡೆದಿತ್ತು. ಸಂಬಂಧಿಕರು, ಸ್ನೇಹಿತರೆಲ್ಲರ ಸಂತೋಷದಿಂದ ತುಂಬಿದ್ದ ಮನೆಯಲ್ಲಿ ಈಗ ಸೂತಕದ ಆವರಿಸಿದೆ.
ಏನಿದು ಘಟನೆ?
ಆರತಕ್ಷತೆ ಮುಗಿದ ನಂತರ, ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ನಭೀ ರಸೂಲ್ ಮನೆಯಿಂದ ಹೊರಗೆ ಹೋಗಿದ್ದರು. ಆದರೆ, ರಾತ್ರಿ ಕಳೆದರೂ ಅವರು ಮನೆಗೆ ವಾಪಸ್ ಬಂದಿರಲಿಲ್ಲ. ಇಂದು ಬೆಳಿಗ್ಗೆ ಅವರು ಭೀಕರವಾಗಿ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಭೀ ರಸೂಲ್ ಅವರ ಪ್ರೇಮ ವಿವಾಹಕ್ಕೆ ಯುವತಿಯ ಪೋಷಕರಿಂದ ತೀವ್ರ ವಿರೋಧವಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಯುವತಿಯ ಕಡೆಯವರು ಈ ಕೃತ್ಯ ಎಸಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಪ್ರೀತಿಯನ್ನು ನಂಬಿ ಬಂದಿದ್ದ ನವವಿವಾಹಿತೆ, ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯನ್ನು ಕಳೆದುಕೊಂಡು ವಿಧವೆಯಾಗಿದ್ದಾಳೆ.!

ಘಟನಾ ಸ್ಥಳಕ್ಕೆ ಎಸ್ ಪಿ ಭೇಟಿ :
ಘಟನೆ ನಡೆದ ಸ್ಥಳಕ್ಕೆ ಬಳ್ಳಾರಿ ಎಸ್ ಪಿ ಸುಮನ್ ಡಿ. ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ದುಃಖ ಮುಡುಗಟ್ಟಿದ್ದು, ಜನರು ಭೀತಿ ಮತ್ತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ಹತ್ಯೆಗೆ ಕಾರಣವೇನು.? ಈ ಹತ್ಯೆ ಹಿಂದಿನ ಹಂತಕರು ಯಾರು.? ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎನ್ನುವುದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.


