ಸಾಂದರ್ಭಿಕ ಚಿತ್ರ
ಅಮೆರಿಕ : ಪೆಂಟಗಾನ್ ಎಚ್ಚರಿಕೆ, ಇರಾನ್ ಯುದ್ಧದಲ್ಲಿ ಅಮೆರಿಕ ಬಳಿ ಇದ್ದ ಮಿಸೈಲ್ ಗಳ ಸ್ಟಾಕ್ನಲ್ಲಿ ಇಳಿಕೆ.!ಹಿನ್ನಡೆ ಆಗೋತ್ತ ಅಮೆರಿಕಕ್ಕೆ.!
news.ashwasurya.in
ಅಶ್ವಸೂರ್ಯ/ವಾಷಿಂಗ್ಟನ್ : ಇತ್ತೀಚೆಗೆ ನಡೆದ ಮಹತ್ವದ ಸಭೆಯಲ್ಲಿ ಯುದ್ಧಸಾಮಗ್ರಿ ದಾಸ್ತಾನುಗಳನ್ನು ಮರು ಪೂರಣಗೊಳಿಸಲು ಹೆಚ್ಚಿನ ವೆಚ್ಚಗಳನ್ನು ಎದುರಿಸುವಂತಹ ಹಲವಾರು ಅಪಾಯಗಳನ್ನು ಒಳಗೊಂಡಿರಬಹುದು ಎಂದು ಪೆಂಟಗನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ತಿಳಿಸಿದೆ ಎನ್ನಲಾಗಿದೆ. ಇಸ್ರೇಲ್ ಜೋತೆಗೆ ಸೇರಿಕೊಂಡು
ಇರಾನ್ ಮೇಲೆ ಯುದ್ಧ ಸಾರಿರುವ ಅಮೆರಿಕಕ್ಕೆ ಭಾರಿ ದೊಡ್ಡ ಹಿನ್ನಡೆಯುಂಟಾಗಿದ್ದು, ಯುದ್ಧಸಾಮಗ್ರಿಗಳ ಗಂಭೀರ ಕೊರತೆ ಎದುರಾಗಿದೆ ಎಂದು ಅಲ್ ಜಜೀರಾ (Al Jazeera) ಸುದ್ದಿಸಂಸ್ಥೆ ವರದಿ ಮಾಡಿದೆ.
ಇರಾನ್-ಇಸ್ರೇಲ್ ಮತ್ತು ಅಮೆರಿಕ ಸಂಘರ್ಷದಲ್ಲಿ ನಿರ್ಣಾಯಕ ಪಾತ್ರವಹಿಸಿರುವ ಅಮೆರಿಕಕ್ಕೆ ಹಾಲಿ ಯುದ್ಧದಲ್ಲಿ ಗಂಭೀರ ಹಿನ್ನಡೆಯಾಗುವ ಕುರಿತು ಪೆಂಟಗಾನ್ ಎಚ್ಚರಿಕೆ ನೀಡಿದ್ದು, ಮುಂದಿನ 10 ದಿನಗಳ ವರಗೆ ಸಾಕಾಗುವಷ್ಟು ಮಾತ್ರ ನಮ್ಮ ಬಳಿ ಮಿಸೈಲ್ಗಳ ದಾಸ್ತಾನಿದೆ ಎಂದು ಹೇಳಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಸಾಂದರ್ಭಿಕ ಚಿತ್ರ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ಇಂದು ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು, ಪೆಂಟಗನ್ನಿಂದ ಸೋರಿಕೆಯಾದ ಮಾಹಿತಿಯ ಪ್ರಕಾರ, ಅಮೆರಿಕವು ಇಸ್ಲಾಮಿಕ್ ಗಣರಾಜ್ಯದ ಮೇಲೆ ಇನ್ನೂ 10 ದಿನಗಳವರೆಗೆ ದಾಳಿ ಮಾಡುವುದನ್ನು ಮುಂದುವರಿಸಿದರೆ, ನಿರ್ಣಾಯಕ ಕ್ಷಿಪಣಿಗಳ ದಾಸ್ತಾನು ಕಡಿಮೆಯಾಗಬಹುದು ಎಂದು ವರದಿಯಾಗಿದೆ.


