
ವಿಜಯಪುರ ಜಿಲ್ಲೆಯ ಭೀಮಾ ತೀರದ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 6 ಜನರ ಭೀಕರ ಹತ್ಯೆ ನಡೆದಿದೆ. ಈ ದಾರುಣ ಘಟನೆಯು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ…
ವಿಜಯಪುರ : ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು.! 6 ಮಂದಿಯ ಭೀಕರ ಹತ್ಯೆ.!10 ಮಂದಿ ಆರೋಪಿಗಳ ಬಂಧನ.
news.ashwasurya.in
ಅಶ್ವಸೂರ್ಯ/ ವಿಜಯಪುರ : ಭೀಮಾ ತೀರದಲ್ಲಿ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಆರು ಮಂದಿಯನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಹತ್ತು ಮಂದಿ ಅಪರಾಧಿಗಳನ್ನು ಪೋಲಿಸರು ಬಂಧಿಸಲಾಗಿದೆ ಎಂದು ಉತ್ತರ ವಲಯದ ಐಜಿಪಿ ಸಂದೀಪ್ಪಾಟಿಲ್ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆ ಚಡಚಣ ತಾಲ್ಲೂಕಿನ ಗೋವಿಂದಪುರ ದಲ್ಲಿ ನಡೆದ ಆರು ಮಂದಿಯ ಹತ್ಯೆಯಾದ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮಹರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ್ ತಾಲ್ಲೂಕಿನ ಕೂಡ್ಲಾ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಈ ಘಟನೆಯಲ್ಲಿ ಹಂತಕರಿಂದ ಇಬ್ಬರು ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಭೀಮಾತೀರ ಎಂಬ ಹೆಸರು ಕೇಳಿದರೆ ಮೈ ನಡುಕ ಉಂಟಾಗುತ್ತದೆ.ಕಾರಣ ಈ ನೆಲದಲ್ಲಿ ಸಾಕಷ್ಟು ಹತ್ಯೆ ಪ್ರಕರಣಗಳು ಈಗಲೂ ಸಾಕ್ಷಿಯಾಗಿವೆ.!
ಸುಮಾರು 25 ಎಕರೆ ವಿವಾದಿತ ಜಮೀನು ಎರಡೂ ಕುಟುಂಬದ ಮಧ್ಯ ಕತ್ತಿ ಮಸೆಯುವಂತೆ ಮಾಡಿತ್ತು. ಅಲ್ಲದೇ ಗೊಳಗಿ ಕುಟುಂಬದ ಸಂಬಂಧಿಯಿಂದ ವಿರೋಧದ ಮಧ್ಯೆ ನಿರಾಳೆ ಕುಟುಂಬದವರು ಜಮೀನು ಖರೀದಿ ಮಾಡಿದ್ದರು.

ಕೃಷಿ ಚಟುವಟಿಕೆಗಾಗಿ ಸ್ವಚ್ಛಗೊಳಿಸಲು ನಿನ್ನೆ ಜಮೀನಿನಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ ನಿರಾಳೆ, ಈತನ ಸಹೋದರರಾದ ದುಂಡಪ್ಪ ನಿರಾಳೆ, ಶಿವಪುತ್ರಪ್ಪ ನಿರಾಳೆ, ಸಂಬಂಧಿಕರಾದ ರಾಹುಲ ನಿರಾಳೆ, ಸಮರ್ಥ ನಿರಾಳೆ ಹಾಗೂ ಇನ್ನಿಬ್ಬರು ಸಂಬಂಧಿಕರು ಕೆಲಸ ಮಾಡುತ್ತಿದ್ದರು.ದುರಾದೃಷ್ಟವೆಂಬಂತೆ ಜೆಸಿಬಿ ಚಾಲಕ ಶಬ್ಬೀರ್ ಕೂಲಿ ಕೆಲಸಕ್ಕೆ ಬಂದಿದ್ದರು.
ಜಮೀನಿನಲ್ಲಿ ಒಂದೇ ಕಡೆ ಇವರೆಲ್ಲರೂ ಇರುವ ವಿಷಯ ತಿಳಿದ ಹಂತಕರ ಗ್ಯಾಂಗ್ ಅಷ್ಟೋತ್ತಿಗಾಗಲೇ ರಾಕ್ಷಸರಾಗಿದ್ದರು ಅಪ್ಪುಗೌಡ ತನ್ನ ಸಹಚರರೊಂದಿಗೆ ಮಚ್ಚುಗಳನ್ನು ಹಾಗೂ ಡಬಲ್ ಬ್ಯಾರಲ್ ಬಂದೂಕನ್ನು ತೆಗೆದುಕೊಂಡು ಸ್ಥಳಕ್ಕೆ ದೌಡಾಯಿಸಿ ಬಂದು ಎಲ್ಲರನ್ನೂ ಸುತ್ತುವರೆದಿದ್ದರು.ಏಕಾಏಕಿ ಚೇತನ ನಿರಾಳೆ ಕುಟುಂಬದ ಮೇಲೆ ಮುಗಿ ಬಿದ್ದಿದ್ದಾರೆ.

