
ತೀರ್ಥಹಳ್ಳಿ : ಇಸ್ಪೀಟ್ ಆಡಬೇಕೆ.? “ತೀರ್ಥಹಳ್ಳಿ ಪಟ್ಟಣಕ್ಕೆ ಬನ್ನಿ” ಕೈಬೀಸಿ ಕರೆಯುತ್ತಿವೆ ಕ್ಲಬ್ಬುಗಳು.!ಮೌನಕ್ಕೆ ಜಾರಿದ ಪೊಲೀಸರು.!? ಖಡಕ್ ಶಾಸಕರು ಸೈಲೆಂಟು.?
news.ashwasurya.in
ಅಶ್ವಸೂರ್ಯ/ತೀರ್ಥಹಳ್ಳಿ : ಎಂದೊಡನೆ ನೆನಪಾಗುವುದು ಮಲೆನಾಡಿನ ತವರು.. ಸುಸಂಸ್ಕೃತರು ಬುದ್ಧಿಜೀವಿಗಳ ಬಿಡು..ರಮಣೀಯ ತಾಣಗಳ ಒಡಲು..ಎಂದು ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ ತೀರ್ಥಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟ, ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ಧಂದೆ ಭರ್ಜರಿಯಾಗಿ ಬಲಿತುಕೊಂಡಿದೆ.! ಇತ್ತೀಚಿಗಂತು ತೀರ್ಥಹಳ್ಳಿ ಠಾಣಾ ಸರಹದ್ದು ಎಲ್ಲಾ ಅಕ್ರಮಗಳ ಮೈದಾನವಾಗಿದೆ.ತೀರ್ಥಹಳ್ಳಿ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಹಗಲು ರಾತ್ರಿ ಎನ್ನದೆ ನಡೆಯುತ್ತಿರುವ ಈ ಕಾನೂನುಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರು ಆತಂಕಗೊಂಡಿದ್ದು, ಪೊಲೀಸರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಅದರಲ್ಲೂ ಇಸ್ಪೀಟ್ ಅಕ್ರಮ ಆಟವಂತೂ ಕೇಲವರ ನಿದ್ದೆಗೆಡಿಸಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಇಸ್ಪೀಟ್ ಎಲೆಗಳು ಸರಪರ ಸದ್ದು ಮಾಡುತ್ತಿದೆ, ಈ ಕಾರಣದಿಂದಲೇ ಪಟ್ಟಣದ ಒಂದಷ್ಟು ಸುಸಂಸ್ಕೃತ ಮಂದಿ “ಇಸ್ಪೀಟ್ ಆಡಲು ತೀರ್ಥಹಳ್ಳಿಗೆ ಬನ್ನಿ” ಇಂಥದೊಂದು ಫಲಕವನ್ನು ಮಲೆನಾಡಿನ ಹೆಬ್ಬಾಗಿಲು ಎಂದು ಬಿಂಬಿತವಾಗಿರುವ ಪಟ್ಟಣದ ನಾಲ್ಕು ದಿಕ್ಕಿನ ಹೆದ್ದಾರಿಯಲ್ಲೂ ಅಳವಡಿಸುವುದೊಂದೆ ಬಾಕಿ ಇದೆ.! ಎಂದು ತಮ್ಮ ಅಳಲನ್ನೂ ತೋಡಿ ಕೊಂಡಿದ್ದಾರೆ ಅಷ್ಟೊಂದು ಹದಗೆಟ್ಟಿದೆ ತೀರ್ಥಹಳ್ಳಿ ತಾಲ್ಲೂಕು ಕ್ಷೇತ್ರ.! ಅದರಲ್ಲೂ ಪಟ್ಟಣದ ಟೌನ್ ಕ್ಲಬ್ಬಿನಲ್ಲಿನ ಇಸ್ಪೀಟ್ ಎಲೆಯ ಸರಪರ ಸದ್ದು ಒಂದು ಕಡೆಯಾದರೆ ಇನ್ನೂ ಪಟ್ಟಣದ ಸೀಬಿನಕೆರೆಯಲ್ಲಿ ಅಕ್ರಮ ಇಸ್ಪೀಟ್ ಅಡ್ಡೆಯೊಂದು ತಲೆ ಎತ್ತಿ ನಿಂತಿದೆ…!ಈ ಎರಡು ಇಸ್ಪೀಟ್ ಆಟದ ಅಖಾಡಕ್ಕೆ ಸಾಕಷ್ಟು ಮಂದಿ ದಾಸರಾಗಿ ಹೋಗಿದ್ದಾರೆ.ಇಲ್ಲಿಯ ಇಸ್ಪೀಟ್ ಆಟದ ಬಿರುಸಿಗೆ ಎಲ್ಲವನ್ನೂ ಕಳೆದುಕೊಂಡು ಆಕಾಶ ನೋಡುವ ಪರಿಸ್ಥಿತಿ ಕೇಲವರದ್ದಾದರೆ ಇನ್ನೂ ಕೇಲವರು ಮನೆ ಮಠ ಮಾರಿ ಎಲ್ಲಾ ಹಣವನ್ನೂ ಜೂಜಿನಡ್ಡೆಗೆ ಸುರಿದು ಬಿದಿಗೆ ಬಿಳುವ ಹಂತಕ್ಕೆ ಹೆಜ್ಜೆ ಇಟ್ಟಿದ್ದಾರೆ..ಅ ಮಟ್ಟಕ್ಕೆ ಇಸ್ಫೀಟ್ ನಡೆಯುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.ಕ್ಷೇತ್ರದ ಖಡಕ್ ಶಾಸಕರು ಮೌನಕ್ಕೆ ಜಾರಿದ್ದಾರೆ.!

