
ಹೈದರಾಬಾದ್ | ಗಂಡನ ಉಸಿರು ನಿಲ್ಲಿಸಿ ಗೆಳೆಯನ ಜೊತೆ ಆ ಸಿನಿಮಾ ನೋಡಿದ್ಲು ಕೊಲೆಗಾತಿ ಮಡದಿ.!ಬಿರಿಯಾನಿ ತಿಂದ ಗಂಡ ಹೆಣವಾಗಿ ಹೋದ.!
ಗಂಡನ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ್ದ ಹೆಂಡತಿ ಜನವರಿ 18ರಂದು ಮನೆಯಲ್ಲಿ ಬಿರಿಯಾನಿ ಮಾಡಿ ಸಾಕಷ್ಟು ನಿದ್ದೆ ಮಾತ್ರೆ ಮಿಕ್ಸ್ ಮಾಡಿದ್ದಾಳೆ.! ಹೆಂಡತಿ ಕೊಟ್ಳು ಅಂತ ಬಿರಿಯಾನಿ ಗಡದ್ದಾಗಿ ತಿಂದ ನಾಗರಾಜು ಸೈಲೆಂಟಾಗಿ ನಿದ್ರೆಗೆ ಜಾರಿದ್ದಾನೆ. ನಾಗರಾಜು ಗಾಢ ನಿದ್ದೆಗೆ ಜಾರಿದಾಗ ರಾತ್ರಿ ಸುಮಾರು 11.30ಕ್ಕೆ ಗೆಳೆಯ ಗೋಪಿಯನ್ನು ಮಾಧುರಿ ಕರೆಸಿಕೊಂಡಿದ್ದಾಳೆ. ಈ ವೇಳೆ ಇಬ್ಬರು ಪ್ಲಾನ್ ಮಾಡಿ ನಾಗರಾಜುವಿನ ಉಸಿರು ನಿಲ್ಲಿಸಿದ್ದಾರೆ….
news.ashwasurya.in
ಅಶ್ವಸೂರ್ಯ/ಹೈದರಾಬಾದ್ : ಮಡದಿಯೊಬ್ಬಳು ತಾನು ಅಕ್ರಮ ಸಂಬಂಧ ಹೊಂದಿದ್ದ ಗೆಳೆಯನೊಂದಿಗೆ ಸೇರಿಕೊಂಡು ಜೀವನದ ಕೊನೆಯವರೆಗೂ ಜೋತೆಯಾಗಿ ಬಾಳು ಬದುಕುತ್ತೇನೆ ಎಂದು ಜೋತೆಯಾಗಿ ಸಪ್ತಪದಿ ತುಳಿದ ಪತಿಗೆ ಬಿರಿಯಾನಿಯಲ್ಲಿ ನಿದ್ದೆ ಮಾತ್ರೆ ಬೆರೆಸಿ ಉಸಿರು ನಿಲ್ಲಿಸಿದ್ದಾಳೆ.! ಗಂಡನ ಕೊಲೆಮಾಡಿ ನಂತರ ಇದನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾಳೆ. ಮೃತನ ಸ್ನೇಹಿತರ ಅನುಮಾನದಿಂದಾಗಿ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಬಯಲಿಗೆಳೆದಿದ್ದಾರೆ.
