
ಕಾನ್ಸ್ಟೇಬಲ್ ಅಕ್ರಮ ಸಂಬಂಧ… ಪ್ರೇಯಸಿ ಹುಚ್ಚಾಟಕ್ಕೆ ಪೋಲಿಸಪ್ಪನ ಹೆಂಡತಿ ಮಗಳು ಬಲಿ.!
ಸರೋಜಿನಿ ಮೊದಲು ಅಲ್ಲಿ ಪೊಲೀಸಪ್ಪನ ಮಡದಿ ರೀನಾ ಯಾದವ್ ಜೊತೆಗೆ ಜಗಳ ತೆಗೆದಿದ್ದು ಅಲ್ಲದೆ ಅವಳ ಮೇಲೆ ಏಕಾಏಕಿ ನುಗ್ಗಿ ಚಾಕುವಿನಿಂದ ರೀನಾಗೆ ಇರಿದಿದ್ದಾಳೆ. ಹಲ್ಲೆ ನಡೆಸಿ ನಂತರ ಆಕೆಯ ಮಕ್ಕಳ ಮೇಲೂ ಚಾಕುವಿನಿಂದ ದಾಳಿ ಮಾಡಿದ್ದಾಳೆ. ಮನೆಯಲ್ಲಿ ನಿದ್ದೆ ಮಾಡುತ್ತಿದ್ದ 9 ವರ್ಷದ ಆದಿತ್ಯ ಎಂಬ ಹುಡುಗನ ಮೇಲೂ ಚಾಕವಿನಿಂದ ಹಲ್ಲೆ ಮಾಡಿದ್ದಾಳೆ.
ತನ್ನ ಮಕ್ಕಳ ಮೇಲೆ ಹಲ್ಲೆ ನಡೆಸಬೇಡ ಎಂದು ರೀನಾ ಯಾದವ್ ಕೇಳಿಕೊಂಡರೂ ಕೇಳದ ಆರೋಪಿ. ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾಳೆ. ಒಬ್ಬಳು ಹುಡುಗಿ ಸ್ನಾನಗೃಹದಲ್ಲಿ ಅಡಗಿಕೊಂಡಿದ್ದಳು…..

news.ashwasurya.in
ಅಶ್ವಸೂರ್ಯ/ಛತ್ತೀಸಗಢ : ದಿನನಿತ್ಯ ಅಕ್ರಮ ಸಂಬಂಧಗಳ ಪ್ರಕರಣಗಳು ಹೆಚ್ಚುತ್ತಿದ್ದು ಈ ಹಾದಿಯಲ್ಲಿ ಕೊಲೆ, ಹಲ್ಲೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಮದುವೆಯಾಗಿದ್ದರೂ ಇನ್ನೊಬ್ಬರ ಜೊತೆ ಸಂಬಂಧ ಹೊಂದಿ ಪ್ರಾಣ ಕಳೆದುಕೊಳ್ಳುವವರು, ಮೋಸ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ,ದೇಶಾದ್ಯಂಸಾಕಷ್ಟು ಪ್ರಕರಣಗಳು ವರದಿಯಾಗಿವೆ.ಇಂತಹುದೇ ಒಂದು ಪ್ರಕರಣ ಛತ್ತೀಸಗಢದಲ್ಲಿ ಬೆಳಕಿಗೆ ಬಂದಿದ್ದು ಇದು ರಕ್ಷಣೆ ನೀಡಬೇಕಾದ ಪೊಲೀಸಪ್ಪನ ಅಕ್ರಮ ಸಂಭಂದದ ವರದಿ…
ಛತ್ತೀಸಗಢದಲ್ಲಿ 25 ವರ್ಷದ ಮಹಿಳೆಯೊಬ್ಬಳು ತಾನು ಸಂಬಂಧ ಹೊಂದಿದ್ದ ಕಾನ್ಸ್ಟೇಬಲ್ ಮನೆಗೆ ಏಕಾಏಕಿ ನುಗ್ಗಿ ಆತನ ಪತ್ನಿ ಮತ್ತು ಮೂವರು ಮಕ್ಕಳಿಗೆ ಚಾಕುವಿನಿಂದ ಇರಿದಿರುವ ಭಯಾನಕ ಘಟನೆ ನಡೆದಿದೆ.
