ಶಿವಮೊಗ್ಗ : ಪಕ್ಷದ ಹಿರಿಯರ ಬಗ್ಗೆ ಗೌರವವಿದೆ,ನನ್ನಿಂದಾದ ತಪ್ಪಿಗೆ ಕ್ಷಮೆ ಯಾಚಿಸುತ್ತೇನೆ : ಸೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು ಈ ಹಿಂದಿನ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ನ ಕೆಲವು ಹಿರಿಯ ಮುಖಂಡರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ, ನನಗೆ ಹಿರಿಯ ನಾಯಕರ ಬಗ್ಗೆ ವೈಯಕ್ತಿಕ ಗೌರವವಿದ್ದು, ಸಂಬೋಧನೆಯಲ್ಲಿ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ರಿಂದ ಶೋಕಾಸ್ ನೋಟಿಸ್ ಬಂದಿರುವ ಮಾಹಿತಿ ಇದ್ದು, ಬುಧವಾರ ತೆರಳಿ ಸಮಜಾಯಿಷಿ ನೀಡುವುದಾಗಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಂದರೇಶ್, ಪತ್ರಕರ್ತರ ಮನವಿಯ ಮೇರೆಗೆ ಮೊನ್ನೆ ಸುದ್ದಿಗೋಷ್ಠಿ ನಡೆಸಿ ಕೆಲವು ವಿಚಾರಗಳ ಕುರಿತು ಮಾತನಾಡಲಾಗಿತ್ತು. ಆ ಮಾತುಗಳು ಆನ್ಲೈನ್ನಲ್ಲಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸ್ಪಷ್ಟನೆ ನೀಡಲು ಈ ಸುದ್ದಿಗೋಷ್ಠಿ ಕರೆದಿರುವುದಾಗಿ ಹೇಳಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡರ ಕುರಿತು ಏಕವಚನದಲ್ಲಿ ಮಾತನಾಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಇಬ್ಬರೂ ಹಿರಿಯರು ಹಾಗೂ ರಾಜಕೀಯದಲ್ಲಿ ಉತ್ತಮ ಹೆಸರಿರುವವರು. ಅವರ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ ಎಂದರು.
“ಕಿಮ್ಮನೆ ರತ್ನಾಕರ್ ಅವರು ಮಾಜಿ ಸಚಿವರು. ಅವರ ಬಗ್ಗೆ ನನಗೆ ವೈಯಕ್ತಿಕ ಗೌರವವಿದೆ. ಆದರೆ ಮಾತನಾಡುವ ಸಂದರ್ಭದಲ್ಲಿ ಏಕವಚನ ಬಳಕೆಯಾಗಿದೆ. ಇದರಿಂದ ಅವರಿಗೆ ಮನಸ್ಸಿಗೆ ಬೇಸರವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.

