
ಕಾರವಾರ : ಜ್ಯೋತಿಷಿ ಕಮಲಾಕರ ಭಟ್ಟ ಸೇರಿದಂತೆ ನಾಲ್ವರು ಆರೋಪಗಳಿಗೆ ನ್ಯಾಯಾಂಗ ಬಂಧನ.
news.ashwasurya.in
ಅಶ್ವಸೂರ್ಯ/ಕಾರವಾರ: ಎರಡು ಮಕ್ಕಳ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ದೂರು ನೀಡಿದ್ದಕ್ಕೆ ಕೊಲೆ ಮಾಡಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಈ ಘಟನೆ ನಡೆದಿದ್ದು ಹತ್ಯೆ ಪ್ರಕರಣದಲ್ಲಿ ಎ1 ಆರೋಪಿ ಸುಚಿತ್ರಾ, ಎ2 ಲೋಕನಾಥ್, ಎ3 ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಎ4 ಆಕಾಶ್ ರನ್ನು ನ್ಯಯಾಂಗ ಬಂಧನಕ್ಕೆ ಒಪ್ಪಿಸಿ ಸಿದ್ದಾಪುರ ಜೆ.ಎಂ.ಎಫ್. ಸಿ ಕೋರ್ಟ್ ಆದೇಶ ಹೊರಡಿಸಿದೆ.
ಇನ್ನೊಂದೆಡೆ ಗ್ರಾಮಸ್ಥರು ಸಿದ್ದಾಪುರ ಗ್ರಾಮಕ್ಕೆ ಮುತ್ತಿಗೆ ಹಾಕಿ ಕಮಲಾಕರ್ ಭಟ್ ನನ್ನು ಹತ್ತು ನಿಮಿಷಗಳ ಕಾಲ ತಮ್ಮ ವಶಕ್ಕೆ ನೀಡಿ. ನಾವು ಬುದ್ಧಿಕಲಿಸುತ್ತೇವೆ ಎಂದು ಪಟ್ಟು ಹಿಡಿದ್ದಾರೆ. ಎರಡು ಮಕಕ್ಕಳ ತಾಯಿ ಸುಚಿತ್ರಾ ಜೊತೆ ಜ್ಯೋತಿಷಿ ಕಮಲಾಕರ್ ಭಟ್ಟನ ಅಕ್ರಮ ಸಂಬಂಧವೇ ಘಟನೆಗೆ ಕಾರಣವಾಗಿದೆ.
ಅಕ್ರಮ ಸಂಬಂಧ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ನಡೆದಿತ್ತು.

ವಸಂತ್ ಅಮಾಯಕ ಮೃತ ದುರ್ದೈವಿ. ಕೃತ್ಯವೆಸಗಿ ಪರಾರಿಯಾಗುತ್ತಿದ್ದ ಖ್ಯಾತ ಜೋತಿಷಿ ಕಮಲಾಕರ ಭಟ್ ಸೇರಿದಂತೆ 7 ಜನರನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದರು.
ಕೊಲೆ ಬಳಿಕ ಸಿದ್ದಾಪುರದಿಂದ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಎಸ್ಕೇಪ್ ಆಗುತ್ತಿದ್ದರು. ಈ ವೇಳೆ ಪೊಲೀಸರು ಕಮಲಾಕರ್ ಭಟ್, ಸುಚಿತ್ರಾ ಹಾಗೂ ಸುಚಿತ್ರಾ ತಂದೆ ಲೋಕನಾಥ್ ಸೇರಿದಂತೆ 7 ಜನರನ್ನು ಬಂಧಿಸಿದ್ದರು.
ಸುಚಿತ್ರಾ ಪತಿ ಮಹೇಶ್ ನಾಯ್ಕ್ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿದ್ದರು. ಆಗಾಗ ಊರಾದ ಸಿದ್ದಾಪುರಕ್ಕೆ ಬರುತ್ತಿದ್ದರು. ಪತ್ನಿ ಸುಚಿತ್ರಾ ಹಾಗೂ ಇಬ್ಬರು ಮಕ್ಕಳು ಪತ್ನಿ ಸುಚಿತ್ರಾ ಜೊತೆ ಸಿದ್ಧಾಪುರದಲ್ಲಿ ವಾಸವಾಗಿದ್ದರು. ಸುಚಿತ್ರಾಳಿಗೆ ಸುಮಾರು ಒಂದು ವರ್ಷದಿಂದ ಜ್ಯೋತಿಷಿ ಕಮಲಾಕರ್ ಭಟ್ ಪರಿಚಯವಾಗಿದೆ. ಜೋತಿಷ್ಯ ಹೇಳುತ್ತಿದ್ದ ಕಮಲಾಕರ್ ಭಟ್ ಶಿವಮೊಗ್ಗದಲ್ಲಿ ಒಂದು ಕಛೇರಿಯನ್ನು ತೆರೆದಿದ್ದ ಕರುಂಗೊಲಿ ಮಾಲೆಯ ಮಾರಾಟಕ್ಕೆ ನಿಂತಿದ್ದ ಶಿವಮೊಗ್ಗದ ಕಛೇರಿಯ ಜವಾಬ್ದಾರಿಯನ್ನು ಆಕೆಗೆ ವಹಿಸಿದ್ದ ಭಟ್ಟ ಕಛೇರಿ ಸಮೀಪ ಮನೆ ಮಾಡಿದ್ದ ಭಟ್ಟ ಮತ್ತು ಸುಚಿತ್ರ ಒಂದೇ ಮನೆಯಲ್ಲಿ ವಾಸವಾಗಿದ್ದರಂತೆ.!?ಸುಚಿತ್ರ ಮಕ್ಕಳಿದು ಇದು ಸರಿಯಾಗಿ ಕಾಣದೆ ಅಪ್ಪನಿಗೆ ಕಾಲ್ ಮಾಡಿ ಹೇಳಿದ್ದಾರೆ.
