Headlines

ಅಂಡರ್-19 : ನಾಯಕ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರಕ್ಕೆ ಹರಿಣಿ ಪಡೆ ದೂಳಿಪಟ.!10 ಸಿಕ್ಸರ್ ನೊಂದಿಗೆ ವೇಗದ ಅರ್ಧ ಶತಕ ಬಾರಿಸಿದ 14 ವರ್ಷದ ಬಾಲಕ.!

ನೂತನವಾಗಿ ಆರಂಭಗೊಂಡಿದೆ ” ಶ್ರೀ ದುರ್ಗಾ ದರ್ಶಿನಿ “ಉಪಹಾರ ಮಂದಿರ”

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ಅಂಡರ್ -19 ತಂಡಗಳ (U19 Cricket) ನಡುವಿನ ಎರಡನೇ ಏಕದಿನ ಪಂದ್ಯ ಸೋಮವಾರ ನಡೆಯುತ್ತಿದೆ. ಭಾರತದ ಅಂಡರ್ -19 ನಾಯಕ ವೈಭವ್ ಸೂರ್ಯವಂಶಿ 246 ರನ್ ಗಳನ್ನು ಬೆನ್ನಟ್ಟುವ ವೇಳೆ ತಮ್ಮ ಅಬ್ಬರದ ಬ್ಯಾಟಿಂಗ್ ನಿಂದ ಸಿಕ್ಸರ್​ಗಳ ಸುರಿಮಳೆ ಸುರಿಸಿದ 14 ವರ್ಷದ ಸ್ಫೋಟಕ ಬ್ಯಾಟ್ಸ್‌ಮನ್ ತಾವೆದುರಿಸಿದ ಕೇವಲ 24 ಎಸೆತಗಳಲ್ಲಿ 68 ರನ್​ಗಳೊಂದಿಗೆ ಅರ್ಧಶತಕ ಸಿಡಿಸಿದ್ದಾರೆ. ಬೆನೋನಿಯ ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಸೂರ್ಯವಂಶಿ ಬರೋಬ್ಬರಿ 10 ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಸಿಡಿಸಿದರು. ಕ್ಯಾಪ್ಟನ್ ಅಬ್ಬರಕ್ಕೆ ಭಾರತದ ಖಾತೆಗೆ ಕೇವಲ 8 ಓವರ್​ಗಳಲ್ಲಿ 95 ರನ್​ ಸೇರಿತು. ಯುವ ಬ್ಯಾಟ್ಸ್‌ಮನ್ ಒಟ್ಟಾರೆ ಸಿಡಿಸಿದ ರನ್​ಗಳಲ್ಲಿ ಶೇ. 94 ರಷ್ಟು ಸಿಕ್ಸರ್ ಮೂಲಕ ಬಂದಿದ್ದು ಹರಿಣಿಗಳನ್ನು ಸೋಲಿಗೆ ಶರಣಾಗುವಂತೆ ಮಾಡಿತು..

Leave a Reply

Your email address will not be published. Required fields are marked *

Optimized by Optimole
error: Content is protected !!