Headlines

ಶಿವಮೊಗ್ಗ : ನಮ್ಮೂರ ಬಳಗದಿಂದ ಹೆಚ್ ಪಿ ಗಿರೀಶ್ ಅವರಿಗೆ ಅಭಿನಂದನಾ ಸಮಾರಂಭ.

ಪತ್ರಿಕೆ ವಿತರಿಸಿದ ಕೈಗಳು- ದೇವರ ಕೈಗಳಿಗೆ ಮಿಗಿಲು – ರಾಷ್ಟ್ರೀಯ ಕೇರಂ ಪಟ್ಟು ಸಿ ರವಿ ಅಭಿಮತ…

ಅಶ್ವಸೂರ್ಯ | ಶಿವಮೊಗ್ಗ : ಶಿವಮೊಗ್ಗ ನಗರದ ಅಲ್ಲಮಪ್ರಭು ಫ್ರೀಡಂ ಪಾರ್ಕಿನ ನಮ್ಮೂರ ಬಳಗದ ವತಿಯಿಂದ ಕರ್ನಾಟಕ ಸರ್ಕಾರದಿಂದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ ನೇಮಕರಾದ ಯುವ ನಾಯಕ ನಮ್ಮೂರ ಬಳಗದ ಸಂಚಾಲಕ ಹೆಚ್‌.ಪಿ.ಗಿರೀಶ್ ಅವರನ್ನು ಅಭಿನಂದಿಸಲಾಯಿತು.
ಸಮಾರಂಭದಲ್ಲಿ ನಮ್ಮೂರ ಬಳಗದ ಗೌರವ ಸಂಚಾಲಕ, ರಾಷ್ಟ್ರೀಯ ಕೇರಂ ಪಟ್ಟು ಸಿ. ರವಿ ಅವರು ಮಾತನಾಡಿ ಪತ್ರಿಕೆ ವಿತರಿಸಿದ ಕೈಗಳು- ದೇವರ ಕೈಗಳಿಗೆ ಮಿಗಿಲು ,ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಬಳಗದ ಯುವ ಪ್ರಜ್ಞೆ, ಕ್ರಿಯಾಶೀಲ ವ್ಯಕ್ತಿತ್ವದ ಯುವ ನಾಯಕ ಸಾಮಾಜಿಕ ಚಿಂತನೆಯುಳ್ಳ ಹೋರಾಟಗಾರ ನಮ್ಮ ಬಳಗದ ಸಂಚಾಲಕರು ಆದ ಗಿರೀಶ್ ಅವರಿಗೆ ಕರ್ನಾಟಕ ಸರ್ಕಾರ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಮಹತ್ವದ ಹುದ್ದೆ ನೀಡಿರುವುದು ತುಂಬಾ ಹರ್ಷದ ಸಂಗತಿ ಇವರ ರಾಜಕೀಯ ಭವಿಷ್ಯ ಇನ್ನು ಉಜ್ವಲಗೊಳ್ಳಲಿ ಎಂದು ಅಭಿಮತ ವ್ಯಕ್ತಪಡಿಸಿದರು.

ನಮ್ಮೂರ ಬಳಗದ ಪ್ರಧಾನ ಸಂಚಾಲಕರದ ಕೆ ರಂಗನಾಥ್ ಹಾಗೂ ಮಾಜಿ ಉಪಮೇಯರಾದ ಎಚ್ ಪಾಲಾಕ್ಷಿ ಮಾತನಾಡಿ ಸಾಮಾಜಿಕ ಚಿಂತನೆಯುಳ್ಳ ಹೋರಾಟಗಾರನಿಗೆ , ವಚನ ಸಾಹಿತ್ಯದ ಮುಖಾಂತರ ಕ್ರಾಂತಿಕಾರಕ ಬದಲಾವಣೆಯನ್ನು ಜಗತ್ತಿಗೆ ಸಾರಿದ ಜಗಜ್ಯೋತಿ ಬಸವೇಶ್ವರರ “ಬಸವ ಕಲ್ಯಾಣದ ಅಭಿವೃದ್ಧಿ ಮಂಡಳಿ” ನೀಡಿರುವುದು ತುಂಬಾ ಹರ್ಷದ ಸಂಗತಿ ಎಂದರು.

ಈ ಸಂದರ್ಭದಲ್ಲಿ ಸೂಡ ಸದಸ್ಯರಾದ ಎಮ್ ಪ್ರವೀಣ್ ಕುಮಾರ್,ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಎಮ್ ರಾಹುಲ್, ಎಸ್ ಬಸವರಾಜ್, ಎಸ್ ಕುಮಾರೇಶ್, ನಮ್ಮೂರ ಬಳಗದ ಸಂಚಾಲಕರುಗಳಾದ ಕೆ.ಆರ್ ಸುರೇಶ್ , ಜಯ ಪ್ರಕಾಶ್, ಪ್ರಶಾಂತ್ ರಾಯ್, ಎಸ್ ಕೆ ಮನೋಜ್ , ರವಿ ಕುಳ್ಳಿ,,ಹರೀಶ್, ಬಿ ಲೋಕೇಶ್,ಶಮಿರ್, ಶಶಿ, ಸಿ , ಗೋಪಿ ಆಚಾರಿ, ಟಿವಿ ರಂಜಿತ್, ರಾಜೇಶ್ ಮಂದಾರ, ವಿನಯ್, ಗುರುಪ್ರಸಾದ್ ಕೆ ಎಲ್ ಪವನ್, ಮನ್ವಿತ್, ಸಂದೀಪ್ ಸುಂದರ್ ರಾಜ್, ಬೊಮ್ಮನಕಟ್ಟೆ ಧರ್ಮ ,ನಾಗೇಶ್, ನದೀಮ್ , ಹಾಗೂ ನಮ್ಮೂರ ಬಳಗದ ಎಲ್ಲ ಸಂಚಾಲಕರುಗಳು ನಾಗರಿಕ ಬಂಧುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!