Headlines

U19 World Cup: ಕಿರಿಯರ ವಿಶ್ವಕಪ್​​ ಇತಿಹಾಸ ಸೃಷ್ಟಿಸಿದ ಭಾರತ.!ಅತಿಹೆಚ್ಚು ರನ್ ಚೆಸ್ ಮಾಡಿದ ವಿಶ್ವದ ಮೊದಲ ತಂಡ ಭಾರತ.!

ಅಶ್ವಸೂರ್ಯ/ಜಿಂಬಾಬ್ವೆ :ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೆಮಿಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಫೈಸಲ್ ಶಿನೋಜಾಡಾ (110) ಮತ್ತು ಉಜೈರುಲ್ಲಾ ನಿಯಾಝೈ (101 ನಾಟ್ ಔಟ್) ಅವರ ಶತಕದ ನೆರವಿನಿಂದ 310 ರನ್​ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರಿ ಇನ್ನೂ53 ಎಸೆತಗಳಿರುವಂತೆ ಭರ್ಜರಿ ಗೆಲುವು ದಾಖಲಿಸಿ ಇತಿಹಾಸ ಸೃಷ್ಟಿಸಿದೆ.!
ಭಾರತದ U19 ಕ್ರಿಕೆಟ್ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಐಸಿಸಿ U19 ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಚೇಸಿಂಗ್ ಮಾಡಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡನೇ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನ ( ನೀಡಿದ್ದ 311 ರನ್​ಗಳ ಗುರಿಯನ್ನು ಭಾರತ ಕಿರಿಯರ ತಂಡ 41.1 ಓವರ್​ಗಳಲ್ಲಿ ಚೇಸ್ ಮಾಡಿ ಗೆಲುವು ಸಾಧಿಸಿತು. ಇದು ಅಂಡರ್ 19 ವಿಶ್ವಕಪ್​ ಇತಿಹಾಸದಲ್ಲೇ ಗರಿಷ್ಠ ರನ್​ ಚೇಸ್ ಆಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಫೈಸಲ್ ಶಿನೋಜಾಡಾ (110) ಮತ್ತು ಉಜೈರುಲ್ಲಾ ನಿಯಾಝೈ (101 ನಾಟ್ ಔಟ್) ಅವರ ಶತಕಗಳಿಸಿ 310 ರನ್​ಗಳ ಬೃಹತ್ ಸ್ಕೋರ್​ ದಾಖಲಿಸಲು ನೆರವಾದರು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರಿ ಇನ್ನೂ53 ಎಸೆತಗಳಿರುವಂತೆ ಗೆಲುವು ಸಾಧಿಸಿತು. ಆರಂಭಿಕ ಬ್ಯಾಟರ್​ ಆರನ್ ಜಾರ್ಜ್ 104 ಎಸೆತಗಳಲ್ಲಿ 115 ಹೊಡೆದು ಶತಕ ಸಿಡಿಸಿದರೆ. ವೈಭವ್ ಸೂರ್ಯವಂಶಿ ಕೇವಲ 33 ಎಸೆತಗಳಲ್ಲಿ ಬಿರುಸಿನ 68 ರನ್ ಹೊಡೆದರು ಹಾಗೂ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ನಾಯಕ ಆಯುಷ್ ಮಾತ್ರೆ 59 ಎಸೆತಗಳಲ್ಲಿ 62 ರನ್ ನೊಂದಿಗೆ ಅರ್ಧಶತಕ ಸಿಡಿಸಿ ಭಾರತಕ್ಕೆ ಸುಲಭ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಭಾರತ ತಂಡ 10ನೇ ಬಾರಿಗೆ ಫೈನಲ್ ಪ್ರವೇಶಿಸಿತು. 2016ರಿಂದ ಇಲ್ಲಿಯವರೆಗೆ ಸತತವಾಗಿ ಭಾರತ ತಂಡ ಫೈನಲ್ ತಲುಪಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!