ಬೆಂಗಳೂರು : ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೆಸರು ದುರ್ಬಳಕೆ ಮಾಡಿಕೊಂಡು ಅಮ್ರಪಾಲಿ ಸುರೇಶ್ ಎಂಬಾತನಿಂದ ಮಹಿಳೆಗೆ ವಂಚನೆ; ಅದಾನಿ ಗ್ರೂಪ್ನಿಂದ 100 ಕೋಟಿ ಫಂಡ್ ಕೊಡಿಸೋದಾಗಿ 35 ಲಕ್ಷ ಉಂಡೆನಾಮ.!
news.ashwasurya. in
ದಕ್ಷ ರಾಜಕಾರಣಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರ ಆಪ್ತನೆಂದು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ತೀರ್ಥಹಳ್ಳಿಯ ಅಮ್ರಪಾಲಿ ಸುರೇಶ್ ಎಂಬಾತ ಅದಾನಿ ಗ್ರೂಪ್ನಿಂದ 100 ಕೋಟಿ ಸಿಎಸ್ಆರ್ ಫಂಡ್ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 35 ಲಕ್ಷ ರೂಪಾಯಿ ವಂಚಿಸಿದ್ದಾನೆ. ಈ ಸಂಬಂಧ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….
ಅಶ್ವಸೂರ್ಯ/ ಶಿವಮೊಗ್ಗ/ಬೆಂಗಳೂರು : ಪ್ರಾಮಾಣಿಕ ರಾಜಕಾರಣಿ ಎಂದು ಜನಪ್ರಿಯತೆ ಗಳಿಸಿರುವ ತೀರ್ಥಹಳ್ಳಿ ಕ್ಷೇತ್ರದ ಹೆಮ್ಮೆಯ ರಾಜಕಾರಣಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬ ಪ್ರತಿಷ್ಠಿತ ಕಂಪನಿಯ ಫಂಡ್ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.!
ಅದಾನಿ ಗ್ರೂಪ್ ಹೆಸರಲ್ಲಿ 100 ಕೋಟಿ ಸಿಎಸ್ಆರ್ ಫಂಡ್ ಕೊಡಿಸೋದಾಗಿ ವಂಚನೆ ಮಾಡಿದ್ದಾರೆ.!
ಬೆಂಗಳೂರಿನ ಹೆಚ್.ಬಿ.ಆರ್ ಲೇಔಟ್ನಲ್ಲಿ ‘ರಾಯ್ ಎಜುಕೇಶನ್ ಟ್ರಸ್ಟ್’ ನಡೆಸುತ್ತಿರುವ ತೀರ್ಥಹಳ್ಳಿ ಮೂಲದ ಯಶೋಧ ಎಂಬುವವರಿಗೆ ಅಮ್ರಪಾಲಿ ಸುರೇಶ್ ವಂಚಿಸಿದ್ದಾನೆಂದು ವರದಿಯಾಗಿದೆ. ಪ್ರತಿಷ್ಠಿತ ಅದಾನಿ ಗ್ರೂಪ್ನಿಂದ 100 ಕೋಟಿ ರೂಪಾಯಿ ಸಿಎಸ್ಆರ್ (CSR) ಫಂಡ್ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ, ಅದಕ್ಕಾಗಿ ಹಂತ ಹಂತವಾಗಿ ಸುಮಾರು 35 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಾನೆ. ಬ್ಯಾಂಕ್ ಮೂಲಕ 20 ಲಕ್ಷ ರೂ. ಹಾಗೂ RTGS ಮೂಲಕ ಉಳಿದ ಹಣವನ್ನು ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಕಿಮ್ಮನೆ ರತ್ನಾಕರ್ ಆಪ್ತನೆಂದು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಗೆ ನಂಬಿಸಿ ವಂಚನೆ.
