ಶಿವಮೊಗ್ಗ : ಸಹಕಾರ ಶಿಕ್ಷಣ ನಿಧಿಗೆ ಸಿಟಿ ಕೋ ಆಪರೇಟಿವ್ ಬ್ಯಾಂಕ್ನಿಂದ ₹1 ಲಕ್ಷಕ್ಕೂ ರೂಪಾಯಿ ಕೊಡುಗೆ!
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಕ್ಕೆ ₹1,00,098 ಮೊತ್ತದ ಚೆಕ್ ಹಸ್ತಾಂತರ..
ಅಶ್ವಸೂರ್ಯ/ಶಿವಮೊಗ್ಗ: ನಗರದ ಪ್ರತಿಷ್ಠಿತ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಸಹಕಾರ ಕ್ಷೇತ್ರದ ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, 2025-26ನೇ ಸಾಲಿನ ನಿವ್ವಳ ಲಾಭಾಂಶದಲ್ಲಿ ಮೀಸಲಿರಿಸಿದ ಸಹಕಾರ ಶಿಕ್ಷಣ ನಿಧಿಗೆ ₹1,00,098 ಮೊತ್ತದ ಚೆಕ್ ಅನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತಕ್ಕೆ ಹಸ್ತಾಂತರಿಸಿದೆ.
ಬ್ಯಾಂಕಿನ ನಿವ್ವಳ ಲಾಭಾಂಶದಲ್ಲಿ ಶೇ.2ರಷ್ಟು ಮೊತ್ತವನ್ನು ಸಹಕಾರ ಶಿಕ್ಷಣ ನಿಧಿಗಾಗಿ ಮೀಸಲಿರಿಸಲಾಗಿದ್ದು, ಅದರಂತೆ ನಿಗದಿಪಡಿಸಿದ ಮೊತ್ತದ ಚೆಕ್ ಅನ್ನು ಬ್ಯಾಂಕಿನ ಅಧ್ಯಕ್ಷರಾದ ಕೆ. ರಂಗನಾಥ್ ಅವರು ಜಿಲ್ಲಾ ಸಹಕಾರಿ ಯೂನಿಯನ್ನ ಸಿಇಒ ಯಶವಂತ್ ಅವರ ಮುಖಾಂತರ ಹಸ್ತಾಂತರಿಸಿದರು.

ಸಹಕಾರ ಕ್ಷೇತ್ರದಲ್ಲಿ ಶಿಕ್ಷಣ, ಅರಿವು ಹಾಗೂ ತರಬೇತಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಹಕಾರ ಶಿಕ್ಷಣ ನಿಧಿಗೆ ಕೊಡುಗೆ ನೀಡಿರುವ ಬ್ಯಾಂಕಿನ ಈ ಕ್ರಮ ಗಮನಾರ್ಹವಾಗಿದೆ.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಪ್ರೇಮಾ ಚಂದ್ರಶೇಖರ್, ಬಿ. ಲೋಕೇಶ್ ಹಾಗೂ ಬ್ಯಾಂಕಿನ ಸಿಇಒ ಮನೋಜ್ ಕುಮಾರ್ ಉಪಸ್ಥಿತರಿದ್ದರು.
ಸಹಕಾರ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡುವ ಮೂಲಕ ಸಿಟಿ ಕೋ ಆಪರೇಟಿವ್ ಬ್ಯಾಂಕ್ ತನ್ನ ಸಾಮಾಜಿಕ ಹಾಗೂ ಸಹಕಾರ ಕ್ಷೇತ್ರದ ಬದ್ಧತೆಯನ್ನು ಮೆರೆದಿದೆ.
ಇನ್ನಷ್ಟು ಸುದ್ದಿಗಳಿಗಾಗಿ: news.ashwasurya.in
ಸುದ್ದಿಯ ಹಿಂದೆ ಸತ್ಯ… ಜನರ ಜೊತೆಗೆ ಅಶ್ವಸೂರ್ಯ…

