
🚨 ಶಿವಮೊಗ್ಗ ಜಿಲ್ಲೆಯಾದ್ಯಂತ ಕೆಲವು ಸ್ವೀಟ್ ಹೌಸ್ ಗಳಲ್ಲಿ ಕಲಬೆರಕೆ ಸಿಹಿತಿಂಡಿಗಳ ಭರ್ಜರಿ ವ್ಯಾಪಾರ.!! ಈ ಕಲಬೆರಕೆ ಸಿಹಿತಿಂಡಿಗಳು ಎಲ್ಲಿ ತಯಾರಾಗುತ್ತವೆ.?ಅಧಿಕಾರಿಗಳ ಮೌನವೇಕೆ.!
news.ashwasurya.in.

ಪ್ರತಿಷ್ಠಿತ ಸ್ವೀಟ್ ಹೌಸ್ಗಳಿಗೆ ರವಾನೆ ಗ್ರಾಹಕರಿಗೆ ಗೊತ್ತಿಲ್ಲದಂತೆ ಪೂರೈಕೆ? ಈ ಸ್ವೀಟ್ ತಿಂದವರು ಸುಡುಗಾಡಿಗೆ…!!
ಅಶ್ವಸೂರ್ಯ/ಶಿವಮೊಗ್ಗ : ನಕಲಿ ಸ್ವೀಟ್ ತಯಾರಿಸುವ ಸ್ಥಳದಲ್ಲಿ ಕೆಜಿಗೆ 150 ರೂಪಾಯಿಗೆ ಬಿಕರಿಯಾಗುವ ಕಲಬೆರಕೆ ಸ್ವೀಟ್ ಎಜೆಂಟ್ಗಳ ಮುಖಾಂತರ ಕೇಲವು ಸ್ವೀಟ್ ಹೌಸ್ ಗಳಿಗೆ 220 ರೂಪಾಯಿಗಳಿಗೆ ರೂಪಾಯಿಗೆ ಬಿಕರಿಯಾಗುತ್ತಿದೆ ಕಲಬೆರಕೆ ಸಿಹಿ ತಿನಿಸುಗಳು,!!

ಶಿವಮೊಗ್ಗ ನಗರದ ಬಸ್ ಸ್ಟ್ಯಾಂಡ್ ಹಿಂಬಾಗ, ಮಂಡ್ಲಿ ಹಾಗೂ ಇನ್ನಿತರ ನಿಗೂಢ ಸ್ಥಳಗಳಲ್ಲಿ ತಯಾರಾಗುವ ನಕಲಿ ಸ್ವೀಟ್ ಇದೀಗ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಗ್ರಾಹಕರಿಗೆ ಮಾಹಿತಿ ಇಲ್ಲದ ರೀತಿಯಲ್ಲಿ ನಗರದ ಕೆಲವು ಪ್ರತಿಷ್ಠಿತ ಸ್ವೀಟ್ ಹೌಸ್ಗಳಿಗೆ ಈ ಸಿಹಿತಿಂಡಿಗಳು ಪೂರೈಕೆಯಾಗುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಕೆ.ಜಿ.ಗೆ ಕೇವಲ ₹150 ದರದಲ್ಲಿ ಸಿಹಿತಿಂಡಿ ತಯಾರಿಸಿ ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ ಎನ್ನಲಾಗುತ್ತಿದ್ದು, ಇದರ ಗುಣಮಟ್ಟ ಮತ್ತು ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.ಆದರೆ ಗ್ರಾಹಕನಿನೆ 220 ಅಲ್ಲ 400 ರಿಂದ 500 ರೂಪಾಯಿಗೆ ಬಲಿ ಹಾಕುತ್ತಿದ್ದಾರೆ.!

