BBK 12 : ಗ್ರ್ಯಾಂಡ್‌ ಫಿನಾಲೆ ಶೂಟಿಂಗ್‌ ಮುಗೀತು; ಯಾರು ಬಿಗ್ ಬಾಸ್ ಪಟ್ಟ.! ಯಾರು ರನ್ನರ್.? ಯಾರಿಗೆ ಸ್ಥಾನ.?

ನಮ್ಮ ಅನಿಸಿಕೆಯಂತೆ ಮೊದಲ ಎಲಿಮಿನೇಶನ್
ರಘು ಅವರು ಫಸ್ಟ್‌ ಎಲಿಮಿನೇಟ್‌ ಆಗಲಿದ್ದಾರೆ ಎನ್ನಲಾಗಿದೆ. ರಘು ಅವರು ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲರ ಜೊತೆ ಚೆನ್ನಾಗಿದ್ದರು, ಸಭ್ಯತೆಯಿಂದ ವರ್ತಿಸಿದ್ದರು. ಎಲ್ಲರಿಗೂ ಅಡುಗೆ ಮಾಡಿಕೊಂಡು, ಟಾಸ್ಕ್‌ಗಳನ್ನು ಕೂಡ ಚೆನ್ನಾಗಿ ಆಡಿದ್ದರು, ಬೇರೆಯವರು ತಪ್ಪು ಮಾಡಿದಾಗ ತಪ್ಪು ಎಂದು ಕೂಡ ಹೇಳಿದ್ದರು. ಅಷ್ಟೇ ಅಲ್ಲದೆ ಧ್ವನಿ ಎತ್ತುವ ಸಮಯ ಬಂದಾಗ ಧ್ವನಿ ಎತ್ತಿದ್ದರು.
ಎರಡನೇ ಎಲಿಮಿನೇಶನ್‌

ಧನುಷ್‌ ಗೌಡ ಅವರು ಟಾಸ್ಕ್‌ ಮಾಸ್ಟರ್‌ ಎಂದೇ ಹೆಸರು ಪಡೆದಿದ್ದರು. ಆರಂಭದಿಂದ ಇಲ್ಲಿಯವರೆಗೆ ಹೋಲಿಕೆ ಮಾಡಿದರೆ ಈಗಲೇ ಧನುಷ್‌ ಹೆಚ್ಚಾಗಿ ಕಾಣಿಸಿದ್ದು. ಅಷ್ಟೇ ಅಲ್ಲದೆ ಯಾರ ಜೊತೆಯೂ ಇಲ್ಲ ಸಲ್ಲದ ಮಾತುಗಳನ್ನು ಆಡಿಲ್ಲ, ಕಡಿಮೆ ಮಾತನಾಡಿದರೂ ಕೂಡ ಅರ್ಥಗರ್ಭಿತವಾಗಿ ಮಾತನಾಡುತ್ತಿದ್ದರು. ಇವರು ಐದನೇ ಸ್ಥಾನಕ್ಕೆ ತೃಪ್ತಿ ಪಡೆಯ ಬಹುದು ಎನ್ನಲಾಗಿದೆ. ಬಿಗ್‌ ಬಾಸ್‌ ಇಂದಿನ ಸಂಚಿಕೆಯಲ್ಲಿ ಅಧಿಕೃತ ಹೇಳಿಕೆ ಸಿಗುವುದನ್ನು ಕಾಯಬೇಕಿದೆ.
ಮೂರನೇ ಎಲಿಮಿನೇಶನ್‌

