ಹೊಳೆಹೊನ್ನೂರು : ಇಸ್ಪೀಟ್ ಆಡಬೇಕೆ.? “ಹೊಳೆಹೊನ್ನೂರು ಠಾಣಾ ಸರಹದ್ದಿಗೆ ಬನ್ನಿ” ಕೈಬೀಸಿ ಕರೆಯುತ್ತಿವೆ ಅಂದರ್ ಬಾಹರ್ ಅಡ್ಡೆಗಳು.! ಮೌನಕ್ಕೆ ಜಾರಿದ ಪೊಲೀಸರು.!? ಶಾಸಕರು ಸೈಲೆಂಟು.?

ಹೊಳೆಹೊನ್ನೂರು ಪಟ್ಟಣದ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕೆಲವು ಮಂದಿ ರಾಜಕಾರಣಿಗಳ ಗೆಟಪ್ ಧರಿಸಿ ಅಡ್ಡ ಕಸುಬಿ ದಂಧೆಗೆ ಇಳಿದಿದ್ದಾರೆ, ಕೆಲವು ಮನೆಹಾಳರಿಂದ ಸಂಪೂರ್ಣ ನಲುಗಿ ಹೋಗಿದೆ ಹೊಳೆಹೊನ್ನೂರು ಪಟ್ಟಣ.!ಈ ಜೂಜಿನಡ್ಡೆಯ ಹರಾಮಿಗಳ ಹಣದಾಹದ ವಾಂಚೆಗೆ ಕೆಲವು ಕೂಲಿ ಕಾರ್ಮಿಕರು. ರೈತರು, ಮಧ್ಯಮವರ್ಗದ ಮಂದಿನಯ ಜೋತೆಗೆ ಊರಿನ ಕೆಲವು ಯುವಕರು ಅಂದರ್ ಬಾಹರ್ ಇಸ್ಪೀಟ್ ಅಡ್ಡದ ದಾಸರಾಗಿದ್ದಾರೆ.ಇಲ್ಲಿಯ ವಿಷೇಶವೆಂದರೆ ಹೊರ ಜಿಲ್ಲೆಯ ಜೂಜಾಡುವ ಫಂಟರ್ಗಳು ಇಲ್ಲಿಯ ಅಂದರ್ ಬಾಹರ್ ಇಸ್ಪೀಟ್ ಅಡ್ಡೆಯಲ್ಲಿ ದಿನನಿತ್ಯ ಕಾಣಸಿಗುತ್ತಾರೆ ಒಟ್ಟಿನಲ್ಲಿ ಭರ್ಜರಿಯಾಗಿ ನೆಡೆಯುವ ಈ ಜೂಜಿನಡ್ಡೆಯ ದಾಸರಾಗಿರುವ ಸಾಕಷ್ಟು ಮಂದಿ ಇದ್ದಬದ್ದ ಹಣ ಆಸ್ತಿಯನ್ನು ಕಳೆದುಕೊಂಡು ಬಿದಿಗೆ ಬಿದ್ದಿದ್ದಾರೆ ಅ ಮಟ್ಟಕ್ಕೆ ಇಲ್ಲಿಯ ಅಂದರ್ ಬಾಹರ್ ಇಸ್ಪೀಟ್ ಅಡ್ಡೆಯ ಹಣದಾಹಿಗಳು ಅಮಾಕ ಮಂದಿಯ ಹಣವನ್ನು ನುಂಗು ನೇಣೆದಿದ್ದಾರೆ…ಹೊಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಅಂದರ್ ಬಾಹರ್ ಅಕ್ರಮ ಇಸ್ಪೀಟ್ ಆಟ ಲಕ್ಷಾಂತರ ರೂಪಾಯಿ ವಹಿವಾಟಿನೊಂದಿಗೆ ರಾಜ ರೋಷವಾಗಿ ನೆಡೆಯುತ್ತಿದ್ದರು ಪೊಲೀಸರು ಮಾತ್ರ ಮೌನಕ್ಕೆ ಜಾರಿದ್ದಾರೆ….