ಜಮೀನಿನಲ್ಲಿ ಎಲ್ಲರನ್ನೂ ಅಟ್ಟಾಡಿಸಿಕೊಂಡು ಗುಂಡು ಹೊಡೆದು ನಂತರ ಮಚ್ಚಿನಿಂದ ಮನಬಂದಂತೆ ಕೊಚ್ಚಿ ಸಾಯಿಸಿದ್ದಾರೆ. ಹಂತಕರ ಕೆಂಗಣ್ಣಿಗೆ ಗುರಿಯಾಗಿ ಕೂಲಿ ಕೆಲಸಕ್ಕೆ ಬಂದಿದ್ದ ಶಬ್ಬೀರ್ ಕೂಡ ಸ್ಥಳದ ಹತ್ಯೆಯಾಗಿರುವುದು ದುರ್ದೈವ.
ಮೊದಲು ಜಮೀನಿನಲ್ಲಿದ್ದ ಆರು ಮಂದಿಯ ದೇಹಕ್ಕೆ ಗುಂಡು ಹಾರಿಸಿದ್ದು, ಅವರೆಲ್ಲರೂ ನೆಲಕ್ಕೆ ಬೀಳುತ್ತಿದ್ದಂತೆ ಮಚ್ಚುಗಳಿಂದ ಕೊಚ್ಚಿ ಹಾಕಿದ್ದಾರೆ. ಒಂದೇ ಜಾಗದಲ್ಲಿ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಕೂಲಿ ಕೆಲಸಕ್ಕೆ ಬಂದಿದ್ದ ಒಬ್ಬರು ಸೇರಿದಂತೆ ಒಟ್ಟು ಆರು ಮಂದಿಯನ್ನು ಮನಸ್ಸೊ ಇಚ್ಚೆ ಕೊಚ್ಚಿ ಗುಂಡು ಹೊಡೆದು ಹತ್ಯೆಮಾಡಿದ್ದಾರೆ.ಆರು ಮಂದಿಯ ಮೃತದೇಹಗಳನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹಂತಕ ಅಪ್ಪುಗೌಡ ಭೀಮಾತೀರದ ಹತ್ಯಾಕಾಂಡದಲ್ಲಿ ಹತನಾಗಿರುವ ಮಾಣಕಪ್ಪ ಮಾಸ್ತರ್ರ ಸಂಬಂಧಿ ಈತ. ಹೀಗಾಗಿಯೇ ಏನೋ ಹೊಂಚು ಹಾಕಿ ಸಂಚು ರೂಪಿಸಿದ್ದಾನೆ. ಒಂದೇ ದಿನ, ಒಂದೇ ಜಾಗದಲ್ಲಿ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ್ದಾನೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಥಳದಲ್ಲಿದ್ದವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಚಡಚಣ ಠಾಣೆ ಪೊಲೀಸರು ಎಸ್ಪಿ ನೇತೃತ್ವದಲ್ಲಿ ತನಿಖೆ ಶುರು ಮಾಡಿದ್ದಾರೆ. ಸ್ಥಳಕ್ಕೆ ಸೋಕೋ ತಂಡ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಂದೋಬಸ್ತ್: ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಅಲ್ಲಿ ಮೊಕ್ಕಾಂ ಹೂಡಿದ್ದಾರೆ. ಮೂರು ಡಿಎಆರ್ ಹಾಗೂ ನಾಲ್ಕು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
👥 ಬಲಿಯಾದ ದುರ್ದೈವಿಗಳುಕೊಲೆಯಾದವರಲ್ಲಿ ಐವರು ಒಂದೇ ಕುಟುಂಬದವರಾಗಿದ್ದು, ಮತ್ತೊಬ್ಬರು ಅವರ ಆಪ್ತರಾಗಿದ್ದಾರೆ:ಚಂದು ನಿರಾಳೆ (55)ದುಂಡಪ್ಪ ನಿರಾಳೆ (65)ಶಿವಪುತ್ರ ನಿರಾಳೆ (58)ರಾಹುಲ್ ನಿರಾಳೆ (25)ಸಮರ್ಥ ನಿರಾಳೆ (23)ಶಬ್ಬಿರ್ ನದಾಫ್ (45) (ಕುಟುಂಬದ ಆಪ್ತ)
ಘಟನೆಯಲ್ಲಿ ಅರವಿಂದ್ ಕಾಟಗೆ ಮತ್ತು ಸಂದೀಪ್ ಮಾನೆ ಎಂಬ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.


