ಶಿರಸಿ: ಮಂಟಪದಿಂದ ವಧು ನಾಪತ್ತೆ, MBBS ಪ್ರಿಯಕರನ ಜೊತೆಗೆ ವಧು ಎಸ್ಕೇಪ್ ಶಂಕೆ.! ಕ್ವಿಂಟಾಲ್ ಗಟ್ಟಲೆ ಮಟನ್ ಅಡುಗೆ ಪಾತ್ರೆಯಲ್ಲೆ.?
news.ashwasurya.in
ಅಶ್ವಸೂರ್ಯ/ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಗುರು ಹಿರಿಯರ ಇಚ್ಛೆಯಂತೆ ನಿಶ್ಚಯವಾಗಿದ್ದ ಮದುವೆ ನೆರವೇರುವ ಮುನ್ನವೇ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದಾಳೆ.! ಪಾಲಕರು ಪ್ರೀತಿಗೆ ಒಪ್ಪದ ಕಾರಣ ಬೇರೊಬ್ಬನೊಂದಿಗೆ ಮದುವೆ ನಿಶ್ಚಯಿಸಿದ್ದರು. ಈ ಘಟನೆಯಿಂದ ಮದುವೆ ರದ್ದಾಗಿದ್ದು, ಯುವತಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನೇನು ಮದುವೆಯ ಕಾರ್ಯ ನಡೆಯ ಬೇಕಿತ್ತು ಯುವತಿ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆ ಮಂಟಪದಲ್ಲಿ ಸಡಗರದಿಂದ ನಡೆಯಬೇಕಿದ್ದ ಕಾರ್ಯಕ್ರಮ ಕ್ಷಣಾರ್ಧದಲ್ಲಿ ಗೊಂದಲ ಮತ್ತು ಗಲಾಟೆಗೆ ಕಾರಣವಾಯ್ತು.ಮದುವೆ ಮನೆ ರಣರಂಗವಾಯ್ತು
ಶಿರಸಿ ಪಟ್ಟಣದ ಮುಸ್ಲಿಂ ಗಲ್ಲಿಯ ನಿವಾಸಿಯಾದ ಸಿಫಾ (25) ಎಂಬ ಯುವತಿ, ತನಗೆ ನಿಶ್ಚಯಗೊಂಡ ಮದುವೆಗೆ ಕೆಲವೇ ಗಂಟೆಗಳ ಮುನ್ನ ನಾಪತ್ತೆಯಾಗಿದ್ದಾಳೆ.! ಕುಟುಂಬದ ಮಾಹಿತಿಯ ಪ್ರಕಾರ, ಸಿಫಾ ಎಂಬಿಬಿಎಸ್ ಓದುತ್ತಿರುವ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಈ ಸಂಬಂಧವನ್ನು ಒಪ್ಪದ ಪಾಲಕರು, ತುರ್ತಾಗಿ ಶಿರಸಿಯ ಅಬ್ರಾರ್ ಎಂಬಾತನೊಂದಿಗೆ ಆಕೆಯ ಮದುವೆಯನ್ನು ನಿಶ್ಚಯಿಸಿದ್ದರು.

MBBS ಪ್ರಿಯಕರನೊಂದಿಗೆ ವಧು ಎಸ್ಕೇಪ್.!
ಇಂದು ಬೆಳಿಗ್ಗೆ ಶಿರಸಿಯ ಉಸುರಿ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಆದರೆ, ಮದುವೆಯ ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ, ಬೆಳ್ಳಂಬೆಳಿಗ್ಗೆ ಸಿಫಾ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಈ ಘಟನೆ ಕುಟುಂಬದವರಿಗೆ ಆಘಾತ ತಂದಿದೆ.
ಮದುವೆಗೆಂದು ಮಾಡಿದ್ದ ಕ್ವಿಂಟಲ್ಗಟ್ಟಲೆ ಮಟನ್ ಹಾಗೂ ಚಿಕನ್ ಅಡುಗೆ ಎಲ್ಲಾವು ತಪ್ಪಲೆಯಲ್ಲೆ ಉಳಿದಿದೆ. ಕುಟುಂಬ
ಮದುವೆ ಸಮಾರಂಭಕ್ಕಾಗಿ ಕ್ವಿಂಟಲ್ಗಟ್ಟಲೆ ಮಟನ್ ಹಾಗೂ ಚಿಕನ್ ಸಿದ್ಧಪಡಿಸಲಾಗಿದ್ದರೂ, ಕಾರ್ಯಕ್ರಮವೇ ರದ್ದುಪಟ್ಟ ಕಾರಣ ಅವೆಲ್ಲವೂ ವ್ಯರ್ಥವಾಯ್ತು. ಮಗಳ ನಾಪತ್ತೆಯ ಹಿನ್ನೆಲೆಯಲ್ಲಿ, ಸಿಫಾ ಅವರ ತಂದೆ ಝಹೀರ್ ಖಾನ್ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಯುವತಿಯನ್ನು ಪತ್ತೆಹಚ್ಚಲು ಕಾರ್ಯಾಚರಣೆಗೆ ಇಳಿದಿದ್ದರೆ.
ಒಟ್ಟಿನಲ್ಲಿ, ಪ್ರೀತಿ ಮತ್ತು ಕುಟುಂಬದ ನಿರ್ಧಾರಗಳ ನಡುವೆ ಉಂಟಾದ ಕಲಹ ವಧು ಎಸ್ಕೇಪ್ ನೊಂದಿಗೆ ಬೆಳಕಿಗೆ ಬಂದಿದ್ದು, ಸ್ಥಳೀಯವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ ಮುಂದೆನಾಗ ಬಹುದು ಎನ್ನುವುದು ಮಾತ್ರ ವಧು ಸಿಕ್ಕ ಬಳಿಕ ಬಯಲಾಗಲಿದೆ.ಆದರೂ ಹೆಣ್ಣು ಮಕ್ಕಳು ಹೆತ್ತವರ ಮನಸ್ಸು ನೋಯಿಸಿ ಬದುಕಲು ಸಾಧ್ಯವೆ.? ಹೆತ್ತು ಹೊತ್ತು ಸಾಕಿಸಲುಹಿದ ಹೆತ್ತವರ ಎದೆಯ ಮೇಲೆ ಕಾಲಿಟ್ಟು ನಡು ಹಾದಿಯಲ್ಲಿ ಬಂದ ಯಾವೋನೊ ಪ್ರೀತಿಸಿದವನ ಜೊತೆಗೆ ಓಡಿ ಹೋಗುವ ಹೆಣ್ಣು ಮಕ್ಕಳಿಗೆ ಎನನ್ನ ಬೇಕು.?