ಕಾರಣ ಅ ದೇವರಿಗೆಗೋತ್ತು.? ಅ ಮಟ್ಟದ ದೊಡ್ಡ ಮೊತ್ತದ ಗಂಟು ಠಾಣೆಯ ಮೆಟ್ಟಿಲೇರಿದಿಯಾ ಎನ್ನುವುದನ್ನು ಅಲ್ಲಿಯ ಪೊಲೀಸರೆ ಉತ್ತರಿಸಬೇಕಿದೆ.!ಇಲ್ಲ ಮುಲಾಜಿಲ್ಲದೆ ಈ ಅಂದರ್ ಬಾಹರ್ ಇಸ್ಪೀಟ್ ಅಡ್ಡದ ಖದೀಮರನ್ನು ಠಾಣೆಗೆ ಎಳೆದುತಂದು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಗರಿಬಿಚ್ಚಿರುವ ಅಂದರ್ ಬಾಹರ್ ಅಕ್ರಮ ಇಸ್ಪೀಟ್ ದಂಧೆಗೆ ಬ್ರೇಕ್ ಹಾಕಿ ತೋರಿಸಿ ದಯವಿಟ್ಟು ಒಂದಷ್ಟು ಅಮಾಯಕ ಮಂದಿಯ ಪ್ರಾಣ, ಹಣ, ಮಾನ,ಸಂಸಾರ ಉಳಿಸಿದ ಪುಣ್ಯ ನಿಮ್ಮದಾಗುತ್ತದೆ…. ನಾವೆ ನಿಮ್ಮ ಕರ್ತವ್ಯವನ್ನು ಮೆಚ್ಚಿ ಪತ್ರಿಕೆಗಳಲ್ಲಿ ಬರೆದು ಅಭಿನಂದಿಸುತ್ತೇವೆ….
ಸಾಂದರ್ಭಿಕ ಚಿತ್ರ .
news.ashwasurya.in
ಅಶ್ವಸೂರ್ಯ/ಹೊಳೆಹೊನ್ನೂರು : ಮಲೆನಾಡ ತವರು ಜಿಲ್ಲೆ ಶಿವಮೊಗ್ಗ ಸುಸಂಸ್ಕೃತರು, ಬುದ್ಧಿಜೀವಿಗಳ ಬಿಡು..ರಮಣೀಯ ತಾಣಗಳ ಒಡಲು..ಎನ್ನುವ ಹಿರಿಮೆ ಇತ್ತಾದರು, ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ತುಂಗಾ ಭದ್ರಾ ಎರಡು ಪವಿತ್ರ ನದಿಗಳ ಸಂಗಮದ ಪುಣ್ಯ ಕ್ಷೇತ್ರ.ಆದರೆ ಈ ಪವಿತ್ರ ಕ್ಷೇತ್ರವನ್ನು ಮೈಲಿಗೆ ಮಾಡಲೆಂದೆ ಒಂದಷ್ಟು ಮಂದಿ ರಾಜಕೀಯ ಪಕ್ಷದ ಲೇಬಲ್ ಅಂಟಿಸಿಕೊಂಡು ಅಕ್ರಮ ಅಂದರ್ ಬಾಹರ್ ಇಸ್ಪೀಟ್ ಆಟದ ಜೂಜಿನಡ್ಡೆಯ ಕಿಂಗ್ ಪಿನ್ ಗಳಾಗಿದ್ದಾರೆ.ತುಂಗಾ-ಭದ್ರಾ ನದಿಗಳ ತಟ ಅಂದರ್ ಬಾಹರ್ ಇಸ್ಪೀಟ್ ಅಡ್ಡೆಯಾಗಿ ಹೋಗಿದೆ.! ಹೊಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಧಂದೆ ಭರ್ಜರಿಯಾಗಿ ಚಿಗಿತುಕೊಂಡಿದೆ.! ಇತ್ತೀಚೆಗಂತೂ ಹೊಳೆಹೊನ್ನೂರು ಠಾಣಾ ಸರಹದ್ದು ಎಲ್ಲಾ ಅಕ್ರಮಗಳ ಮೈದಾನವಾಗಿದೆ.ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಹಗಲು ರಾತ್ರಿ ಎನ್ನದೆ ನಡೆಯುತ್ತಿರುವ ಈ ಕಾನೂನುಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರು ಆತಂಕಗೊಂಡಿದ್ದು, ಪೊಲೀಸರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಅದರಲ್ಲೂ ಅಕ್ರಮ “ಅಂದರ್ ಬಾಹರ್” ಇಸ್ಪೀಟ್ ಆಟವಂತೂ ಕೇಲವರ ನಿದ್ದೆಗೆಡಿಸಿದೆ.ಹೊಳೆಹೊನ್ನೂರು ತಾಲೂಕಿನಲ್ಲಿ ಇಸ್ಪೀಟ್ ಎಲೆಗಳ ಸರಪರ ಸದ್ದು ಕೇಲವರ ನಿದ್ದೆ ಗೆಡಿಸಿ ಬಿದಿಗೆ ತಂದು ನಿಲ್ಲಿಸಿದೆ.! ಈ ಕಾರಣದಿಂದಲೇ ಪಟ್ಟಣದ ಒಂದಷ್ಟು ಸುಸಂಸ್ಕೃತ ಮಂದಿ “ಇಸ್ಪೀಟ್ ಆಡಲು ಹೊಳೆಹೊನ್ನೂರಿಗೆ ಬನ್ನಿ” ಇಂಥದೊಂದು ಫಲಕವನ್ನು ತಾಲೂಕಿನ ನಾಲ್ಕು ಹೆದ್ದಾರಿಯ ರಸ್ತೆಯ ಹೆಬ್ಬಾಗಿಲು ಅಳವಡಿಸುವುದೊಂದೆ ಬಾಕಿ ಇದೆ.! ಎಂದು ತಮ್ಮ ಅಳಲನ್ನೂ ತೋಡಿ ಕೊಂಡಿದ್ದಾರೆ ಅ ಮಟ್ಟಕ್ಕೆ ಅಕ್ರಮ ಅಂದರ್ ಬಾಹರ್ ಇಸ್ಪೀಟ್ ಹಡಬೆ ದಂಧೆಯ ಮೈದಾನವಾಗಿದೆ ಹೊಳೆಹೊನ್ನೂರು.ಅದರಲ್ಲೂ ಭದ್ರಾವತಿ ತಾಲ್ಲೂಕು ಕ್ಷೇತ್ರದಲ್ಲಿ ಇಸ್ಪೀಟ್ ನ ಆರ್ಭಟಕ್ಕೆ ಸಾಕಷ್ಟು ಮಂದಿ ಎಲ್ಲವನ್ನೂ ಕಳೆದುಕೊಂಡು ಬಿದಿಗೆ ಬಿದ್ದಿದ್ದಾರೆ. ಇನ್ನೂ ಹೊಳೆಹೊನ್ನೂರು ಠಾಣೆಯ ಕೂಗಳತೆ ದೂರದಲ್ಲಿ ಅಕ್ರಮ ಅಂದರ್ ಬಾಹರ್ ಇಸ್ಪೀಟ್ ದಂಧೆ ಜೋರಾಗಿ ನೆಡೆಯುತ್ತಿದೆ,