ಆರೋಪಿ ಸರೋಜಿನಿ ಭಾರದ್ವಾಜ್ ತನ್ನ ಕುಟುಂಬದ ಊರಿಗೆ ಪ್ರಯಾಣಕ್ಕಾಗಿ ಟಿಕೆಟ್ ಖರೀದಿಸಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಳು. ಬಳಿಕ ದುರ್ಗದಲ್ಲಿರುವ ಕಾನ್ಸ್ಟೇಬಲ್ ಲಲಿತೇಶ್ ಯಾದವ್ ಅವರ ಫ್ಲಾಟ್ಗೆ ಹೋಗಿದ್ದಾಳೆ.

ಅಲ್ಲಿ ಸರೋಜಿನಿ ಮೊದಲು ಅಲ್ಲಿ ಪೊಲೀಸಪ್ಪನ ಮಡದಿ ರೀನಾ ಯಾದವ್ ಜೊತೆಗೆ ಜಗಳ ತೆಗೆದಿದ್ದು ಅಲ್ಲದೆ ಅವಳ ಮೇಲೆ ಏಕಾಏಕಿ ನುಗ್ಗಿ ಚಾಕುವಿನಿಂದ ರೀನಾಗೆ ಇರಿದಿದ್ದಾಳೆ. ಹಲ್ಲೆ ನಡೆಸಿ ನಂತರ ಆಕೆಯ ಮಕ್ಕಳ ಮೇಲೂ ಚಾಕುವಿನಿಂದ ದಾಳಿ ಮಾಡಿದ್ದಾಳೆ. ಮನೆಯಲ್ಲಿ ನಿದ್ದೆ ಮಾಡುತ್ತಿದ್ದ 9 ವರ್ಷದ ಆದಿತ್ಯ ಎಂಬ ಹುಡುಗನ ಮೇಲೂ ಚಾಕವಿನಿಂದ ಹಲ್ಲೆ ಮಾಡಿದ್ದಾಳೆ.
ತನ್ನ ಮಕ್ಕಳ ಮೇಲೆ ಹಲ್ಲೆ ನಡೆಸಬೇಡ ಎಂದು ರೀನಾ ಯಾದವ್ ಕೇಳಿಕೊಂಡರೂ ಕೇಳದ ಆರೋಪಿ. ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾಳೆ. ಒಬ್ಬಳು ಹುಡುಗಿ ಸ್ನಾನಗೃಹದಲ್ಲಿ ಅಡಗಿಕೊಂಡಿದ್ದಳು. ಇನ್ನೊಬ್ಬಳು ಮನೆಯಿಂದ ತಪ್ಪಿಸಿಕೊಂಡು ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ತಕ್ಷಣ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು, ಆರೋಪಿತೆ ಕೈಯಲ್ಲಿದ್ದ ರಕ್ತಸಿಕ್ತ ಚಾಕುವನ್ನು ಕಿತ್ತುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿ ಮತ್ತು ಆಯುಧವನ್ನು ಪೊಲೀಸರು ವಶಕ್ಕೆ ಪಡೆದಿದ್ದು. ಹಲ್ಲೆಯಿಂದ ಗಾಯಗೊಂಡಿದ್ದ ಕಾನ್ಸ್ಟೆಬಲ್ ಪತ್ನಿ ರೀನಾ ಯಾದವ್ ಮತ್ತು ಆಕೆಯ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ರೀನಾ ಮತ್ತು ಆಕೆಯ ಮಗ ಸಾವನ್ನಪ್ಪಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.


