
ಹೈದರಾಬಾದ್: ಎರಡನೇ ಮದುವೆಯಾಗಿದ್ದ ಮಾಜಿ ಪತ್ನಿಯ ಮನೆಗೆ ನುಗ್ಗಿ ಗರಗಸದಿಂದ ಕತ್ತರಿಸಿ ಕೊಂದ ಮಾಜಿ ಪತಿ.!
news.ashwasurya.in
ಅಶ್ವಸೂರ್ಯ/ಹೈದರಾಬಾದ್ : ಮಹೇಶ್ ಎಂಬಾತ ತನ್ನ ಮಾಜಿ ಪತ್ನಿಯ ಸುನೀತಾಳ ಮನೆಗೆ ನುಗ್ಗಿ ಆಕೆಯನ್ನು ಗರಗಸದಿಂದ ಇರಿದು ಕೊಂದಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.

ತನ್ನ ತಾಯಿಯ ಸಾವಿಗೆ 29 ವರ್ಷದ ಐಟಿ ಕಂಪನಿ ಉದ್ಯೋಗಿಯಾಗಿದ್ದ ಆ ಸುನೀತಾಳೆ ಕಾರಣ ಎಂದು ಆರೋಪಿ ಮಹೇಶ್ ಆರೋಪಿಸಿದ್ದಾನೆ. ಮಹಿಳೆಯ ಎರಡನೇ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆ ಮೂರು ತಿಂಗಳ ಗರ್ಭಿಣಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
30 ರ ಹರೆಯದ ಕೊಲೆ ಆರೋಪಿ ಮಹೇಶ್ 2022 ರಲ್ಲಿ ತಾನು ಹತ್ಯೆಮಾಡಿದ ಮಹಿಳೆನ್ನು ವಿವಾಹವಾಗಿದ್ದ. ಮದುವೆ ಭಾರತದಲ್ಲಿ ನಡೆದಿತ್ತು. ಆರೋಪಿ ನಂತರ ಕೆನಡಾಕ್ಕೆ ಹೆಂಡತಿಯನ್ನು ಕರೆದುಕೊಂಡು ತೆರಳಿದ್ದ. ಅಲ್ಲಿ ಪತ್ನಿ ಜೊತೆ ವಾಸವಾಗಿದ್ದ. ದಂಪತಿ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಿ ಪತ್ನಿ ಸುನೀತಾ ಭಾರತಕ್ಕೆ ವಾಪಸ್ ಆಗಿದ್ದರು. ನಂತರ ಮಹಾರಾಷ್ಟ್ರದಲ್ಲಿ ಪತಿ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣ ದಾಖಲಿಸಿದ್ದರು.
ಈ ದಂಪತಿ 2024 ರಲ್ಲಿ ಇಬ್ಬರು ವಿಚ್ಛೇದನ ಪಡೆಕೊಂಡಿದ್ದರು. ಆ ಮಹಿಳೆ 2025 ರ ಏಪ್ರಿಲ್ನಲ್ಲಿ ಬೇರೊಬ್ಬ ವ್ಯಕ್ತಿ ಜೊತೆ ಮತ್ತೆ ವಿವಾಹವಾದರು.ತನ್ನ ತಾಯಿಯ ಮರಣದ ನಂತರ ಮಾಜಿ ಪತಿ 2025 ರ ಮಾರ್ಚ್ನಲ್ಲಿ ಭಾರತಕ್ಕೆ ಮರಳಿದರು. ಕೌಟುಂಬಿಕ ಹಿಂಸಾಚಾರ ಪ್ರಕರಣದ ಕಾರಣ ಆತನ ವಿರುದ್ಧ ಲುಕ್-ಔಟ್ ಸುತ್ತೋಲೆ ಹೊರಡಿಸಲಾಯಿತು. ಆತನ ಪಾಸ್ಪೋರ್ಟ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಾರಣದಿಂದಾಗಿ, ಆತ ಕೆನಡಾಕ್ಕೆ ಹಿಂತಿರುಗಲು ಸಾಧ್ಯವಾಗಲಿಲ್ಲ.
ಆತ ನಿರುದ್ಯೋಗಿಯಾಗಿದ್ದ. ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದ. ಮಾಜಿ ಪತ್ನಿಯಿಂದಾಗಿ ತಾನು ಮತ್ತು ತನ್ನ ಕುಟುಂಬ ಮಾನಸಿಕ ನೋವನ್ನು ಅನುಭವಿಸಿದೆ. ಈ ನೋವು ನನ್ನ ತಾಯಿಯ ಸಾವಿಗೆ ಕಾರಣವಾಯಿತು ಎಂದು ಭಾವಿಸಿದ್ದ ಮಹೆಶ್ ತನ್ನ ಮಾಜಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.