ಇಂದು ಅಂದರ್ ಬಾಹರ್ ಇಸ್ಪೀಟ್ ಅಡ್ಡೆಗಳು ಪವಿತ್ರ ಹೊಳೆಹೊನ್ನೂರು ಕ್ಷೇತ್ರವನ್ನು ಅಪವಿತ್ರಗೊಳಿಸಿದೆ ಎಂದರೆ ನೀವು ನಂಬಲೆ ಬೇಕು.!ಅದರಲ್ಲೂ ಭರ್ಜರಿಯಾಗಿ ದೊಡ್ಡ ಮೊತ್ತದ ವ್ಯವಹಾರ ನೆಡೆಯುವ ಕಟ್ಟೆಯ ಅಂದರ್ ಬಾಹರ್ ಇಸ್ಪೀಟ್ ದಂಧೆಯ ಒಡ್ಡೋಲಗಾ ಕಾನನದ ಗರ್ಭವನ್ನೆ ನಡುಗಿಸಿದೆ.ಈತನ ಇಸ್ಪೀಟ್ ಆಟದ ಅಖಾಡಕ್ಕೆ ಸಾಕಷ್ಟು ಮಂದಿ ದಾಸರಾಗಿ ಹೋಗಿದ್ದಾರೆ.ಇಲ್ಲಿಯ ಇಸ್ಪೀಟ್ ಆಟದ ಬಿರುಸಿಗೆ ಎಲ್ಲವನ್ನೂ ಕಳೆದುಕೊಂಡು ಆಕಾಶ ನೋಡುವ ಪರಿಸ್ಥಿತಿ ಕೆಲವರದ್ದಾದರೆ ಇನ್ನೂ ಕೆಲವರು ಮನೆ ಮಠ ಮಾರಿ ಎಲ್ಲಾ ಹಣವನ್ನೂ ಜೂಜಿನಡ್ಡೆಗೆ ಸುರಿದು ಬಿದಿಗೆ ಬಿಳುವ ಹಂತಕ್ಕೆ ಹೆಜ್ಜೆ ಇಟ್ಟಿದ್ದಾರೆ.. ಇನ್ನೂ ಸ್ಥಳೀಯರಲ್ಲದೆ ದಾವಣಗೆರೆ,ಶಿವಮೊಗ್ಗ, ಭದ್ರಾವತಿ, ಚನ್ನಗಿರಿ,ಚಿತ್ರದುರ್ಗ ಮತ್ತು ಚಳ್ಳಕೆರೆಯ ಅಂದರ್ ಬಾಹರ್ ಇಸ್ಪೀಟ್ ಫಂಟರ್ಗಳು ಅಂದರ್ ಬಾಹರ್ ಅಖಾಡದಲ್ಲಿ ಕಂಡುಬರುತ್ತಾತೆ.! ಅ ಮಟ್ಟಕ್ಕೆ ಇಸ್ಪೀಟ್ ನಡೆಯುತ್ತಿದ್ದರೂ ಹೊಳೆಹೊನ್ನೂರು ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.ಕ್ಷೇತ್ರದ ಶಾಸಕರು ಮೌನಕ್ಕೆ ಜಾರಿದ್ದಾರೆ.!
ಹೊಳೆಹೊನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯ ತೋಟದಲ್ಲಿ ಶಾಮಿಯಾನ ಹಾಕೀಸಿ ಅಕ್ರಮ ಅಂದರ್ ಬಾಹರ್ ಇಸ್ಪೀಟ್ ಆಟ ಆಡಿಸುತ್ತಾರೆ ಎಂದರೆ ಇನ್ನೂ ಯಾವ ಮಟ್ಟದ ಧೈರ್ಯ ನೀವೆ ಯೋಚಿಸಿ ಇಲ್ಲಿ ಅನುಮಾನ ಬರುವುದೇ ಪೋಲಿಸರ ಮೇಲೆ.? ಹೊಳೆಹೊನ್ನೂರು ಪೋಲಿಸ್ ಠಾಣೆಯಲ್ಲಿ ಪೊಲೀಸರು ಇದ್ದಾರೋ ಇಲ್ಲವೋ ಅ ದೇವರಿಗೆ ಗೊತ್ತು.? ದೊಡ್ಡ ಮಟ್ಟದಲ್ಲಿ ಅಂದರ್ ಬಾಹರ್ ಇಸ್ಪೀಟ್ ದಂಧೆ ನೆಡೆಯುತ್ತಿದ್ದರು ಪೊಲೀಸರು ಸುಮ್ಮನಿರಲು ಕಾರಣವೇನು.?
