Headlines

ಜಾರ್ಖಂಡ್‌ / ಪೊಲೀಸ್ ವಶದಲ್ಲಿದ್ದ 200 ಕೆಜಿ ಗಾಂಜಾ ಎಲ್ಲಿ.? ವಿಚಾರಣೆ ವೇಳೆ ಪೊಲೀಸರ ಉತ್ತರಕ್ಕೆ ನ್ಯಾಯಾಲಯ ದಿಗ್ಭ್ರಮೆ.!! ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ.!!

ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಶುರುವಾಗಿದೆ. ಆರೋಪಿಯ ಹೇಳಿಕೆ, ಸಿಕ್ಕಿರುವ ಸಾಕ್ಷ್ಯಗಳು ಎಲ್ಲಾ ತದ್ವಿರುದ್ದವಾಗಿತ್ತು. ಆರೋಪಿ ಹಾಗೂ ಪೊಲೀಸರನ್ನು ಕೋರ್ಟ್ ವಿಚಾರಣೆಗಾಗಿ ಕೋರ್ಟ್‌ ಹಾಜರಿಗೆ ಸೂಚಿಸಿತ್ತು. ಇದರಂತೆ ಕೋರ್ಟ್ ಎಲ್ಲರೂ ಆಗಮಿಸಿದ್ದರು.ವಿಚಾರಣೆ ವೇಳೆ ಹೇಳಿಕೆಗೆ ತಾಳೆಯಾಗುತ್ತಿಲ್ಲ, ಸಾಕ್ಷ್ಯಗಳು ಲಭ್ಯವಿಲ್ಲ. ಹಲವು ಗೊಂದಲಗಳಿಂದ ಕೂಡಿತ್ತು. ಹೀಗಾಗಿ ವಶಪಡಿಸಿಕೊಂಡಿರುವ ಗಾಂಜಾ ಎಲ್ಲಿ ಎಂದು ನ್ಯಾಯಾಧೀಶರು ಕೇಳಿದ್ದಾರೆ.? ವಶಪಡಿಸಿಕೊಂಡಿದ್ದ 200 ಕೆಜಿ ಗಾಂಜಾವನ್ನು ಇಲಿಗಳು ತಿಂದಿದೆ ಎಂದು ಪೊಲೀಸರು ಉತ್ತರಿಸಿದ್ದಾರೆ.! ಪೊಲೀಸರ ಹೇಳಿಕೆ ಕೇಳಿದ ನ್ಯಾಯಾಧೀಶರು ಮತ್ತು ಅಲ್ಲಿದ್ದ ವಕೀಲರು ಮತ್ತು ಕೇಲವರು ಗಾಬರಿಯಾಗಿದ್ದಾರೆ ಜೋತೆಗೆ ಆಶ್ಚರ್ಯವು ಆಗಿದೆ.!

ಪೊಲೀಸ್ ಉತ್ತರಕ್ಕೆ ನ್ಯಾಯಾಲಯಕ್ಕೆ ದಿಗ್ಭ್ರಮೆಯಾಗಿದೆ. ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಗಾಂಜಾ ಇಲ್ಲ ಎಂದರೆ ಹೇಗೆ. ಪ್ರತಿ ಅಪರಾಧ ಪ್ರಕರಣಗಳಲ್ಲಿ ಘಟನೆಗೆ ಬಳಸಿಕೊಂಡಿರುವ, ಘಟನೆಯ ಪ್ರಮುಖ ವಸ್ತುಗಳು ಪ್ರಧಾನ. ಈ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಅದನ್ನು ಸಾಕ್ಷಿಯಾಗಿ, ದಾಖಲೆಯಾಗಿ ಸಲ್ಲಿಕೆ ಮಾಡಬೇಕು. ಆದರೆ ವಶಪಡಿಸಿಕೊಂಡ ಗಾಂಜ ಇಲಿ ತಿಂದಿದೆ ಎಂದರೆ, ಈ ಪ್ರಕರಣದ ಪ್ರಮುಖ ಸಾಕ್ಷಯೆ ( ದಸ್ತಗಿರಿ ಮಾಡಿದ್ದ 200 ಕೆಜಿ ಗಾಂಜಾ ) ಲಭ್ಯವಿಲ್ಲ. ಹೀಗಾಗಿ ಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಿತು. ಆರೋಪಿಗಳನ್ನು ಖುಲಾಸೆಗೊಳಿಸಿತು.

Leave a Reply

Your email address will not be published. Required fields are marked *

Optimized by Optimole
error: Content is protected !!