
ಬೆಂಗಳೂರು: ಹಫ್ತಾ ಕೊಡದ ಕಾರಣಕ್ಕೆ ವ್ಯಕ್ತಿಯೊಬ್ಬನು ಬ್ಯಾಟ್ನಿಂದ ಹೊಡೆದು ಕೊಂದ ರೌಡಿಗಳು.! ಮಕ್ಕಳ ಎದುರೇ ಪ್ರಾಣಬಿಟ್ಟ ವ್ಯಕ್ತಿ.

news.ashwasurya.in

ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ಹಫ್ತಾ ನೀಡದಿದ್ದಕ್ಕೆ ಗ್ಯಾರೇಜ್ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಬ್ಯಾಟ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಲ್ಸನ್ ಗಾರ್ಡನ್ ಏರಿಯಾದ ಬಡಾ ಮಖಾನ್ ಬಳಿ ನಡೆದಿದೆ.
ಬಡಾ ಮಖಾನ್ ಬಳಿ ಗ್ಯಾರೇಜ್ ನಡೆಸುತ್ತಿದ್ದ ರಶೀದ್ ಪಾಷಾ ಇತ್ತೀಚೆಗಷ್ಟೇ ಅಂಗಡಿಯ ಮೇಲ್ಭಾಗದಲ್ಲಿ ಮೋಲ್ಡ್ ಹಾಕಿಸಿದ್ದನು. ಹೀಗಾಗಿ ಕೆಲ ಪುಡಿ ರೌಡಿಗಳು 50 ಸಾವಿರ ಹಣ ನೀಡುವಂತೆ ರಶೀದ್ ಪಾಷಾಗೆ ಬೆದರಿಕೆ ಒಡ್ಡಿದ್ದಾರೆ.
ಹಫ್ತಾ ಕೊಡಲ್ಲ ಎಂದು ಆರೋಪಿಗಳಿಗೆ ಭಾನುವಾರ ಬೆಳಗ್ಗೆ ರಶೀದ್ ಹೇಳಿದ್ದಾರೆ. ಇದರಿಂದ ಕೆರಳಿದ ಗುಂಪು ರಾತ್ರಿ 8.30ರ ಸುಮಾರಿಗೆ ಮತ್ತೆ ಗ್ಯಾರೇಜ್ ಬಳಿ ಬಂದು ಹಫ್ತಾ ಕೊಡುವಂತೆ ತಾಕೀತು ಮಾಡಿದ್ದಾರೆ.
ಆತ ಕೊಡಲು ಒಪ್ಪದಿದ್ದಾಗ ರೌಡಿಗಳು ಆತನ ಇಬ್ಬರು ಮಕ್ಕಳ ಎದುರೇ ರಶೀದ್ ಪಾಷಾ ಮೇಲೆ ಬ್ಯಾಟ್ ಮತ್ತು ದೊಣ್ಣೆಯಿಂದ ಗುಂಪು ಮನಬಂದಂತೆ ಥಳಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ರಶೀದ್ ಸ್ಥಳದಲ್ಲೇ ಕುಸಿದುಬಿದ್ದು ಮಕ್ಕಳ ಎದುರೆ ಪ್ರಾಣ ಬಿಟ್ಟಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಿಲ್ಸನ್ ಗಾರ್ಡನ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಭಲೇ ಬಿಸಿದ್ದಾರೆ.


