ಶಿವಮೊಗ್ಗ : ಆಗುಂಬೆ ಮತ್ತು ಮಾಳುರು ಪೊಲೀಸರ ಜಂಟಿ ಕಾರ್ಯಚರಣೆ ಕಳ್ಳತನ ಮಾಡಿದ್ದ ಆರೋಪಿ ಬಂಧನ.!
news.ashwasurya.in
ಅಶ್ವಸೂರ್ಯ/ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲೆ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುನ್ನೆ ನಂ:88/2025 ಕಲಂ: 331(3).305 ಅಡಿಯಲ್ಲಿ ಬಿಎನ್ಎಸ್ ಪ್ರಕರಣ ದಾಖಲಾಗಿದ್ದು
ಡಿಸೆಂಬರ್ 27 ರಂದು ಬೆಳಿಗ್ಗೆ ಸುಮಾರು 09 ಗಂಟೆಯ ಸುಮಾರಿಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಠಾಣಾ ವ್ಯಾಪ್ತಿಯ ತಲ್ಲೂಕು ಗ್ರಾಮದ ಕೌರಿಹಣ್ಣು ವಾಸಿ ಶ್ರೀ ಜೀವನ್ ಕೆ ಆರ್ ತಂದೆ ರಘುರಾಮ್ ರವರ ಮನೆಯ ಹಿಂಭಾಗಿಲನ್ನು ಮುರಿದು ಮನೆಯಲ್ಲಿದ್ದ ಸುಮಾರು 20 ಗ್ರಾಂ ಸುಮಾರು ಅಂದಾಜು 240000/- ಮೌಲ್ಯದ ಬೆಲೆಬಾಳುವ ಬಂಗಾರದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಆಗುಂಬೆ ಠಾಣೆಯಲ್ಲಿ ಗುನ್ನೆ ನಂ:88/2025 ಕಲಂ: 331(3).305 ಬಿಎನ್ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.ತಕ್ಷಣವೇ ಕಾರ್ಯಚರಣೆಗೆ ಬಿಳಿದ ಪೊಲೀಸರ ತಂಡ ಸದರಿ ಕಳುವಾದ ಮಾಲು ಮತ್ತು ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರವಿಂದ್ ಕಲಗುಚ್ಚಿ, ಡಿವೈಎಸ್ಪಿ ತೀರ್ಥಹಳ್ಳಿ ಉಪವಿಭಾಗ ಇವರ ಮಾರ್ಗದರ್ಶನದಲ್ಲಿ, ರಾಜಶೇಖರ್ ಎಲ್ ಸಿಪಿಐ ಮಾಳೂರು ವೃತ್ತ, ಶ್ರೀ ಶಿವನಗೌಡ ಪಿಎಸ್ಐ ಆಗುಂಬೆ ಠಾಣೆ ಹಾಗೂ ಸಿಬ್ಬಂದಿಗಳಾದ ದಿವಾಕರ್, ಸುರೇಶ್ ನಾಯ್ಕ, ಸುರಕ್ಷಿತ್, ವಿನಯ್ ಕುಮಾರ್, ಸುಭಾಷ್ ಹಾಗೂ ಚಾಲಕರಾದ ಅವಿನಾಶ್ ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿಕೊಂಡು ಯಶಸ್ವಿಯಾಗಿ ಕಾರ್ಯಚರಣೆ ನಡೆಸಿ ಈವರೆಗೆ ತನಿಖೆಯಲ್ಲಿ ದೊರೆತ ಮಾಹಿತಿಯಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಅಶೋಕ ಕೆ ಬಿನ್ ಕೃಷ್ಣಪ್ಪ, 41 ವರ್ಷ, ಕೂಲಿ ಕೆಲಸ, ಮಾಡುವ ಬಸವಾಪುರ, ಹಾರೋಹಿತ್ತಲು ಅಂಚೆ, ಹೊಸನಗರ ತಾಲ್ಲೂಕು. ಈತನನ್ನು ಪತ್ತೆ ಮಾಡಿ ಬಂಧಿಸಲಾಗಿದ್ದು ಒಟ್ಟು ಸುಮಾರು 20 ಗ್ರಾಂ ತೂಕದ ಬಂಗಾರದ ಒಡವೆಗಳು ಸುಮಾರು ಅಂದಾಜು ಮೌಲ್ಯ 240000/- ವನ್ನು ಹಾಗೂ ಕೃತ್ಯಕ್ಕೆ ಬಳಸಿದ ಕೆಎ15E-6521 ನೊಂದಣಿಯ ಬೈಕ್, ಅಂದಾಜು ಮೌಲ್ಯ 35000/- ವನ್ನು ವಶಪಡಿಸಿಕೊಳ್ಳಲಾಗಿದೆ.