ಪ್ರಿಯಕರನ ಸಹಾಯ ಪಡೆದು ಗಂಡನ ಉಸಿರು ನಿಲ್ಲಿಸಿರುವ ಪ್ರಕರಣ ಆಂಧ್ರ ಪ್ರದೇಶದ ಗುಂಟೂರಿನ ದುಗ್ಗಿರಾಲ ಮಂಡಲದ ಚಿಲುವೂರು ಗ್ರಾಮದಲ್ಲಿ ನಡೆದಿದೆ. ಕೊಲೆಯ ನಂತರ ಸಹಜ ಸಾವು ಎಂದು ಬಿಂಬಿಸಲು ಮಹಿಳೆ ಪ್ರಯತ್ನಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತ ವ್ಯಕ್ತಿ ಲೋಕಂ ಶಿವ ನಾಗರಾಜು ಆಗಿದ್ದು, ಈರುಳ್ಳಿ ವ್ಯಾಪಾರ ಮಾಡಿಕೊಂಡಿದ್ದರು. 2007 ರಲ್ಲಿ ಲಕ್ಷ್ಮಿ ಮಾಧುರಿ ಎಂಬಾಕೆಯನ್ನು ನಾಗರಾಜು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ಮಂಗಳಗಿರಿ ಗ್ರಾಮೀಣ ಸಿಪಿಐ ವೆಂಕಟ ಬ್ರಹ್ಮಮ್ ಮತ್ತು ದುಗ್ಗಿರಾಲ ಎಸ್ಐ ವೆಂಕಟ ರವಿ ಹೇಳಿದ್ದಾರೆ.

ನಾಗರಾಜು ಪತ್ನಿ ಲಕ್ಷ್ಮೀ ಮಾಧುರಿ ವಿಜಯವಾಡದ ಸಿನಿಮಾ ಥಿಯೇಟರ್ ಟಿಕೆಟ್ ಕೌಂಟರ್ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಮಯದಲ್ಲಿ ಸತ್ತೇನಪಲ್ಲಿ ಮೂಲದ ಕಾರು ಚಾಲಕ ಗೋಪಿಯ ಪರಿಚಯವಾಗಿದೆ.ಮುದ್ದಾದ ಎರಡು ಮಕ್ಕಳು ಗಂಡನಿದ್ರೂ ಗೋಪಿ ಜೊತೆ ಮಾಧುರಿ ಅಕ್ರಮ ಸಂಬಂಧ ಹೊಂದಿದ್ದಳಂತೆ.!
ಪತ್ನಿ ತನ್ನ ಅಕ್ರಮ ಸಂಬಂಧದ ಹಿನ್ನೆಲೆ ಗಂಡನಿಗೆ ಈರುಳ್ಳಿ ವ್ಯಾಪಾರಕ್ಕೆಂದು ಆತನನ್ನು ಹೈದರಾಬಾದ್ಗೆ ಕಳುಹಿಸುತ್ತಾಳೆ. ಆದರೆ ನಾಗರಾಜು ಹೈದರಾಬಾದ್ನಿಂದ ಬಂದು ಚಿಲುವೂರಿನಲ್ಲಿಯೇ ಉಳಿದುಕೊಂಡಿದ್ದನಂತೆ.! ಇಂದು ಗಂಡ-ಹೆಂಡತಿ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು.

ಗಂಡನ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ್ದ ಹೆಂಡತಿ ಜನವರಿ 18ರಂದು ಮನೆಯಲ್ಲಿ ಬಿರಿಯಾನಿ ಮಾಡಿ ಸಾಕಷ್ಟು ನಿದ್ದೆ ಮಾತ್ರೆ ಮಿಕ್ಸ್ ಮಾಡಿದ್ದಾಳೆ.! ಹೆಂಡತಿ ಕೊಟ್ಳು ಅಂತ ಬಿರಿಯಾನಿ ಗಡದ್ದಾಗಿ ತಿಂದ ನಾಗರಾಜು ಸೈಲೆಂಟಾಗಿ ನಿದ್ರೆಗೆ ಜಾರಿದ್ದಾನೆ. ನಾಗರಾಜು ಗಾಢ ನಿದ್ದೆಗೆ ಜಾರಿದಾಗ ರಾತ್ರಿ ಸುಮಾರು 11.30ಕ್ಕೆ ಗೆಳೆಯ ಗೋಪಿಯನ್ನು ಮಾಧುರಿ ಕರೆಸಿಕೊಂಡಿದ್ದಾಳೆ. ಈ ವೇಳೆ ಇಬ್ಬರು ಪ್ಲಾನ್ ಮಾಡಿ ನಾಗರಾಜುವಿನ ಉಸಿರು ನಿಲ್ಲಿಸಿದ್ದಾರೆ.