ಆರೋಪಿ ಅಮ್ರಪಾಲಿ ಸುರೇಶ್ ತೀರ್ಥಹಳ್ಳಿ ಮೂಲದವನಾಗಿದ್ದು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಅತ್ಯಂತ ಆಪ್ತ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ.ತೀರ್ಥಹಳ್ಳಿ ಕ್ಷೇತ್ರದ ಹೆಮ್ಮೆಯ ರಾಜಕಾರಣಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಯಶೋಧ ಅವರಿಗೆ ಹೈದರಾಬಾದ್ ಮೂಲದ ಅತುಲ್ ಕುಮಾರ್ ಶರ್ಮಾ ಹಾಗೂ ವೆಂಕಟರಮಣ ಭಟ್ ಎಂಬುವವರನ್ನು ಪರಿಚಯಿಸಿದ್ದ. ಅಷ್ಟೇ ಅಲ್ಲದೆ, ಶಿವಾಜಿನಗರದ ಬಟ್ಟೆ ವ್ಯಾಪಾರಿಯೊಬ್ಬನನ್ನು ಕಂಪನಿಯ ಪ್ರತಿನಿಧಿ ಎಂದು ಸುಳ್ಳು ಹೇಳಿ ಪರಿಚಯಿಸಿ ಸಂಚು ರೂಪಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಆರು ಮಂದಿಯ ವಿರುದ್ಧ FIR ದಾಖಲು
ವಂಚನೆಗೊಳಗಾದ ಯಶೋಧ ಅವರು ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಬಿಎನ್ಎಸ್ ಕಾಯಿದೆ 2023ರ ಕಲಂ 3(5) ಹಾಗೂ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಅಮ್ರಪಾಲಿ ಸುರೇಶ್ ಪ್ರಮುಖ ಆರೋಪಿ (A1) ಆಗಿದ್ದು, ಒಟ್ಟು ಆರು ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಸದ್ಯ ಬಂಧನ ಭೀತಿಯಿಂದ ಅಮ್ರಪಾಲಿ ಸುರೇಶ್ ತಲೆಮರೆಸಿಕೊಂಡಿದ್ದು, ಪೊಲೀಸರು ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಬೆಂಗಳೂರಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಪೊಲೀಸ್ ಇಲಾಖೆ ವಿರುದ್ಧ ದೂರುದಾರರ ಆಕ್ರೋಶ
ಪ್ರಕರಣ ದಾಖಲಾಗಿ ದಿನಗಳಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರುದಾರೆ ಯಶೋಧ ಪತಿ ರಾಜು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು ಪೊಲೀಸರು ಭಯೋತ್ಪಾದಕರನ್ನೇ ಹಿಡಿಯುತ್ತಾರೆ, ಆದರೆ ಕಿಮ್ಮನೆ ರತ್ನಾಕರ್ ಆಪ್ತ ಎಂಬ ಕಾರಣಕ್ಕೆ ಅಮ್ರಪಾಲಿ ಸುರೇಶ್ನನ್ನು ಇದುವರೆಗೂ ಬಂಧಿಸಿಲ್ಲ. ದೂರು ನೀಡಿ ದಿನಗಳೇ ಕಳೆದಿದ್ದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ಕೆಲವೊಂದು ಸಂಧರ್ಭಗಳಲ್ಲಿ ರಾಜಕಾರಣಿಗಳನ್ನು ಬಲಿ ಹಾಕುವಂತಹ ಪ್ರಯೋಗಗಳು ಪ್ರಯತ್ನಗಳು ಸಾಕಷ್ಟು ನೆಡೆಯುತ್ತಲೆ ಇರುತ್ತದೆ…ಪ್ರಚಲಿತದಲ್ಲಿರುವ ರಾಜಕಾರಣಿ ದೊಡ್ಡಮಟ್ಟದಲ್ಲಿ ಬೆಳೆದರೆ ನಮಗೆ ಕಷ್ಟವಾದಿತು ಎನ್ನುವ ಕಾರಣಕ್ಕೆ ಕೇಲವರು ಆತನನ್ನು ರಾಜಕೀಯವಾಗಿ ಹೇಗಾದರೂ ಮೂಲೆ ಗುಂಪು ಮಾಡುವುದಕ್ಕೆ ಅವರುಗಳ ಜೋತೆಗೆ ಇದ್ದು ತೆರೆಮರೆಯಲ್ಲಿ ಆಟವಾಡುತ್ತಾರೆ….ಹಾಗಾದರೆ ಅಮ್ರಪಾಲಿ ಸುರೇಶ್ ಇಲ್ಲಿ ನೀಜವಾಗಿಯು ಅಪರಾಧಿನಾ.? ಅವರು ಅ ಮಹಿಳೆಯಿಂದ ಹಣ ಪಡೆದಿರುವುದು ಸತ್ಯವೆ..?ಅರ್ಥಿಕವಾಗಿ ಸ್ಥೀತಿವಂತರಾಗಿರುವ ಅಮ್ರಪಾಲಿ ಸುರೇಶ್ ಹಣದ ಹಿಂದೆ ಬಿಳಲು ಕಾರಣವೇನು.? ಇಲ್ಲಿ ತಿಂದುಂಡ ಕೇಲವರು ಅವರ ತಲೆಗೆ ಬರುವಂತೆ ಮಾಡಿದಾರ.? ಸಾಕಷ್ಟು ಗೊಂದಲಗಳು ಇಲ್ಲಿ ಎದ್ದು ಕಾಣುತ್ತದೆ. ಪೊಲೀಸರ ತನಿಖೆಯಿಂದ ಒಂದಷ್ಟು ಸತ್ಯಗಳು ಹೊರಬರುವುದು… ಮತ್ತು ಅಮ್ರಪಾಲಿ ಸುರೇಶ್ ಕೂಡಾ ಎಲ್ಲಾ ಸತ್ಯವನ್ನು ಬಹಿರಂಗ ಪಡಿಸಬೇಕಿದೆ…..ಒಟ್ಟಿನಲ್ಲಿ ಹಣ ಕಳೆದುಕೊಂಡ ಮಹಿಳೆಗೆ ನ್ಯಾಯ ಸೀಗಬೇಕಿದೆ…


