ಕೊಲ್ಕತ್ತಾ : ದುರ್ಗಾ ಪೂಜೆ ಹೊರಟಿದ್ದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನಿಸಿದ ಮಹಿಳೆ.! ಪೊಲೀಸರ ವಶಕ್ಕೆ!


news.ashwasurya.in
ಅಶ್ವಸೂರ್ಯ/ಕೊಲ್ಕತ್ತಾ : ಕಾಳಿಘಾಟ್ ನಿವಾಸದ ಎದುರು ದುರ್ಗಾ ಪೂಜೆಗೆ ಹೊರಟಿದ್ದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿ ಮಾಡಲು ಮಹಿಳೆಯೊಬ್ಬರು ಯತ್ನಿಸಿದ್ದಾರೆ!ಮಾಜಿ ಮುಖ್ಯಮಂತ್ರಿ
ಮಮತಾ ಬ್ಯಾನರ್ಜಿ ಮೇಲೆ ಚಾಕು ಹಿಡಿದು ದಾಳಿಗೆ ಯತ್ನಿಸಿದ ಆರೋಪಿ ಮಹಿಳೆ ತನಿಷ್ಠಾ ಸಾಹಾ ಅವರನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ
ಮಮತಾ ಬ್ಯಾನರ್ಜಿ ಅವರ ಭದ್ರತೆಗೆ ಭಾರಿ ಧಕ್ಕೆ ಉಂಟಾಗಿದ್ದು, ಅವರ ಕಾಳಿಘಾಟ್ ನಿವಾಸದ ಎದುರು ಚಾಕು ಹಿಡಿದು ಬಂದ ಮಹಿಳೆ ಏಕಾಏಕಿ ದಾಳಿಗೆ ಯತ್ನಿಸಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ ಈ ಘಟನೆ ಅಕ್ಟೋಬರ್ 13 ರ ಮಂಗಳವಾರ ಸಂಜೆ ನಡೆದಿದೆ. ‘Z+’ ಭದ್ರತೆ ಹೊಂದಿರುವ ಮೂರು ಬಾರಿಯ ಮುಖ್ಯಮಂತ್ರಿಯ ಮನೆ ಬಾಗಿಲಿಗೇ ಆಯುಧ ಹಿಡಿದು ನುಗ್ಗಿದ ಮಹಿಳೆಯ ಹುಚ್ಚಾಟಕ್ಕೆ ಎನನ್ಮಬೇಕೊ.
ಮಂಗಳವಾರ ಸಂಜೆ ಸುಮಾರು 6 ಗಂಟೆಗೆ ಕಾಳಿಘಾಟ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಮತಾ ಬ್ಯಾನರ್ಜಿ ತಮ್ಮ ನಿವಾಸದ ಪಕ್ಕದಲ್ಲೇ ಇರುವ ಕಾಳಿಘಾಟ್ ಮಿಲನ್ ಸಂಘ ಆಯೋಜಿಸಿದ್ದ ದುರ್ಗಾ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಲು ಮನೆಯಿಂದ ಹೊರಬರುತ್ತಿದ್ದರು. ಹೊರಗೆ ನಾಯಕರು, ಕಾರ್ಯಕರ್ತರು ಕಾದು ನಿಂತಿದ್ದರು. ಇದೇ ವೇಳೆ ಏಕಾಏಕಿ ಪ್ರತ್ಯಕ್ಷಳಾದ ಯುವತಿಯೊಬ್ಬಳು, ಮಮತಾ ಅವರತ್ತ ಚಾಕು ಝಳಪಿಸುತ್ತಾ ನುಗ್ಗಲು ಯತ್ನಿಸಿದ್ದಾಳೆ.
“ನಾನು ದೀದಿ ಸೊಸೆ” ಎಂದಿದ್ದ ಡ್ರಗ್ ಅಡಿಕ್ಟ್!
ದಾಳಿಗೆ ಮುಂದಾದ ಮಹಿಳೆಯನ್ನು ‘ತನಿಷ್ಠಾ ಸಾಹಾ’ ಎಂದು ಗುರುತಿಸಲಾಗಿದೆ. ಈಕೆ ತಾನು ‘ಸಿವಿಕ್ ಪೊಲೀಸ್ ಸ್ವಯಂಸೇವಕಿ’ ಹಾಗೂ ಸ್ವತಃ ಮಮತಾ ಬ್ಯಾನರ್ಜಿ ಅವರ ಸೋದರಸಂಬಂಧಿ (ಸೊಸೆ) ಎಂದು ಹೇಳಿಕೊಂಡಿದ್ದು, ಘಟನೆ ವೇಳೆ ಈಕೆ ತೀವ್ರವಾಗಿ ಮಾದಕ ದ್ರವ್ಯ ಸೇವಿಸಿದ್ದು, ನಶೆಯಲ್ಲಿದ್ದಳು ಎಂದು ತಿಳಿದುಬಂದಿದೆ.