⚠️ ಮತ್ತೊಂದು ಗಂಭೀರ ಆರೋಪ — ಕೋವಾ ಎಲ್ಲಿಂದ ಬರುತ್ತಿದೆ?
ಈ ಸಿಹಿತಿಂಡಿಗಳ ತಯಾರಿಕೆಗೆ ಬಳಸಲಾಗುತ್ತಿದೆ ಎನ್ನಲಾದ ಕೋವಾ ತಮಿಳುನಾಡಿನಿಂದ ಬರುತ್ತದೆ ಎಂಬ ಮಾಹಿತಿ ಇದೀಗ ಕುತೂಹಲಕ್ಕೆ ಕಾರಣವಾಗಿದೆ.ಇದು ಕತ್ತಲೆ ರಾತ್ರಿಯ ಅಂಧ ಧಂದೆ.!
ಇದರ ಜೊತೆಗೆ, ಈ ಕೋವಾ ನಕಲಿಯಾಗಿದ್ದು, ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗುತ್ತದೆ ಎಂಬ ಅನುಮಾನವೂ ವ್ಯಕ್ತವಾಗಿದೆ.!!
ಹೀಗಾಗಿ ಕೋವಾ ಮತ್ತು ಸಿಹಿತಿಂಡಿಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವೈಜ್ಞಾನಿಕ ಪರೀಕ್ಷೆ ನಡೆಸಬೇಕು. ಪರೀಕ್ಷೆಯ ವರದಿ ಬಂದ ನಂತರವೇ ಅದರಲ್ಲಿರುವ ಪದಾರ್ಥಗಳ ನೈಜ ಸ್ವರೂಪ ಬಹಿರಂಗವಾಗಲಿದೆ.
🔥 ಯಾರು ಈ ದಂಧೆಯ ಕಿರಾತಕ.? ತಯಾರಿಕೆ ಹೇಗೆ ನಡೆಯುತ್ತಿದೆ?
ಯಾವ ಸ್ವೀಟ್ ಹೌಸ್ಗಳಿಗೆ ಪೂರೈಕೆಯಾಗುತ್ತಿದೆ?
ಬಳಸುವ ಕೋವಾ ಮತ್ತು ಇತರೆ ಕಚ್ಚಾ ವಸ್ತುಗಳ ಮೂಲವೇನು?
ಈ ಸಿಹಿತಿಂಡಿ ತಯಾರಿಕೆ ಮತ್ತು ಪೂರೈಕೆಯ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ಅಶ್ವಸೂರ್ಯ ನ್ಯೂಸ್ ಮಾಹಿತಿ ಸಂಗ್ರಹಿಸುತ್ತಿದೆ.

🛑 ಸಿಹಿಯ ಹೆಸರಿನಲ್ಲಿ ಮನುಷ್ಯನ ಜೀವದ ಜೋತೆಗೆ ಚೆಲ್ಲಾಟವೇ?
ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ವಿಷಯ. ಆದ್ದರಿಂದ ಆಹಾರ ಸುರಕ್ಷತಾ ಇಲಾಖೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಕಚ್ಚಾ ವಸ್ತುಗಳು ಮತ್ತು ಸಿದ್ಧ ಸಿಹಿತಿಂಡಿಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
₹220ಕ್ಕೆ ಕೆ.ಜಿ. ಸಿಹಿತಿಂಡಿ… ಇದರ ಹಿಂದಿನ ರಹಸ್ಯವೇನು? ಕೋವಾ ನಿಜವೇ? ನಕಲಿಯೇ?
ಪ್ರಾಣಿಗಳ ಕೊಬ್ಬಿನ ಆರೋಪದಲ್ಲಿ ಸತ್ಯ ಎಷ್ಟು? ಎಲ್ಲವನ್ನೂ ಬಯಲು ಮಾಡಲಿದೆ ಪತ್ರಿಕೆ..
ನಕಲಿ ಸಿಹಿತಿಂಡಿಗಳನ್ನು (Fake / Adulterated Sweets) ತಯಾರಿಸಲು ಅಥವಾ ಅವುಗಳ ತೂಕ ಹಾಗೂ ಬಣ್ಣವನ್ನು ಹೆಚ್ಚಿಸಲು ವ್ಯಾಪಾರಿಗಳು ಹಲವು ರೀತಿಯ ಹಾನಿಕಾರಕ ಮತ್ತು ಅಸಹಜ ವಸ್ತುಗಳನ್ನು ಬಳಸುತ್ತಾರೆ.!!