ನಾಗರಾಜು ಎದೆ ಮೇಲೆ ಗೋಪಿ ಕುಳಿತು ದೇಹ ಅಲ್ಲಾಡದಂತೆ ಹಿಡಿದಿದ್ದಾನೆ. ಮಾಧುರಿ ದಿಂಬಿನಿಂದ ಉಸಿರುಗಟ್ಟಿಸಿ ಗಂಡನನ್ನು ಕೊಂದಿದ್ದಾಳೆ.! ಎಂದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.! ನಾಗರಾಜು ಶವದ ಪಕ್ಕವೇ ಇಬ್ಬರು ಅಶ್ಲೀಲ ಸಿನಿಮಾಗಳನ್ನು ನೋಡಿದ್ದಾರೆ ಬೆಳಗ್ಗೆ ವರೆಗೂ ನೋಡಿದ್ದಾರಂತೆ.! ನಾಗರಾಜು ಸಾವು ಖಚಿತವಾಗುತ್ತಿದ್ದಂತೆ ಗೋಪಿ ತನ್ನ ತೀಟೆ ತರಿಸಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಬೆಳಗಿನ ಜಾವ ಸುಮಾರು 4 ಗಂಟೆಗೆ ನೆರೆಹೊರೆಯವರನ್ನು ಎಚ್ಚರಗೊಳಿಸಿ ಗಂಡ ಸಾವನ್ನಪ್ಪಿರುವ ವಿಷಯವನ್ನು ಮಾಧುರಿ ತಿಳಿಸಿದ್ದಾಳೆ.
ಕಿವಿ, ಮೂಗಿನಲ್ಲಿ ರಕ್ತಸ್ರಾವ ಗಮನಿಸಿದ ನಾಗರಾಜು ಗೆಳೆಯರು
ನಾಗರಾಜು ಮತ್ತು ಮಾಧುರಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಮಾಧುರಿಯ ಅಕ್ರಮ ಸಂಬಂಧ ವಿಷಯ ತಿಳಿದ ಸ್ಥಳೀಯರಿಗೆ ನಾಗರಾಜು ಸಾವಿನ ಬಗ್ಗೆ ಆರಂಭದಲ್ಲಿಯೇ ಅನುಮಾನ ವ್ಯಕ್ತಪಡಿಸಿದ್ದರು. ಅಂತ್ಯಕ್ರಿಯೆ ವೇಳೆ ಮೂಗು ಮತ್ತು ಕಿವಿಯಲ್ಲಿ ರಕ್ತ ಬಂದಿರೋದನ್ನು ನಾಗರಾಜು ಗೆಳೆಯರು ಆತನ ತಂದೆಗೆ ವಿಷಯ ತಿಳಿಸಿದ್ದಾರೆ. ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಾಗರಾಜು ತಂದೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪೊಲೀಸರು ಅಂತ್ಯಕ್ರಿಯೆ ನಿಲ್ಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕಳಿಸಿ ಕೊಡಲಾಗಿತ್ತು.
ಮರಣೋತ್ತರ ಪರೀಕ್ಷೆಯಲ್ಲಿ ಪಕ್ಕೆಲುಬುಗಳು ಮುರಿದಿರುವುದು ಮತ್ತು ಉಸಿರುಗಟ್ಟಿಸಿ ಸಾಯಿಸಿರುವುದು ದೃಢವಾಗಿದೆ. ಅನುಮಾನದ ಮೇಲೆ ಮಾಧುರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಪ್ರಿಯಕರ ಗೋಪಿ ಜೊತೆ ಸೇರಿ ಕೃತ್ಯ ಎಸಗಿರೋದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರೂ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.


