
ತಡರಾತ್ರಿ ಎಸಿಪಿ ಕಚೇರಿ ಕೂಗಳತೆ ದೂರದಲ್ಲೇ ಡ್ರ್ಯಾಗರ್ ನಿಂದ ಇರಿದು ರೌಡಿಶೀಟರ್ ದೀಪು ಮರ್ಡರ್.!
ಬೆಂಗಳೂರಿನಲ್ಲಿ ತಡರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆಯಲ್ಲಿ ರೌಡಿಶೀಟರ್ ದೀಪಕ್ (31) ಎಂಬಾತನನ್ನು ಡ್ರ್ಯಾಗರ್ನಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಘಟನೆಯು ಪೀಣ್ಯ ಎಸಿಪಿ (ACP) ಕಚೇರಿಯ ಕೂಗಳತೆ ದೂರದಲ್ಲೇ ನಡೆದಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ…
news.ashwasurya. in
ಅಶ್ವಸೂರ್ಯ/ ಬೆಂಗಳೂರು: ಬೆಂಗಳೂರಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿ ರೌಡಿಶೀಟರ್ ಕೊಲೆ ಮಾಡಲಾಗಿದೆ. ಪೀಣ್ಯ ಎಸಿಪಿ ಕಚೇರಿಯ ಕೂಗಳತೆ ದೂರದಲ್ಲಿಯೇ ತಡರಾತ್ರಿ ಈ ಹತ್ಯೆ ನಡೆದಿದೆ.
ದೀಪಕ್ ಅಲಿಯಾಸ್ ದೀಪು(31) ಕೊಲೆಯಾದ ರೌಡಿಶೀಟರ್ ಎಂದು ಗಿರುತಿಸಲಾಗಿದ್ದು. ದೀಪಕ್ ಕೊಲೆಗೈದ ಹಂತಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಬನ್ನೇರುಘಟ್ಟದ ದೀಪಕ್ ನಿನ್ನೆ ದಾಸರಹಳ್ಳಿಯಲ್ಲಿ ಸಾಮೂಹಿಕ ಗಣೇಶನ ವಿಸರ್ಜನೆ ಇದ್ದ ಕಾರಣ ಅಲ್ಲಿಗೆ ಹೊಗಿದ್ದ.
ಸ್ನೇಹಿತರ ಜೊತೆಗೆ ತೆರಳಿದ್ದ ದೀಪಕ್ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ದೀಪು ಯುವಕನೊಬ್ಬನ ಕಾಲು ತುಳಿದಿದ್ದಾನೆ. ಇದೇ ವಿಚಾರಕ್ಕೆ ಜಗಳ ಶುರುವಾಗಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಗಲಾಟೆಯ ವೇಳೆ ದುಷ್ಕರ್ಮಿಗಳು ಡ್ರ್ಯಾಗರ್ ನಿಂದ ದೀಪುಗೆ ಇರಿದು ಪರಾರಿಯಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ದೀಪಕ್ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಡಿಸಿಪಿ ಗೋಪಾಲ್ ಮತ್ತು ಪೀಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ನಡೆದ ತಕ್ಷಣವೇ ಅಲರ್ಟ್ ಆಗಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಗಣೇಶ ವಿಸರ್ಜನೆ ಕಾರ್ಯಕ್ರಮದ ವೇಳೆ ಉಂಟಾದ ತಕ್ಷಣದ ಜಗಳ ಅಥವಾ ಹಳೇ ವೈಷಮ್ಯ ಕೊಲೆಗೆ ಕಾರಣ ಎನ್ನಲಾಗಿದ್ದು, ಇದರ ಆಧಾರದ ಮೇಲೆ ಪೊಲೀಸರು ಕೆಲ ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸ್ಥಳೀಯರ ಮಾಹಿತಿಯನ್ನು ಆಧರಿಸಿ ಮುಖ್ಯ ಆರೋಪಿಗಳಿಗಾಗಿ ಬಲೆ ಬೀಸಿದ್ದು, ಶೀಘ್ರದಲ್ಲೇ ಅಧಿಕೃತ ಬಂಧನದ ಸಂಪೂರ್ಣ ವಿವರಗಳನ್ನು ಪ್ರಕಟಿಸಲಿದ್ದಾರೆ.