ತಾಲೂಕಿನ ಕಟ್ಡೆಹಕ್ಕಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾನನದ ಗರ್ಭದ ಒಣಗಿದ ದರಗೆಲೆಗಳ ಮೇಲೆ ಅಕ್ರಮ ಅಂದರ್ ಬಾಹರ್ ಇಸ್ಪೀಟ್ ಆಟವಂತು ದಿನಕ್ಕೊಂದು ಜಾಗದಲ್ಲಿ ನೆಡೆಯುತ್ತಿದೆಯಂತೆ. ಗ್ರಾಮಗಳ ನದಿ ಹಳ್ಳ, ಕೊಳ್ಳಗಳಲ್ಲಿ ಅಕ್ರಮ ಮರುಳು ದಂಧೆ ಎಗ್ಗಿಲ್ಲದೆ ಸಾಗಿದೆ.ಜೆಸಿಬಿ ಮುಖಾಂತರ ನದಿ ಹಳ್ಳ ಕೊಳ್ಳಗಳಿಂದ ಯಾರ ಭಯವಿಲ್ಲದೆ ಅಕ್ರಮ ದಂಧೆಕೋರರು ರಾಜಾರೋಷವಾಗಿ ಮರಳು ದಂಧೆಯಲ್ಲಿ ಮುಳುಗಿ ಹೋಗಿದ್ದಾರೆ. ಬ್ರೇಕ್ ಹಾಕಬೇಕಾದ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ನಿದ್ರೆಗೆ ಜಾರಿದ್ದಾರೆ. ಇನ್ನೂ ಎಲ್ಲಾ ಅಕ್ರಮ ದಂಧೆಗಳು ನೆಡೆಯುತ್ತಿದ್ದರು ಪೊಲೀಸರು ಮೌನಕ್ಕೆ ಜಾರಿದ್ದಾರೆ.
ಮಾಜಿ ಓಸಿ ಬಿಡ್ಡರ್ ಸೀಬಿನಕೆರೆಯ ಇಸ್ಪೀಟ್ ಕ್ಲಬ್ಬಿನ ಉಸ್ತುವಾರಿಕೆ ವಹಿಸಿಕೊಂಡಿದ್ದಾನೆ ಎಂದ ಮೇಲೆ ಅಕ್ರಮ ಇಸ್ಪೀಟ್ ಜೂಜಿನಡ್ಡೆಯಲ್ಲಿ ಇಸ್ಪೀಟಿನ ಸಪ್ಪಳದ ಸದ್ದು ಭರ್ಜರಿಯಾಗಿ ಪ್ರತಿಧ್ವನಿಸುತ್ತಿದೆ.

ಈ ಅಡ್ಡೆಯ ದಾಸರಾಗಿರುವ ಸುತ್ತಮುತ್ತಲಿನ ಮದ್ಯಮ ವರ್ಗದ ಮಂದಿ, ಬಡ ರೈತರು ಮತ್ತು ಕೂಲಿ ಕಾರ್ಮಿಕರು ಜೂಜಿನಡ್ಡೆಯ ದಾಸರಾಗಿದ್ದಾರೆ. ಮನೆ-ಮಟ, ಹೊಲ-ಗದ್ದೆ ಮತ್ತು ಇದ್ದಬದ್ದ ಬಂಗಾರ ಬೆಲೆಬಾಳುವ ವಸ್ತುಗಳನ್ನು ಇಸ್ಪೀಟ್ ಆಡಲು ಹಣಕ್ಕಾಗಿ ಮಾರಿ ತಮ್ಮ ಸಂಸಾರವನ್ನು ಬಿದಿಗೆ ತಂದಿಡುವ ಮೊದಲೇ ಪೊಲೀಸ್ ಇಲಾಖೆ ಎಚ್ಚೆತ್ತು ಕೊಳ್ಳಬೇಕಿದೆ. ಮಾಮೂಲು ಪಡೆಯುವ ಕೆಲವು ಪೊಲೀಸರೇ ಈ ಅಕ್ರಮ ಇಸ್ಪೀಟ್ ದಂಧೆಗೆ ನೆರಳಾಗಿ ನಿಂತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.!ಪತ್ರಿಕೆಯು ಎರಡನೇ ಭಾಗದಲ್ಲಿ ಇಲ್ಲಿ ನೆಡೆಯುವ “ಸ್ಟ್ರೈಕ್” ಇಸ್ಪೀಟ್ ಆಟದ ಮೊತ್ತವೇಷ್ಟು.? ದಿನದ ವಹಿವಾಟು ಎಷ್ಟು.? ಒಂದೊಂದು ಟೇಬಲ್ ನಲ್ಲಿ ಬಿಕರಿಯಾಗುವ ಹಣವೇಷ್ಟು.?ಈ ಅಕ್ರಮ ಇಸ್ಪೀಟ್ ಜೂಜಾಟದ ಅಡ್ಡೆಯ ಅಧಿಪತಿಗಳು ಯಾರು.? ಎಲ್ಲವನ್ನೂ ಎಳೆಯಾಗಿ ನಿಮ್ಮ ಮುಂದಿಡಲಿದೆ….

