Headlines

ಚಾಮರಾಜನಗರ: ಲೋಕಾಯುಕ್ತ ದಾಳಿ, ಬೈಕ್ ಸವಾರನಿಂದ ಮೂರು ಸಾವಿರ ಲಂಚಕ್ಕೆ ಕೈ ಒಡ್ಡಿ ಲೋಕಾಯುಕ್ತರ ಬಲೆಗೆ ಬಿದ್ದ ಪೊಲೀಸಪ್ಪ.!

ಕೇವಲ ಒಂದು ಬೈಕ್ ಬಿಡುಗಡೆಗೆ 3,000 ಸಾವಿರದ ಹಣದ ಬೇಡಿಕೆ ಇಟ್ಟಿದ್ದಾನೆ
ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಮಲ್ಲು ಎಂಬಾತ.! ಸಾರ್ವಜನಿಕರೊಬ್ಬರ ಬೈಕ್ ರಿಲೀಸ್ ಮಾಡಲು ಲಂಚದ ಬೇಡಿಕೆ ಇಟ್ಟಿದ್ದರು. ನಿಯಮಾನುಸಾರ ಕೆಲಸ ಮಾಡಿಕೊಡುವ ಬದಲು, ಬೈಕ್ ಬಿಟ್ಟುಕೊಡಲು ಮೂರು ಸಾವಿರ ರೂಪಾಯಿ ನೀಡುವಂತೆ ಡಿಮಾಂಡ್ ಮಾಡಿದ್ದಾನೆ.!?
ಹಣ ಪಿಕಲು ಬೆಳೆಗ್ಗೆ ಸಂತೋಷದಿಂದಲೆ ಮನೆ ಬಿಟ್ಟು ಕರ್ತವ್ಯಕ್ಕೆ ಬಂದ ಮಲ್ಲು ಜೊಲ್ಲು ಸೇರಿಸಿಕೊಂಡು ಹಣ ಪಡೆಯುವಾಗಲೇ ಲೋಕಾಯುಕ್ತ ದಾಳಿ ಖೆಡ್ಡಕ್ಕೆ ಕೆಡವಿ ಕೊಂಡಿದ್ದಾರೆ.!
ಲಂಚದ ಹಣದ ಸಮೇತ ಮಲ್ಲು ಅವರನ್ನು ಲೋಕಾಯುಕ್ತ ಪೊಲೀಸರ ತಂಡ ವಶಕ್ಕೆ ಪಡೆದಿದ್ದು, ಭ್ರಷ್ಟ ಪೊಲೀಸಪ್ಪನ ಲಂಚಾವತಾರ ಬಯಲಾಗಿದೆ.
ಇತ್ತೀಚಿನ ದಿನಗಳಲ್ಲಿ ಲೋಕಾಯುಕ್ತರು ರಾಜ್ಯದಲ್ಲಿ ಮೈಕೊಡವಿ ನಿಂತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತರು ಸಮರ ಸಾರಿದ್ದಾರೆ.
ಈ ಹಾದಿಯಲ್ಲಿ ಚಾಮರಾಜನಗರ ಲೋಕಾಯುಕ್ತ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿ ಪೊಲೀಸ್ ಮಲ್ಲು ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!