ತಾಯಿ ವರ್ತನೆಯನ್ನು ಹಿರಿಯ ಮಗಳು ಪ್ರಶ್ನೀಸಿದ್ದಾಳೆ ವಿಚಾರವಾಗಿ ಕೋಪಗೊಂಡಿದ್ದ ತಾಯಿ ಸುಚಿತ್ರಾ ಮಗಳಿಗೆ ಹಿಂಸಿಸುತ್ತಿದ್ದಳಂತೆ ಕಮಲಾಕರ್ ಭಟ್ ಹಾಗೂ ತಾಯಿ ಸುಚಿತ್ರಾಳ ಹುಚ್ಚಾಟದಿಂದ ಬೇಸತ್ತಿದ್ದ ಮಗಳು ಬೆಂಗಳೂರಿನಲ್ಲಿದ್ದ ತಂದೆಗೆ ವಿಚಾರ ಹೇಳಿದ್ದಳು. ಅಲ್ಲದೇ ತನಗೂ ತನ್ನ ಸಹೋದರಿಗೂ ತುಂಬಾ ಕಷ್ಟವಾಗುತ್ತಿದೆ. ನಮಗೆ ಈ ಮನೆಯಲ್ಲಿ ಇರಲು ಸಾಧ್ಯವಿಲ್ಲ, ತಾಯಿ ಸುಚಿತ್ರಾಳಿಂದ ನಮ್ಮನ್ನು ರಕ್ಷಿಸುವಂತೆ ತಂದೆಗೆ ತಿಳಿಸಿದ್ದಳಂತೆ.

ಮಗಳ ತಿಳಿಸುತ್ತಿದ್ದಂತೆ ಸಿದ್ಧಾಪುರಕ್ಕೆ ದೌಡಾಯಿಸಿದ್ದ ಮಹೇಶ್ ನಾಯ್ಕ್, ಮಕ್ಕಳು ಶಿವಮೊಗ್ಗದಿಂದ ಸಿದ್ದಾಪುರ ಹೋಗಿದ್ದಾರೆ ಮಗಳನ್ನು ಭೇಟಿಯಾಗಿ ಎಲ್ಲಾ ವಿಷಯ ತಿಳಿದುಕೊಂಡಿದ್ದ ಮಹೇಶ್. ತಾಯಿ ಸುಚಿತ್ರಾ ಹಾಗೂ ಕಮಲಾಕರ್ ಭಟ್ ನಡುವೆ ಅನೈತಿಕ ಸಂಬಂಧವಿರುವ ಬಗ್ಗೆ ಹಾಗೂ ಮಕ್ಕಳಿಬ್ಬರಿಗೂ ಅವರು ಹಿಂಸಿಸುತ್ತಿರುವ ಬಗ್ಗೆ ತಿಳಿದು ಆಘಾತಗೊಂಡಿದ್ದ ಮಹೇಶ್ ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿ
ಪೊಲೀಸ್ ಠಾಣೆಯಿಂದ ವಾಪಸ್ ಆಗಿದ್ದ ಮಹೇಶ್, ಸಹೋದರ ವಸಂತ್ ಮನೆಗೆ ಹೋಗಿದ್ದ. ಪೊಲೀಸರಿಗೆ ದೂರು ನೀಡಿದ್ದ ವಿಷಯ ತಿಳಿದ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಹಾಗೂ ಆಕೆಯ ತಂದೆ ಲೋಕನಾಥ್ ಹಾಗೂ ಇತರರು ವಸಂತ್ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೇ ಮಹೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ವಸಂತ್ ತಪ್ಪಿಸಲು ಮುಂದಾಗಿದ್ದ ವೇಳೆ ವಸಂತ್ ಮೇಲೂ ಹಲ್ಲೆ ನಡೆಸಿದ್ದು, ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅನೈತಿಕ ಸಂಬಂಧ, ಕೊಲೆ ಪ್ರಕರಣ ಸಂಬಂಧ ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಇತರರ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಇದೀಗ ಕಮಲಾಕರ್ ಭಟ್ ಸೇರಿ 7 ಜನರನ್ನು ಪೊಲೀಸರು ಬಂಧಿಸಿದ್ದು, ಅವರಲ್ಲಿ ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


