Headlines

ಶಿವಮೊಗ್ಗ : ಶಿವಮೊಗ್ಗ ಹೊರವಲಯದ ತುಂಗಾ ತೀರದಲ್ಲಿ ನೆಡೆದ ಟ್ರಯಲ್ ಬ್ಲಾಸ್ಟ್ ಪ್ರಕರಣದ 3ನೇ ಅಪರಾಧಿಗೆ 6 ವರ್ಷ ಜೈಲು.

ಶಿವಮೊಗ್ಗ: 2022ರಲ್ಲಿ ಶಿವಮೊಗ್ಗ ಹೊರವಲಯದ ತುಂಗಾ ನದಿ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ (ಪ್ರಾಯೋಗಿಕ ಬಾಂಬ್ ಸ್ಫೋಟ) ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂರನೇ ಅಪರಾಧಿ ಅರಾಫತ್ ಅಲಿಗೆ ಬೆಂಗಳೂರಿನ ಎನ್‌ಐಎ (NIA) ವಿಶೇಷ ನ್ಯಾಯಾಲಯವು 6 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 47,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಮುಖ್ಯಾಂಶಗಳು:
ಅಪರಾಧಿ: ತೀರ್ಥಹಳ್ಳಿ ಮೂಲದ ಅರಾಫತ್ ಅಲಿ, ಈತ ISIS ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಮತ್ತು ಹೊರ ದೇಶದಲ್ಲಿ ‌ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದ.

ಬಂಧನ: 2023ರ ಸೆಪ್ಟೆಂಬರ್‌ನಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್‌ಐಎ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ.
ಹಿನ್ನೆಲೆ: 2022ರ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ತುಂಗಾ ನದಿ ತೀರದಲ್ಲಿ IED (ಇಂಪ್ಯೂವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್) ಬಳಸಿ ಟ್ರಯಲ್ ಬ್ಲಾಸ್ಟ್ ನಡೆಸಲಾಗಿತ್ತು. ಈತ ಉಗ್ರ ಕೃತ್ಯಕ್ಕೆ ಹಣಕಾಸು ನೆರವು ಮತ್ತು ಯುವಕರನ್ನು ಪ್ರೇರೇಪಿಸಿದ ಆರೋಪ ಸಾಬೀತಾಗಿದೆ.

ಇದಕ್ಕೂ ಮುನ್ನ: 2025ರ ನವೆಂಬರ್‌ನಲ್ಲಿ ಇದೇ ಪ್ರಕರಣದ ಇತರ ಇಬ್ಬರು ಆರೋಪಿಗಳಿಗೆ (ಮೊಹಮ್ಮದ್ ಜಬಿಯುಲ್ಲಾ, ನದೀಂ ಫೈಜಲ್) 6 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಪ್ರಕರಣದಲ್ಲಿ ಒಟ್ಟು 12 ಮಂದಿ ಆರೋಪಿಗಳಿದ್ದು, ಈವರೆಗೆ ಮೂವರಿಗೆ ಶಿಕ್ಷೆಯಾಗಿದೆ. ಇನ್ನುಳಿದ 9 ಜನ ಆರೋಪಿಗಳ ವಿಚಾರಣೆ ಮುಂದುವರಿದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!