ತಮಿಳುನಾಡು||ಹಾಡಹಗಲೇ ಹೈವೇಯಲ್ಲಿ ಭೀಕರ ಕೃತ್ಯ.! ಹಂತಕರ ಲಾಂಗಿನೇಟಿಗೆ ಪತ್ನಿಯ ಎದುರಲ್ಲೆ ಉಸಿರು ಚಲ್ಲಿದ ರೌಡಿಶೀಟರ್.!
ತಿರುಪ್ಪೋರಿನ ಪೆರಿಯಪಾಳ್ಯಂ ನಿವಾಸಿ 35 ವರ್ಷದ ಚಾಣಕ್ಯ ಅಲಿಯಾಸ್ ಜಾನ್ ಹತ್ಯೆಯಾದ ರೌಡಿಶೀಟರ್. ಸೇಲಂನಾದ್ಯಂತ ಹಲವಾರು ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆಯಂತೆ. ಆತ ವಾಹನ ಮಾರಾಟ ಮತ್ತು ಫೈನಾನ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ.ವರದಿಗಳ ಪ್ರಕಾರ ಜಾನ್ ತನ್ನ ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ತಮ್ಮ ಕಾರಿನಲ್ಲಿ ಬೆನ್ನತ್ತಿ ಬಂದ ಹಂತಕರು ಹಿಂದಿನಿಂದ ಜಾನ್‌ನ ಕಾರಿಗೆ ಡಿಕ್ಕಿ ಹೊಡೆದು ನಿಲ್ಲುವಂತೆ ಮಾಡಿದ್ದಾರೆ. ನಂತರ ನಾಲ್ವರು ವ್ಯಕ್ತಿಗಳು ಕಾರಿನಿಂದ ಹೊರಬಂದು ಆತನ ಪತ್ನಿ ಶರಣ್ಯಳನ್ನು ಪಕ್ಕಕ್ಕೆ ತಳ್ಳಿ…