ಪ್ರತಿನಿತ್ಯವು ಇಂತಹ ಕಲಬೆರಕೆ ಸಿಹಿತಿಂಡಿಗಳು ಹೆಚ್ಚಾಗಿ ಕಂಡುಬರುತ್ತಿವೆ.
ನಕಲಿ ಸ್ವೀಟ್ಸ್ ತಯಾರಿಸಲು ಬಳಸುವ ಹಾನಿಕರ ವಸ್ತುಗಳು ಇಲ್ಲಿವೆ : ಸ್ಟಾರ್ಚ್ (ಗಂಜಿ) ಮತ್ತು ಮೈದಾ ಹಿಟ್ಟು: ಕೋವಾ (ಖೋವಾ), ಮಾವಾ ಅಥವಾ ಪನೀರ್ನ ಪ್ರಮಾಣವನ್ನು ಮತ್ತು ತೂಕವನ್ನು ಹೆಚ್ಚಿಸಲು ಅಗ್ಗದ ಸ್ಟಾರ್ಚ್, ಆಲೂಗಡ್ಡೆ ಪುಡಿ ಅಥವಾ ಮೈದಾವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆರೆಸಲಾಗುತ್ತದೆ.
ಡಿಟರ್ಜೆಂಟ್ ಮತ್ತು ಸೋಪ್ (ಅಲಗೆ ಪುಡಿ): ನಕಲಿ ಹಾಲು ಅಥವಾ ಸಿಂಥೆಟಿಕ್ ಹಾಲನ್ನು ತಯಾರಿಸಲು ಡಿಟರ್ಜೆಂಟ್ ಸೋಪ್, ಯೂರಿಯಾ, ಕಾಸ್ಟಿಕ್ ಸೋಡಾ ಮತ್ತು ಗ್ಲೂಕೋಸ್ ಅನ್ನು ಬಳಸಲಾಗುತ್ತದೆ. ಇದರಿಂದ ತಯಾರಾಗುವ ಖೋವಾ ಸಂಪೂರ್ಣ ನಕಲಿಯಾಗಿರುತ್ತದೆ.
ಬ್ಲಾಟಿಂಗ್ ಪೇಪರ್ (Blotting Paper): ರಬ್ರಿ (Rabri) ಮತ್ತು ಗಟ್ಟಿಯಾದ ಹಾಲಿನ ಸ್ವೀಟ್ಸ್ ತಯಾರಿಸುವಾಗ ತೂಕ ಹೆಚ್ಚಿಸಲು ಮತ್ತು ಹಾಲಿನ ಕೆನೆಯಂತೆ ಕಾಣಿಸಲು ಬ್ಲಾಟಿಂಗ್ ಪೇಪರ್ ಅಥವಾ ಕಾಗದದ ಮಜ್ಜೆಯನ್ನು (Paper Pulp) ಅರೆದು ಹಾಕಲಾಗುತ್ತದೆ. ಚಾಕ್ ಪೌಡರ್ ಮತ್ತು ಸುಣ್ಣ: ಬಿಳಿಯ ಬಣ್ಣ ಹಾಗೂ ತೂಕ ಬರಲು ಖೋವಾ ಮತ್ತು ಬೆಲ್ಲಕ್ಕೆ ಚಾಕ್ ಪೌಡರ್ ಅಥವಾ ಯೂರಿಯಾವನ್ನು ಮಿಶ್ರಣ ಮಾಡಲಾಗುತ್ತದೆ.
ಅಲ್ಯೂಮಿನಿಯಂ ಫಾಯಿಲ್ (Fake Vark): ಕಾಜು ಕತ್ಲಿ ಮತ್ತು ಬರ್ಫಿಗಳ ಮೇಲೆ ಅಲಂಕರಿಸುವ ಬೆಳ್ಳಿ ವರಕ್ (Silver Leaf) ಬದಲಿಗೆ ಅಗ್ಗದ ಹಾಗೂ ವಿಷಕಾರಿಯಾದ ಅಲ್ಯೂಮಿನಿಯಂ ಅನ್ನು ಬಳಸಲಾಗುತ್ತದೆ.