ಮನೆಯವರು ಬಂದು, ಹೊರಗಡೆ ವಿಷಯವನ್ನು ಹೇಳಿದಾಗಲೇ ಕಾವ್ಯ ಶೈವ ಅವರು ಔಟ್‌ ಆಗಬೇಕಿತ್ತು, ಇನ್ನೂ ಯಾಕೆ ಇದ್ದಾರೆ ಎಂದು ಕಿಚ್ಚ ಸುದೀಪ್‌ ಅವರು ವೇದಿಕೆಯಲ್ಲಿ ಹೇಳಿಕೊಂಡು ಆಶ್ಚರ್ಯಪಟ್ಟಿದ್ದಿದೆ. ಗಿಲ್ಲಿ ಅವರಿಂದ ಕಾವ್ಯ ಕಾಣಿಸಿಕೊಂಡಿದ್ದಾರೆ ಎಂಬ ಮಾತು ಜಾಸ್ತಿ ಬಂದಿತ್ತು. ಆದರೆ ಅವರು ನಾಲ್ಕನೇ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ.
ಎರಡನೇ ರನ್ನರ್ ಅಪ್

ಬಿಗ್‌ ಬಾಸ್‌ ಮನೆಯಲ್ಲಿ ಜಗಳ, ಟಾಸ್ಕ್‌ ಎಲ್ಲದರಲ್ಲಿಯೂ ಸೈ ಎನಿಸಿಕೊಂಡಿದ್ದ ಅಶ್ವಿನಿ ಗೌಡ ಆರಂಭದಲ್ಲಿ ಅವರ ಆಟ, ನಡೆ,ನುಡಿ ಎಲ್ಲವೂ ನಕಾರಾತ್ಮಕ ಪ್ರತಿಕ್ರಿಯೆ ಪಡೆದಿತ್ತು. ಇವರು ಮಹಿಳಾಮಣಿಯಾಗಿ ಸಖತ್‌ ಆಗಿ ಆಟ ಆಡಿದರು, ಆಮೇಲೆ ಅವರ ವರ್ತನೆ ಬೇರೆಯದೇ ಆಯಿತು. ಇವರು ಮೂರನೇ ಸ್ಥಾನ ಪಡೆಯ ಬಹುದಾಗಿದೆ.

ಬಹುತೇಕರು ಹೇಳುವಂತೆ, ಬಹುತೇಕರ ಇಚ್ಛೆಯಂತೆ ಗಿಲ್ಲಿ ನಟ ಅವರೇ ಸೀಸನ್ 12 ರ ವಿನ್ನರ್‌ ಎನ್ನಲಾಗಿದೆ. ಅಂದಹಾಗೆ ರಕ್ಷಿತಾ ಶೆಟ್ಟಿ ಅವರು ರನ್ನರ್‌ ಅಂತೆ.

ಗೆದ್ದವರಿಗೆ 50 ಲಕ್ಷ ರೂಪಾಯಿ ಕ್ಯಾಶ್‌, ಒಂದು ಕಾರ್‌ ಸೇರಿದಂತೆ ಇನ್ನಿತರ ಬಹಮಾನಗಳ ಮಹಾಪೂರವೇ ಹರಿದು ಬರಲಿದೆ ಎನ್ನಲಾಗಿದೆ.

ಕನ್ನಡ ಬಿಗ್ ಬಾಸ್ ವಿಜೇತರಿಗೆ ಟ್ರೋಫಿ ಮತ್ತು ₹50 ಲಕ್ಷ ನಗದು ಬಹುಮಾನ ಸಿಗುತ್ತದೆ, ಜೊತೆಗೆ ಹೆಚ್ಚಿದ ಜನಪ್ರಿಯತೆ ಮತ್ತು ಅವಕಾಶಗಳು ಲಭಿಸುತ್ತವೆ; ಇತ್ತೀಚಿನ ಸೀಸನ್ 11 ಮತ್ತು 12ರಲ್ಲಿ ಹಣದ ಸೂಟ್‌ಕೇಸ್ (₹20 ಲಕ್ಷ) ಆಫರ್ ನೀಡುವಂತಹ ಟ್ವಿಸ್ಟ್‌ಗಳು ಬಂದಿದ್ದವು, ಆದರೆ ವಿಜೇತರು ಟ್ರೋಫಿ ಮತ್ತು ಪೂರ್ಣ ಬಹುಮಾನದೊಂದಿಗೆ ಹೊರಹೋಗುತ್ತಾರೆ. 

Leave a Reply

Your email address will not be published. Required fields are marked *

Optimized by Optimole
error: Content is protected !!