ಸಾಂದರ್ಭಿಕ ಚಿತ್ರ
ಸುತ್ತಮುತ್ತಲಿನ ಮದ್ಯಮ ವರ್ಗದ ಮಂದಿ, ಬಡ ರೈತರು ಮತ್ತು ಕೂಲಿ ಕಾರ್ಮಿಕರು ಜೂಜಿನಡ್ಡೆಯ ದಾಸರಾಗಿದ್ದಾರೆ. ಮನೆ-ಮಟ, ಹೊಲ-ಗದ್ದೆ ಮತ್ತು ಇದ್ದಬದ್ದ ಬಂಗಾರ ಬೆಲೆಬಾಳುವ ವಸ್ತುಗಳನ್ನು ಅಂದರ್ ಬಾಹರ್ ಇಸ್ಪೀಟ್ ನ ಜೂಜಿನಡ್ಡೆಯಲ್ಲಿ ಕಳೆದುಕೊಂಡಿದ್ದಾರೆ.! ಜೂಜಿನಡ್ಡೆಯ ದಾಸರಾಗಿ ದಿನ ನಿತ್ಯ ಆಡಲು ಹಣಕ್ಕಾಗಿ ಇದ್ದಬದ್ದ ಆಸ್ತಿ ಒಡವೆ ಬಂಗಾರಮಾರಿ ತಮ್ಮ ಸಂಸಾರವನ್ನು ಬಿದಿಗೆ ತಂದಿಡುವ ಮೊದಲೇ ಪೊಲೀಸ್ ಇಲಾಖೆ ಎಚ್ಚೆತ್ತು ಕೊಳ್ಳಬೇಕಿದೆ. ಮಾಮೂಲು ಪಡೆಯುವ ಕೆಲವು ಪೊಲೀಸರೇ ಈ ಅಕ್ರಮ ಇಸ್ಪೀಟ್ ದಂಧೆಗೆ ನೆರಳಾಗಿ ನಿಂತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.!ಪತ್ರಿಕೆಯು ಎರಡನೇ ಭಾಗದಲ್ಲಿ ಇಲ್ಲಿಯ ಅಂದರ್ ಬಾಹರ್ ಇಸ್ಪೀಟ್ ಅಡ್ಡೆಯ ಮಹಾನ್ ಕುಳನೊಬ್ಬನ ಅಕ್ರಮ ಇಸ್ಪೀಟ್ ಜೂಜಾಟದ ಅಡ್ಡೆಯ ಸವಿವರವಾದ ವರದಿಯನ್ನು ನಿಮ್ಮ ಮುಂದಿಡಲಿದೆ.

ತಾನೊಬ್ಬ ಮಹಾನ್ ರಾಜಕೀಯ ನಾಯಕನಂತೆ ಫೊಸುಕೊಡುತ್ತಾ ಜಿಲ್ಲಾ ಮಂತ್ರಿಗಳನ್ನು ಸ್ಥಳೀಯ ಶಾಸಕರು ಮತ್ತು ರಾಜಕೀಯ ನಾಯಕರ ಜೋತೆಗೆ ಓಡಾಡಿಕೊಂಡೆ ಈ ಅಕ್ರಮ ಅಂದರ್ ಬಾಹರ್ ಇಸ್ಪೀಟ್ ದಂಧೆಯನ್ನು ನಿರಂತರವಾಗಿ ನಡೆಸಿಕೊಂಡು ಹೋಗುತ್ತಿದ್ದಾನೆ ಎಂದರೆ ನೀವು ನಂಬಲೆ ಬೇಕು.! ಇತನ ಇಸ್ಪೀಟ್ ಅಡ್ಡೆಯಲ್ಲಿ ನಿತ್ಯ ಮಡದಿ ಮಕ್ಕಳ ಬದುಕನ್ನು ಬದಿಗಿಟ್ಟು ಹೆಂಡತಿಗೆ ಕಟ್ಟಿದ ತಾಳಿ ಬೆಲೆಬಾಳುವ ವಸ್ತುಗಳನ್ನು ಮಾರಿ ಇಸ್ಪೀಟ್ ಅಡ್ಡೆಯ ದಾಸರಾಗಿದ್ದಾರೆ.ಈ ಎಲ್ಲವನ್ನೂ ಎಳೆ ಎಳೆಯಾಗಿ ನಿಮ್ಮ ಮುಂದಿಡಲಿದ್ದೇವೆ….
ನಿರೀಕ್ಷಿಸಿ ಮುಂದಿನ ಸಂಚಿಕೆ, ಭಾಗ-2 ರಲ್ಲಿ