ಮಮತಾ ಬ್ಯಾನರ್ಜಿ ಹೊರಬರುತ್ತಿದ್ದಂತೆಯೇ ಈಕೆ ಆಕ್ರಮಣಕಾರಿಯಾಗಿ ಮುನ್ನುಗ್ಗಿದ್ದಾಳೆ. ಆರಂಭದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯದೆ ಅಲ್ಲಿದ್ದವರು ಕ್ಷಣಕಾಲ ಗಲಿಬಿಲಿಗೊಂಡಿದ್ದಾರೆ. ಆದರೆ ಆಕೆಯ ಕೈಯಲ್ಲಿದ್ದ ಚಾಕು ಕಂಡು ತಕ್ಷಣ ಎಚ್ಚೆತ್ತ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯರು ಆಕೆಯನ್ನು ಹಿಡಿದು ತಡೆದಿದ್ದಾರೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿದೆ ಎನ್ನಲಾಗಿದೆ.
ಮನೆ ಮುಂದೆ ಬಾಯಿಗೆ ಬಂದಂತೆ ಬೈಗುಳ!
ದಾಳಿ ಯತ್ನ ವಿಫಲವಾಗುತ್ತಿದ್ದಂತೆ ಆಕೆ ಮಮತಾ ಬ್ಯಾನರ್ಜಿ ಮನೆಯ ಮುಖ್ಯ ದ್ವಾರದಲ್ಲೇ ನಿಂತು ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾಳೆ. ಅಷ್ಟಕ್ಕೇ ನಿಲ್ಲದೆ ರಸ್ತೆಯ ಮೇಲೆಯೇ ಮಲಗಿ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಈ ಘಟನೆಯಿಂದ ರೊಚ್ಚಿಗೆದ್ದ ಟಿಎಂಸಿ ನಾಯಕಿ ಹಾಗೂ ರಾಜ್ಯಸಭಾ ಸಂಸದೆ ಡೋಲಾ ಸೇನ್ ತಕ್ಷಣವೇ ಕಾಳಿಘಾಟ್ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿದ್ದ ಫೋಟೋ ಹಾಗೂ ವಿಡಿಯೋ ಸಾಕ್ಷ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 173ರ ಅಡಿಯಲ್ಲಿ ಕಠಿಣ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.
Disturbing incident. At 6 PM, one Tannishtha Saha, reportedly a Civic Volunteer, attempted to murder our former Chief Minister, @MamataOfficial, a Z+ category protectee with a knife.
Speaks volumes about the state of Law and Order under the @SuvenduWB administration. pic.twitter.com/Mc7yNLh0u4— Nilanjan Das (@NilanjanDasAITC) October 13, 2026
Z+ ಸೆಕ್ಯೂರಿಟಿ ಇರೋ ಸಿಎಂ ಮನೆಗೇ ಚಾಕು ತಂದದ್ದು ಹೇಗೆ?
ಈ ಘಟನೆ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ನಾಯಕರು ಬೆಂಕಿ ಉಗುಳಿದ್ದಾರೆ. ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟಿಎಂಸಿ ಸಂಸದ ಸಾಕೇತ್ ಗೋಖಲೆ, ಮಾದಕ ವ್ಯಸನಿಯೊಬ್ಬಳು ಇಂದು ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಬಂದು ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದ್ದಾಳೆ.
ಬಂಗಾಳದಲ್ಲಿ Z+ ಭದ್ರತೆ ಹೊಂದಿರುವ ಮೂರು ಬಾರಿಯ ಮುಖ್ಯಮಂತ್ರಿಯೇ ಸುರಕ್ಷಿತವಾಗಿಲ್ಲ ಎಂದರೆ ಪರಿಸ್ಥಿತಿ ಏನಾಗಿದೆ ನೋಡಿ! ದೆಹಲಿಯಲ್ಲಿ ಬಿಜೆಪಿಯನ್ನು ಬುಡಸಮೇತ ಕಿತ್ತೊಗೆಯಲು ‘ದೀದಿ’ ನಿಂತಿರುವುದರಿಂದಲೇ ಇದು ಅವರ ವಿರುದ್ಧ ಹೆಣೆದ ಪೂರ್ವಯೋಜಿತ ಪಿತೂರಿಯೇ? ಎಂದು ಕೇಂದ್ರದ ವಿರುದ್ಧ ಗುಡುಗಿದ್ದಾರೆ.
ಅಷ್ಟಕ್ಕೂ ಗನ್ ಹಿಡಿದ ಕಮಾಂಡೋಗಳು, ಸ್ಥಳೀಯ ಪೊಲೀಸರ ಬಿಗಿ ಕಾವಲು ಇರುವ ಕಾಳಿಘಾಟ್ಗೆ ಈ ಮಹಿಳೆ ಚಾಕು ಹಿಡಿದುಕೊಂಡು ಹೇಗೆ ಬಂದಳು? ಭದ್ರತಾ ವೈಫಲ್ಯದ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆಗಳು ಈಗ ಎದ್ದಿವೆ. ಸದ್ಯ ಪೊಲೀಸರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ತನಿಖೆ ನಂತರ ನೈಜ ಸಂಗತಿ ಹೊರ ಬರಬೇಕಿದೆ,