ಡಾಲ್ಡಾ ಮತ್ತು ಪ್ರಾಣಿಗಳ ಕೊಬ್ಬು: ಶುದ್ಧ ತುಪ್ಪದ (Desi Ghee) ಬದಲು ವನಸ್ಪತಿ (ಡಾಲ್ಡಾ), ಅಗ್ಗದ ಪಾಮ್ ಆಯಿಲ್ ಅಥವಾ ಪ್ರಾಣಿಗಳ ಕೊಬ್ಬನ್ನು ಕರಗಿಸಿ ಸ್ವೀಟ್ಸ್ ತಯಾರಿಸಲು ಬಳಸುತ್ತಾರೆ.
ಅಪಾಯಕಾರಿ ರಾಸಾಯನಿಕ ಬಣ್ಣಗಳು: ಸಿಹಿತಿಂಡಿಗಳಿಗೆ ಆಕರ್ಷಕ ಬಣ್ಣ ನೀಡಲು ಅನುಮತಿ ಇಲ್ಲದ ಮೆಟಾನಿಲ್ ಯೆಲ್ಲೋ (Metanil Yellow), ರೊಡಮೈನ್ ಬಿ (Rhodamine B) ನಂತಹ ಕ್ಯಾನ್ಸರ್ ಕಾರಕ ಕೆಮಿಕಲ್ ಬಣ್ಣಗಳನ್ನು ಬಳಸಲಾಗುತ್ತದೆ.
ಫಾರ್ಮಾಲಿನ್ (Formalin): ಸಿಹಿತಿಂಡಿಗಳು ದೀರ್ಘಕಾಲ ಕೆಡದಂತೆ ಇಡಲು ಶವಗಳನ್ನು ಸಂರಕ್ಷಿಸಲು ಬಳಸುವ ‘ಫಾರ್ಮಾಲಿನ್’ ಎಂಬ ಅಪಾಯಕಾರಿ ಪ್ರಿಸರ್ವೇಟಿವ್ ಅನ್ನು ಬಳಸಲಾಗುತ್ತದೆ.
ಇಂತಹ ನಕಲಿ ಆಹಾರ ಪದಾರ್ಥಗಳ ಸೇವನೆಯಿಂದ ಲಿವರ್, ಕಿಡ್ನಿ ಸಮಸ್ಯೆಗಳು ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ.

ಶಿವಮೊಗ್ಗ ನಗರದಲ್ಲಿ ಎಲ್ಲೆಲ್ಲಿ ತಯಾರಾಗುತ್ತದೆ, ಅ ಸ್ಥಳಗಳು ಎಲ್ಲಿವೆ,ಯಾವ ಸ್ವೀಟ್ ತಯಾರಾಗುತ್ತದೆ,ಶಿವಮೊಗ್ಗ ಜಿಲ್ಲೆಯ ಯಾವ ಯಾವ ಸ್ವೀಟ್ ಹೌಸ್ ಗಳಲಿ ಈ ಕಲಬೆರಕೆ ಸ್ವೀಟ್ ಬಿಕರಿಯಾಗುತ್ತವೆ.ಈ ಸ್ವೀಟ್ ಗಳನ್ನು ಸ್ವೀಟ್ ಹೌಸ್ ಗಳಿಗೆ ಬಿಕರಿಮಾಡುವ ಏಜೆಂಟ್ರ್ ಗಳು ಯಾರು.? ಎಲ್ಲವನ್ನೂ ನಿಮ್ಮ ಮುಂದಿಡಲಿದ್ದೇನೆ ನಿರೀಕ್ಷಿಸಿ..

🔥 ಸಂಪೂರ್ಣ ವರದಿ ಮುಂದಿನ ಸಂಚಿಕೆಯಲ್ಲಿ…
📞 ಮಾಹಿತಿ / ಸಂಪರ್ಕ:
– ಸುಧೀರ್ ವಿಧಾತ,
9483165999 | 7760532474
📰 ಅಶ್ವಸೂರ್ಯ ನ್ಯೂಸ್ ಶಿವಮೊಗ್ಗ.
ಸುದ್ದಿಯ ಹಿಂದೆ ಸತ್ಯ… ಜನರ ಜೊತೆ ಅಶ್ವಸೂರ್ಯ


